ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ಮತ್ತು ಪರಿಜ್ಞಾನ ಪದವಿಪೂರ್ವ ಕಾಲೇಜು ಸೋಮೇಶ್ವರ ಇವರ ಸಹಯೋಗದಲ್ಲಿ ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ ಮತ್ತು ಕಾವ್ಯಗಾಯನ ‘ದಿ. ಅಮೃತ ಸೋಮೇಶ್ವರ ಸಂಸ್ಮರಣಾ’ ಕಾರ್ಯಕ್ರಮವನ್ನು ದಿನಾಂಕ 27 ಜೂನ್ 2026ರಂದು ಬೆಳಿಗ್ಗೆ 9-30 ಗಂಟೆಗೆ ಸೋಮೇಶ್ವರ ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ವಿಶ್ರಾಂತ ಉಪಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 9-30 ಗಂಟೆಗೆ ಪದವಿಪೂರ್ವ ವಿದ್ಯಾರ್ಥಿಗಳಿಂದ ಭಾಷಣ ಹಾಗೂ 11-30 ಗಂಟೆಗೆ ಬಹುಭಾಷಾ ಕವಿಗೋಷ್ಠಿ ಮತ್ತು ಕಾವ್ಯಗಾಯನ ನಡೆಯಲಿದೆ.

