ಬೆಳಗಾವಿ : ರಂಗಸಂಪದ (ರಿ.) ಬೆಳಗಾವಿ ಇವರ ಆಶ್ರಯದಲ್ಲಿ ಅಧಿಕ ನಾಟಕೋತ್ಸವ ಕಾರ್ಯಕ್ರಮವನ್ನು ದಿನಾಂಕ 30 ಮತ್ತು 31 ಮೇ 2026ರವರೆಗೆ ಬೆಳಗಾವಿಯ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಧಾರವಾಡದ ರಂಗಾಯಣದ ನಿರ್ದೇಶಕರಾದ ಝಕೀರ ನದಾಫ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
ದಿನಾಂಕ 30 ಮೇ 2026ರಂದು ರಂಗಸಂಪದ ಬೆಳಗಾವಿಯ ತಂಡದ ಪೌರಾಣಿಕ ನಾಟಕ ‘ಭಾನುಮತಿ’ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ಹಾಗೂ ದಿನಾಂಕ 31 ಮೇ 2026ರಂದು ಬೆಂಗಳೂರಿನ ರಂಗ ಬದುಕು ಟ್ರಸ್ಟ್ ತಂಡದವರಿಂದ ಡಾ. ಬೇಲೂರು ರಘುನಂದನ ಇವರ ನಿರ್ದೇಶನದಲ್ಲಿ ‘ಅಮೀರಬಾಯಿ ಕರ್ನಾಟಕಿ’ ನಾಟಕ ಪ್ರದರ್ಶನಗೊಳ್ಳಲಿದೆ.

