ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 14 ಡಿಸೆಂಬರ್ 2025ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಭಾಷಾಂತರ ಸ್ಪರ್ಧೆ (ಕನ್ನಡದಿಂದ ಬ್ಯಾರಿಗೆ ಅಥವಾ ಬ್ಯಾರಿಯಿಂದ ಕನ್ನಡಕ್ಕೆ) ಮತ್ತು ಪದವಿ ವಿದ್ಯಾರ್ಥಿಗ-ಳಿಗೆ ವಿಷಯಾಧಾರಿತ ಭಾಷಣ ಸ್ಪರ್ಧೆ ಏರ್ಪಡಿಸಿದೆ.
ಸ್ಪರ್ಧೆಯ ವಿಜೇತರಿಗೆ ಕ್ರಮವಾಗಿ ರೂ.3000/-, ರೂ.2,000 ಮತ್ತು ರೂ.1,000 ಮೊದಲ ಮೂರು ನಗದು ಬಹುಮಾನ ನಿಗದಿಪಡಿಸಲಾಗಿದೆ. ಭಾಗವಹಿಸುವ ಎಲ್ಲರಿಗೂ ಅಕಾಡೆಮಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧೆಯು ದಿನಾಂಕ 13 ಡಿಸೆಂಬರ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಸೂರಲ್ಪಾಡಿ ಮಸೀದಿ ಬಳಿಯ ಅಲ್ ಖೈರ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಭಾಷಾಂತರಕ್ಕೆ 150 ಪದಗಳ ಬರಹಕ್ಕೆ 30 ನಿಮಿಷ ಕಾಲಾವಕಾಶ ನೀಡಲಾಗುವುದು. ಭಾಷಣಕ್ಕೆ ನೀಡಲಾಗುವ ವಿಷಯಗಳನ್ನು ಆಯ್ಕೆ ಮಾಡಿ, ತಯಾರಿಗೆ 30 ನಿಮಿಷ ಮತ್ತು ಭಾಷಣಕ್ಕೆ 5 ನಿಮಿಷ ಕಾಲಾವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ಸಲೀಂ ಹಂಡೇಲ್ ಮೊ. ಸಂ. 99021 94315 ಅಥವಾ ಖಲಂದರ್ ಬೀವಿ ಮೊ. ಸಂ. 81978 79889 ಇವರನ್ನು ದಿನಾಂಕ 10 ಡಿಸೆಂಬರ್ 2025ರ ಒಳಗಾಗಿ ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
