ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಪ್ರಸ್ತುತ ಪಡಿಸುವ ವಾರಾಂತ್ಯ ‘ಅಭಿನಯ ಕಾರ್ಯಾಗಾರ’ವು ದಿನಾಂಕ 13, 14, 20, 21, 27, 28 ಜೂನ್ 4 ಮತ್ತು 5 ಜುಲೈ 2026ರಂದು ಪ್ರತಿದಿನ ಬೆಳಿಗ್ಗೆ 11-00ರಿಂದ 2-00 ಗಂಟೆ ತನಕ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವ್ಯೋಮ ಆರ್ಟ್ ಸ್ಪೇಸ್ ನಲ್ಲಿ ನಡೆಯಲಿದೆ. ಇದು ಸಂಸ್ಥೆ ಪ್ರಸ್ತುತ ಪಡಿಸುವ 42ನೇ ಬ್ಯಾಚ್ ಆಗಿದ್ದು, ತರಗತಿಗಳು ಪ್ರತಿ ಶನಿವಾರ ಭಾನುವಾರ ನಡೆಯುತ್ತವೆ. ಕುಮಾರಿ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರುಗಳು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 8050157443 ಮತ್ತು 9448276776 ಸಂಖ್ಯೆಯನ್ನು ಸಂಪರ್ಕಿಸಿರಿ.

