ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಮತ್ತು ರೋಟರಿ ಶಿವಮೊಗ್ಗ ಮಿಡ್ ಟೌನ್ ಶಿವಮೊಗ್ಗ ಇವರ ಸಹಯೋಗದಲ್ಲಿ 248ನೇ ತಿಂಗಳ ‘ಸಾಹಿತ್ಯ ಹುಣ್ಣಿಮೆ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 28 ಮಾರ್ಚ್ 2026ರಂದು ಸಂಜೆ 6-00 ಗಂಟೆಗೆ ಶಿವಮೊಗ್ಗ ವಿನಾಯಕ ನಗರ ರೋಟರಿ ಕ್ಲಬ್ ರಕ್ತ ನಿಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಹರ್ಷ ಬಿ. ಕಾಮತ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರಾವತಿ ಲಕ್ಷ್ಮಣ ರಾವ್ ಮತ್ತು ತಂಡದವರಿಂದ ಚೌಡಿಕೆ ಪದ ಜನಪದ ಸಂಭ್ರಮ, ಶಿವಮೊಗ್ಗದ ಎಸ್. ನಾರಾಯಣ, ಶ್ರೀಮತಿ ಯಶಸ್ವಿನಿ, ಸಂದೇಶ್ ಇವರಿಂದ ಹಾಡುಗಾರಿಕೆ, ಡಾ. ನಾಗೇಂದ್ರ ಆಚಾರ್ಯ ಇವರಿಂದ ಕಥೆ ಮತ್ತು ಪಿ.ಕೆ. ಸತೀಶ್ ಕವನ ವಾಚನ ಮತ್ತು ಡಾ. ವಿನಯ ಶ್ರೀನಿವಾಸ ಇವರಿಂದ ಹನಿಗವನ ಪ್ರಸ್ತುತಗೊಳ್ಳಲಿದೆ.

