Subscribe to Updates

    Get the latest creative news from FooBar about art, design and business.

    What's Hot

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಸುಳ್ಳದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಿಚಾರಗೋಷ್ಠಿ

    February 26, 2026

    ಪುಸ್ತಕ ವಿಮರ್ಶೆ | ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡಿಸುವ ‘ಕಿರಿಯರ ಸಚಿತ್ರ ರಾಮಾಯಣ’

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಯಕ್ಷದೇಗುಲ ಕಾಂತಾವರದ ‘ಯಕ್ಷೋಲ್ಲಾಸ 2024’ | ಜುಲೈ 21
    Yakshagana

    ಶ್ರೀ ಯಕ್ಷದೇಗುಲ ಕಾಂತಾವರದ ‘ಯಕ್ಷೋಲ್ಲಾಸ 2024’ | ಜುಲೈ 21

    July 20, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email





    ಕಾಂತಾವರ : ಶ್ರೀ ಯಕ್ಷದೇಗುಲ ಕಾಂತಾವರ ಇದರ ಇಪ್ಪತ್ತರಡನೇ ವರ್ಷದ ‘ಯಕ್ಷೋಲ್ಲಾಸ -2024’ ನಿರಂತರ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ ಕಾರ್ಯಕ್ರಮವು ದಿನಾಂಕ 21-07-2024ರಂದು ಬೆಳಿಗ್ಗೆ 10-00ರಿಂದ ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಲಿದೆ.

    ಕಾಂತಾವರ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ರಾಜೇಶ್ ಕೋಟ್ಯಾನ್ ಇವರ ಉಪಸ್ಥಿತಿಯಲ್ಲಿ ಬಾರಾಡಿಬೀಡು ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ‘ಯಕ್ಷೋಲ್ಲಾಸ’ ಉದ್ಘಾಟನೆ ಮಾಡಿ ಶುಭಾಶಂಸನೆಗೈಯಲಿದ್ದಾರೆ. ನಂತರ ಪ್ರಸಿದ್ಧ ಕಲಾವಿದರಿಂದ ‘ವಿಶ್ವಾಮಿತ್ರ ಮೇನಕೆ’ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.

    ಮಧ್ಯಾಹ್ನ 2-00 ಗಂಟೆಗೆ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ಕಲಾವಿರಾದ ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಇವರಿಗೆ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ಸುರತ್ಕಲ್ ಮೇಳದ ನಿವೃತ್ತ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರಿಗೆ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಲಾಗುವುದು.

    ಉಜಿರೆ ಅಶೋಕ ಭಟ್ ಮತ್ತು ಮೂಡಬಿದ್ರಿ ಶಾಂತಾರಾಮ ಕುಡ್ವಾರವರು ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಲಿದ್ದು, ಮಂಗಳೂರು ವಿಶ್ವ ವಿದ್ಯಾನಿಲಯ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಾಧವ ಎಂ.ಕೆ. ಮತ್ತು ಕರ್ಣಾಟಕ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀ ಬಿ. ಚಂದ್ರಶೇಖರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಡಾ. ಎಂ. ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್, ವಾದಿರಾಜ ಕಲ್ಲೂರಾಯ, ಸುಬ್ರಹ್ಮಣ್ಯ ಬೈಪಡಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ಚಂದ್ರಶೇಖರ ಭಟ್ ಕೊಂಕಣಾಜೆ, ಬೆಳುವಾಯಿ ಎಂ. ದೇವಾನಂದ ಭಟ್ ಮುಂತಾದ ಖ್ಯಾತ ಕಲಾವಿದರಿಂದ ‘ಕರ್ಣಾವಸಾನ’ ತಾಳಮದ್ದಳೆ ಕೂಟ ಮತ್ತು ಕಾಂತಾವರದ ಬಾಲ ಕಲಾವಿದರಿಂದ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಬಯಲಾಟ ಜರಗಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯಾಂತರಂಗ 114ನೇ ಸರಣಿಯಲ್ಲಿ ಬೆಂಗಳೂರಿನ ಅಪೇಕ್ಷಾ ಕಾಮತ್ ಇವರ ಅಭೂತಪೂರ್ವ ಭರತನಾಟ್ಯ ಪ್ರಸ್ತುತಿ
    Next Article ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಹಾಗೂ ‘ಪ್ರತಿಬಿಂಬಗಳು’ ಚಿತ್ರ ಕಲಾಪ್ರದರ್ಶನ
    roovari

    Add Comment Cancel Reply


    Related Posts

    ಮಂಗಳೂರು ವಿ.ವಿ.ಯ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರಕಟ

    February 26, 2026

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08

    February 25, 2026

    ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ತಾಳಮದ್ದಳೆ ಕೂಟ

    February 25, 2026

    ಯಶಸ್ವೀ ಕಲಾವೃಂದದ ವಾರ್ಷಿಕೋತ್ಸವ ಸಮಾರಂಭ

    February 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.