Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ ಯಶಸ್ವಿಯಾಗಿ ಜರುಗಿದ ‘ಅಭಿರಾಮ ಗಾನ ಹಬ್ಬ -2026’
    Awards

    ಉಡುಪಿಯಲ್ಲಿ ಯಶಸ್ವಿಯಾಗಿ ಜರುಗಿದ ‘ಅಭಿರಾಮ ಗಾನ ಹಬ್ಬ -2026’

    April 2, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : “ನಾನೊಬ್ಬ ಭಾವುಕ ಕಲಾವಿದ. ಭಾವನಾರಹಿತ ಸಂಗೀತ ಶುಷ್ಕ! ಸಂಗೀತಗಾರರೆಲ್ಲಾ ಭಾವುಕರಾಗಿರಲೇಬೇಕು..! ಭಾವುಕತೆಯಿಂದ ಭಕ್ತಿ ಹೊಮ್ಮುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭಕ್ತಿಪೂರಿತ ಗಾಯನವೇ ವಿಶಿಷ್ಟ ಮೆರುಗು ನೀಡುವುದಲ್ಲದೆ ಮುಕ್ತಿಗೂ ಸಾಧನವಾಗುತ್ತದೆ ! ಭಕ್ತಿರಹಿತ ಸಂಗೀತ ಭಗವಾನ್‌ಶ್ರೀಕೃಷ್ಣ ಸ್ವೀಕರಿಸಲಾರ” ಎಂದು ರಾಜ್ಯದ ಅಗ್ರಮಾನ್ಯ ಸಂಗೀತಗಾರ – ಗುರು ಗಾನಕಲಾಭೂಷಣ ಡಾ. ಆರ್.ಕೆ. ಪದ್ಮನಾಭ ದಾಸರು ಉದ್ಘೋಷಿಸಿದರು.

    ಉಡುಪಿಯ ಗುಂಡಿಬೈಲಿನ ಅಭಿರಾಮಧಾಮ ಸಂಕೀರ್ತನ ಮಂದಿರದಲ್ಲಿ ದಿನಾಂಕ 27, 28 29 ಮಾರ್ಚ್‌ 2026ರಂದು ಮೂರು ದಿನಗಳ ಕಾಲ ಜರುಗಿದ ‘ಅಭಿರಾಮ ಗಾನ ಹಬ್ಬ- 2026’ ಯುವಸಂಗೀತ ಸಮ್ಮೇಳನದ ದಿಗ್ದರ್ಶಿ ಆರ್ಕೆಪಿ ಗುರುಗಳಿಗೆ ‘ಅಭಿರಾಮ ಗಾನ-ಗುರು ಶ್ರೇಷ್ಠ’ರೆಂದು ತಮ್ಮ ಸಂಗೀತ ಯಾತ್ರೆಯ 126ನೇ ಪ್ರಶಸ್ತಿಯಿತ್ತು ಗೌರವಿಸಲಾಯ್ತು. ಈ ಸಂಬಂಧ ಸ್ವರ ಸಾಮ್ರಾಟ್‌ವಿದ್ವಾನ್. ಅಭಿರಾಮ್‌ಭರತವಂಶಿ ರಾಜ್ಯ ಪುರಸ್ಕಾರವನ್ನು, ರಾರಾಜಿಸುವ ಉಡುಪಿಯ ಕಡೆಗೋಲು ಕೃಷ್ಣನ ಸ್ಮರಣಿಕೆಯನ್ನು, ಅರ್ಧಲಕ್ಷ ನಗದು, ಬಹು ಅರ್ಥವತ್ತಾದ ಭಿನ್ನವತ್ತಳೆಯನ್ನು ಪಠಿಸಿ ನೇರಳೆ ಬಣ್ಣದ ಹೊಳೆವ ಜರತಾರಿ ಶಲ್ಯ-ಪೇಟಗಳಲ್ಲಿ ಕಂಗೊಳಿಸಿದ ನಮ್ಮ ಸಂಗೀತದ ಮೇರು ವ್ಯಕ್ತಿತ್ವ ಸಂಗೀತ ವಿದ್ಯಾನಿಧಿ ಡಾ. ಆರ್ಕೆಪಿಯವರು ಮನದಾಳದ ಮಾತುಗಳಿಗೆ ದನಿಯಾದರು.

