Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    February 5, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಳಿಕೆ ರಾಮಯ್ಯ ರೈ ಸಂಸ್ಮರಣೆ – ಸಹಾಯ ನಿಧಿ
    Awards

    ಅಳಿಕೆ ರಾಮಯ್ಯ ರೈ ಸಂಸ್ಮರಣೆ – ಸಹಾಯ ನಿಧಿ

    May 2, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ ಬಿ.ಕೆ.ಚೆನ್ನಪ್ಪ ಗೌಡರ ನಿವಾಸದಲ್ಲಿ ದಿನಾಂಕ 28.04.2023 ರಂದು ಜರಗಿದ ದಿ. ಅಳಿಕೆ ರಾಮಯ್ಯ ರೈ ಸ್ಮೃತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಅರ್ಥಧಾರಿ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಒಂದು ಕಾಲಘಟ್ಟದಲ್ಲಿ ತನ್ನ ನಟನಾ ಕೌಶಲ್ಯ ಮತ್ತು ವಿಶಿಷ್ಟ ಹೆಜ್ಜೆಗಾರಿಕೆಯಿಂದ ತೆಂಕುತಿಟ್ಟು ಯಕ್ಷರಂಗವನ್ನು ಆಳಿದ ಅಳಿಕೆ ರಾಮಯ್ಯ ರೈ ಭವಿಷ್ಯದ ಕಲಾವಿದರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ನಿವೃತ್ತ ಯಕ್ಷಗಾನ ಕಲಾವಿದರ ಮನೆಗೆ ತೆರಳಿ ನೀಡುವ ಸಹಾಯ ನಿಧಿಯು ಒಂದು ಸಾರ್ಥಕ ಸ್ಮೃತಿ ಗೌರವವಾಗಿದೆ’ ಎಂದು ಹೇಳಿದ್ದಾರೆ.

    ಬೆಂಗಳೂರಿನ ದಿ. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ರೂ.20,000/- ಯಕ್ಷ ಸಹಾಯ ನಿಧಿಯನ್ನು 2022- 23ನೇ ಸಾಲಿಗೆ ಇರಾ ಗ್ರಾಮದ ಕೆಂಜಿಲ ಪದವಿನಲ್ಲಿರುವ ಬಿ.ಕೆ.ಚೆನ್ನಪ್ಪ ಗೌಡರಿಗೆ ಗೃಹ ಸಂಮಾನದೊಂದಿಗೆ ಸಮರ್ಪಿಸಲಾಯಿತು. ಮುಂಬಯಿ ಉದ್ಯಮಿ, ಲೇಖಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.

    ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಸಲಹಾ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ ‘ಪ್ರಸ್ತುತ 92ರ ಹರೆಯದ ಚೆನ್ನಪ್ಪ ಗೌಡರು ತೆಂಕು ಹಾಗೂ ಬಡಗು ತಿಟ್ಟಿನ ಒಟ್ಟು ಹನ್ನೊಂದು ಮೇಳಗಳಲ್ಲಿ 70 ತಿರುಗಾಟಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ. ಯಕ್ಷಗಾನದ ಎಲ್ಲಾ ಬಗೆಯ ವೇಷಗಳನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸಿದ ಅವರೊಬ್ಬ ದಶಾವತಾರಿ’ ಎಂದರು.

    ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಮತ್ತು ಸಲಹಾ ಸಮಿತಿ ಸದಸ್ಯ ಉಬರಡ್ಕ ಉಮೇಶ ಶೆಟ್ಟಿ ಸ್ವಾಗತಿಸಿದರು. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ವಂದಿಸಿದರು. ಟ್ರಸ್ಟ್ ನಿರ್ದೇಶಕರಾದ ಮಹಾಬಲ ರೈ ಬಜನಿಗುತ್ತು ಮತ್ತು ಚೆನ್ನಪ್ಪ ಗೌಡರ ಪುತ್ರಿ ರಕ್ಷಿತಾ ಈ ಸಂದರ್ಭದಲ್ಲಿ ಉಪಸಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಲ್ಲಿ “ಸುಧನ್ವ ಮೋಕ್ಷ”
    Next Article ರಂಗಭೂಮಿ ಉಡುಪಿಯ ಹೆಸರಾಂತ ಹಾಸ್ಯ ಕಲಾವಿದ ಶ್ರೀ ಯು.ಎಂ. ಅಸ್ಲಾಂ ಇನ್ನಿಲ್ಲ
    roovari

    Add Comment Cancel Reply


    Related Posts

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    February 5, 2026

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026

    ಆನೆಗುಡ್ಡೆ ದೇಗುಲದಲ್ಲಿ ಪ್ರಸಿದ್ಧ ಅರ್ಥದಾರಿಗಳಿಂದ ‘ಅರ್ಥಾಂಕುರ’ | ಫೆಬ್ರವರಿ 05

    February 4, 2026

    ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭ | ಫೆಬ್ರುವರಿ 07

    February 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.