ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ವತಿಯಿಂದ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹವನ್ನು ದಿನಾಂಕ 07ರಿಂದ 13 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ 5-00 ಗಂಟೆಗೆ ಮಂಗಳೂರಿನ ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 07 ಡಿಸೆಂಬರ್ 2025ರಂದು ಗರೋಡಿ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್ ಗರೋಡಿ ಸಪ್ತಾಹವನ್ನು ಉದ್ಘಾಟಿಸಲಿದ್ದು, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ ಅತಿಥಿಯಾಗಿ ಭಾಗವಹಿಸುವರು. ದಿನಾಂಕ 13 ಡಿಸೆಂಬರ್ 2025ರಂದು ಸಮಾರೋಪ ಸಮಾರಂಭದಲ್ಲಿ ದಾಮೋದರ ನಿಸರ್ಗ ಇವರ ಒಡನಾಡಿ ಜೆ.ಎ. ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು. ತುಳುಕೂಟ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ನಾರಾಯಣ ಬಿ.ಡಿ. ಅತಿಥಿಯಾಗಿ ಪಾಲ್ಗೊಳ್ಳುವರು.
ದಿನಾಂಕ 07 ಡಿಸೆಂಬರ್ 2025ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರಿಂದ ‘ಪಗರಿದ ಸಂಕ’, ದಿನಾಂಕ 08 ಡಿಸೆಂಬರ್ 2025ರಂದು ಶ್ರೀ ವಾಗೀಶ್ವರಿ ಕಲಾವರ್ಧಕ ಯಕ್ಷಗಾನ ಮಂಡಳಿ ರಥಬೀದಿ ಮಂಗಳೂರು ಇವರಿಂದ ‘ತುಳುನಾಡ ಬಲ್ಯೇಂದ್ರೆ’, ದಿನಾಂಕ 09 ಡಿಸೆಂಬರ್ 2025ರಂದು ಯಕ್ಷಕಲಾ ಸುರತ್ಕಲ್ ಇವರಿಂದ ‘ಬೀರೆ ಸುಧನ್ವೆ’, ದಿನಾಂಕ 10 ಡಿಸೆಂಬರ್ 2025ರಂದು ಯಕ್ಷ ಮಂಜುಳಾ ಮಹಿಳಾ ತಾಳಮದ್ದಳ ಬಳಗ ಕದ್ರಿ ಇವರಿಂದ ‘ಯಕ್ಷಮಣಿ’, ದಿನಾಂಕ 11 ಡಿಸೆಂಬರ್ 2025ರಂದು ಸರಯೂ ಯಕ್ಷವೃಂದ ಕೋಡಿಕಲ್ ಇವರಿಂದ ‘ಕಾನದ ಕೌಶಿಕೆ’, ದಿನಾಂಕ 12 ಡಿಸೆಂಬರ್ 2025ರಂದು ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇವರಿಂದ ‘ಕೋಟಿ ಚೆನ್ನಯ’ ತಾಳಮದ್ದಳೆ ನಡೆಯಲಿದೆ. ದಿನಾಂಕ 13 ಡಿಸೆಂಬರ್ 2025ರಂದು ಸರಯೂ ಯಕ್ಷ ಬಳಗದವರಿಂದ ‘ಮಾಯಕೊದ ಬಿನ್ನೆದಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

