ಸೊರಬ : ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಶಿವಮೊಗ್ಗ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೊರಬ ಇವರ ಸಂಯುಕ್ತಾಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ’ವನ್ನು ದಿನಾಂಕ 23 ಮೇ 2026ರಂದು ಬೆಳಗ್ಗೆ 10-00 ಗಂಟೆಗೆ ಸೊರಬ ಹೊಸಪೇಟೆ ಬಡಾವಣೆ ಬಸವೇಶ್ವರ ನಗರದಲ್ಲಿರುವ ಸಾಹಿತಿ ಡಾ. ಉಮೇಶ್ ಭದ್ರಾಪುರ ಇವರ ಶ್ರಮ ಸಂಸ್ಕೃತಿ ನಿವಾಸದಲ್ಲಿ ಆಯೋಜಿಸಲಾಗಿದೆ.
ಸೊರಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಉಮೇಶ್ ಭದ್ರಾಪುರ ಇವರ ಅಧ್ಯಕ್ಷತೆ ನಡೆಯುವ ಈ ಕಾರ್ಯಕ್ರಮವನ್ನು ಸಂಚಾಲಕರಾದ ಡಿ. ಮಂಜುನಾಥ ಇವರು ಉದ್ಘಾಟನೆ ಮಾಡಲಿದ್ದಾರೆ. ಶಿವಮೊಗ್ಗ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾದ ಶಂಕರ್ ಶೇಟ್ ಇವರು ಗ್ರಂಥಾಲಯಗಳ ಮಹತ್ವ ಇದರ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ.