    ಅವರ ಪರಮಶಿಷ್ಯ ಅಭಿರಾಮ ಭರತವಂಶಿ (24) ಸರಿಸುಮಾರು 14 ವರ್ಷಗಳ ಕಾಲ ಸಂಗೀತದ ಹಲವಾರು ಸೋಪಾನಗಳನ್ನೇರಿ ದೂರದ ಪೂನಾದಲ್ಲಿ 2020ರಲ್ಲಿ ನಡೆದ ಜಾಗತಿಕ ಮಟ್ಟದ ಭಜನ್‌ ಸಾಮ್ರಾಟ್ ಸ್ಫರ್ಧೆಯಲ್ಲಿ ವಿಜಯಿಯಾಗಿ ಸ್ವರಸಾಮ್ರಾಟ್‌ ಬಿರುದು ಸಂಪಾದಿಸಿ 2021ರಲ್ಲಿ ಕೋವಿಡ್‌ನ್ಯೂಮೋನಿಯಕ್ಕೆ ಬಲಿಯಾಗಿ ಪರಲೋಕ ಯಾತ್ರೆಗೈದ 5 ವರ್ಷಗಳು ಸಂದ ಸಂಸ್ಮರಣೆಗೆ ಈ ವಿಶಿಷ್ಟ ಯುವ ಸಂಗೀತ ಸಮ್ಮೇಳನ ಆಯೋಜಿಸಲಾಗಿತ್ತು. ತಮ್ಮ ಸುಪುತ್ರನನ್ನು ಕಳೆದುಕೊಂಡ ಬಳಿಕ ತಮ್ಮೆಲ್ಲಾ ಆಸ್ತಿ-ಪಾಸ್ತಿಗಳ ಮಾರಿ ನವಕೋಟಿ ನಾರಾಯಣ 550 ವರ್ಷಗಳ ಹಿಂದೆ ಸಂತ ಪುರಂದರದಾಸರಾದಂತೆ ಇಂದಿನ ನಮ್ಮ ಕಣ್ಣೆದುರಿಗಿನ ಅಭಿನವ ಪುರಂದರದಾಸರಂತೆ ನಮ್ಮೆಲ್ಲರಿಗೆ ಭಾಸವಾಗುತ್ತಿದ್ದಾರೆ. ಅಭಿರಾಮ ಧಾಮದ ಸಂಸ್ಥಾಪಕ ಡಾ. ಸುದರ್ಶನ ಭಾರತೀಯ ಎಂದು ಆರ್ಕೆಪಿ ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಗುರು ಪದ್ಮನಾಭದಾಸರು ಪ್ರಕಟಿಸಿ ಮುಂದಿನ ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿರುವ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರೂ, ಮಹಾನ್‌ವಾಗ್ಗೇಯಕಾರರೂ ಆದ ಶ್ರೀ ಮುತ್ತುಸ್ವಾಮಿ ದೀಕ್ಷಿತರ 200 ಕೃತಿಗಳ ಅಪೂರ್ವ ಉದ್ಗ್ರಂಥವನ್ನು ವಿದ್ವಾನ್ ಅಭಿರಾಮ ಭರತವಂಶಿಗೆ ಸಮರ್ಪಣೆ ಮಾಡುವ ಘೋಷಣೆಯನ್ನೂ ಮಾಡಿ ನೆರೆದ ಸಭಿಕರ ಹರ್ಷೋದ್ಗಾರಕ್ಕೆ ಕಾರಣರಾದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ರಾಗ-ಧನ ಸಂಸ್ಥೆಯ ಮುಖ್ಯಸ್ಥರಾದ, ಮಣಿಪಾಲದ ಕಸ್ತೂರಭಾ ಮೆಡಿಕಲ್‌ ಕಾಲೇಜಿನ ಮಕ್ಕಳ ತಜ್ಞ ಡಾ . ಶ್ರೀ ಕಿರಣ್ ಹೆಬ್ಬಾರ್ ಮಾತನಾಡುತ್ತಾ “ಪದ್ಮನಾಭ ದಾಸರಂಥಾ ಮಹಾನ್‌ ಸಾಧಕರು ತನ್ನ ಶಿಷ್ಯೋತ್ತಮನ ಸ್ಮರಣಾರ್ಥ ಆರಂಭಿಸಿರುವ ʼಅಭಿರಾಮ ಗಾನ ಹಬ್ಬʼ ಪ್ರತೀ ವರ್ಷ ನಡೆಯಲಿ” ಎಂದು ಹಾರೈಸಿದರು. ಮೂರು ದಿನಗಳ ಅಭಿರಾಮ ಗಾನ ಹಬ್ಬದಲ್ಲಿ ಮೊದಲ ದಿನ ಶ್ರೀ ವಾದಿರಾಜ ಗುರುಸಾರ್ವಭೌಮರ ಏಳು ಕೃತಿಗಳನ್ನು ಗುರುಗಳು 50ಕ್ಕೂ ಮೀರಿದ ಸಂಗೀತಾಭಿಮಾನಿಗಳಿಗೆ ಕಲಿಸಿಕೊಟ್ಟರು. ಆನಂತರದ ಎರಡು ದಿನಗಳಲ್ಲಿ 21 ಯುವಸಂಗೀತಗಾರರ ಸಮ್ಮೇಳನೋಪಾದಿಯಲ್ಲಿ ಪ್ರಸ್ತುತಿಗಳು ನೂರಾರು ರಸಿಕರನ್ನು ರಂಜಿಸುತ್ತಾ ಅನಿರ್ವಚನೀಯವಾದ ಆನಂದವನ್ನು ನೀಡಿದವೆಂದು ಸಭಿಕರ ಅಂಬೋಣ! ಕೊನೆಯಲ್ಲಿ ಮಹಾಗುರುಗಳು ನಡೆಸಿಕೊಟ್ಟ ವಿಶೇಷ ಸಂವಾದದಲ್ಲಿ ಹತ್ತಾರು ಸಭಿಕರು ತಮ್ಮ ತಮ್ಮ ಪ್ರಶ್ನೆಗಳಿಗೆ ಪರಿಹಾರ ಪಡೆದುಕೊಂಡರು. ಒಟ್ಟಾರೆ ಈ ಬಾರಿಯ ಪ್ರಪ್ರಥಮ ‘ಅಭಿರಾಮ ಗಾನ ಹಬ್ಬ’ ಬಹು ರೂಪಗಳಲ್ಲಿ ಯಶಸ್ವಿಯಾಯಿತು.

    award baikady felicitation Music roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ‘ಅಷ್ಠಮ ಸಂಭ್ರಮ’ | ಏಪ್ರಿಲ್ 02
    Next Article ವಿ.ಎಂ. ಇನಾಂದಾರ್ ಪ್ರಶಸ್ತಿಗೆ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿ ಆಯ್ಕೆ
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.