ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು (ಕಲೇಸಂ) 2025ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಇವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
‘ಶ್ರೀಮತಿ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ಗೆ (ಶಿಕ್ಷಕಿ ಹಾಗೂ ಲೇಖಕಿ) ದಾವಣಗೆರೆಯ ಬಿ.ಟಿ. ಗೀತಾ ಮಂಜು, ‘ಶ್ರೀಮತಿ ಶ್ರೀಲೇಖಾ’ ಪ್ರಶಸ್ತಿಗೆ (ಅನುವಾದ) ಭೂಮಿಕಾ ಆರ್. ಇವರ ‘ಜೊರಾಮಿ’ ಕೃತಿ, ‘ಶ್ರೀಮತಿ ಭಾಗ್ಯ ನಂಜಪ್ಪ’ ಪ್ರಶಸ್ತಿಗೆ (ವಿಜ್ಞಾನ ಸಾಹಿತ್ಯ) ಸುಕನ್ಯಾ ಸೊನಗಹಳ್ಳಿ ಅವರ ‘ಕಬ್ಬಿನ ಸಿಹಿ ವರ್ಧಿಸಿದ ಅಮ್ಮ- ಡಾ. ಜಾನಕಿ ಅಮ್ಮಾಳ್’ ಕೃತಿ, ‘ಶ್ರೀಮತಿ ಜಿ.ವಿ. ನಿರ್ಮಲ’ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ವೀಣಾ ಮುರುಳೀಧರ್ ಇವರ ‘ಚನ್ನೆ ಮಣೆಯ ಜಗತ್ತು’ ಕೃತಿ ಆಯ್ಕೆಯಾಗಿದೆ.
‘ಶ್ರೀಮತಿ ಉಷಾ ಪಿ. ರೈ’ ಪ್ರಶಸ್ತಿಗೆ (ಕಾವ್ಯ) ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕೃತಿ, ‘ಶ್ರೀಪುತಿ ನಾಗರತ್ನ ಚಂದ್ರಶೇಖರ್’ ಪ್ರಶಸ್ತಿಗೆ (ಲಲಿತ ಪ್ರಬಂಧ) ಸುಚಿತ್ರಾ ಹೆಗಡೆ ಇವರ ‘ಮಿಂಚುಹುಳದ ದಾರಿ’ ಕೃತಿ, ‘ಡಾ. ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ಗೆ ಮಮತಾ ಅರಸೀಕೆರೆ ಇವರ ‘ಗಾಯಗಳಿಗೆ ವಿದಾಯ ಹೇಳಬೇಕು’ ಕೃತಿ, ‘ಶ್ರೀಮತಿ ಸಂಕಮ್ಮ ಸಂಕಣ್ಣನವರ್ ಕಾವ್ಯ ಪ್ರಶಸ್ತಿ’ಗೆ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕೃತಿ ಭಾಜನವಾಗಿದೆ.
‘ಶ್ರೀಜಯ ಕಲಕೋಟಿ ಪ್ರಶಸ್ತಿ’ಗೆ (ವಚನ ಸಾಹಿತ್ಯ) ಇಂದಿರಾ ಮೋಟೆ ಬೆನ್ನೂರ ಇವರ ‘ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು’ ಕೃತಿ, ‘ಶ್ರೀಮತಿ ಸುಶೀಲಾ ಸೋಮಶೇಖರ್’ ಪ್ರಶಸ್ತಿಗೆ (ವಚನ ಸಾಹಿತ್ಯ) ದಾಕ್ಷಾಯಣಿ ಜಯ ದೇವಪ್ಪ ಇವರ ‘ದಾಕ್ಷಾಯಣಿ ವಚನಗಳು’ ಕೃತಿ, ‘ಶ್ರೀಮತಿ ಲಕ್ಷ್ಮಿದೇವಮ್ಮ ಕಥಾ ಪ್ರಶಸ್ತಿ’ಗೆ (ಮಲ್ಲಿಕಾ ಬಸವರಾಜು) ಕುಸುಮಾ ಆಯರಹಳ್ಳಿ ಇವರ ‘ಕಪಿಲೆ ಕಂಡ ಕತೆಗಳು’ ಕೃತಿ, ‘ಶ್ರೀಮತಿ ನಿರುಪಮಾ’ ಪ್ರಶಸ್ತಿಗೆ (ಕತೆಗಳು) ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಭವ್ಯ ಅಶೋಕ್ ಸಂಪಗಾರ ಇವರ ‘ಗುಡ್ಡದ ತಿರುವು’, ಮುದ್ರಣ ಮಾಧ್ಯಮ ವಿಭಾಗದಲ್ಲಿ ದೀಪಿಕಾ ಚಾಟಿ ಇವರ ‘ಚಿಗುರಿದ ಆತ್ಮವಿಶ್ವಾಸ’ ಕೃತಿ ಆಯ್ಕೆಯಾಗಿದೆ.
‘ಶ್ರೀಮತಿ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್’ ಲೇಖಕಿ ಹಾಗೂ ಪ್ರಕಾಶಕಿ ಪ್ರಶಸ್ತಿಗೆ ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಶ್ರೀಮತಿ ತ್ರಿವೇಣಿ ದತ್ತಿ ನಿಧಿ ವಿಭಾಗದಲ್ಲಿ (ಕಥಾ ಸಂಕಲನ) ವಿಜಯಶ್ರೀ ಹಾಲಾಡಿ ಇವರ ‘ಉಮ್ಮಲ್ಲಿ ಗುಡಿಯ ಸಾಕ್ಷಿ’ ಪ್ರಥಮ, ಎಡೆಯೂರು ಪಲ್ಲವಿ ಇವರ ‘ಕುಂಡದ ಬೇರು’ ದ್ವಿತೀಯ ಹಾಗೂ ಪೂರ್ಣಿಮಾ ಭಟ್ಟ ಇವರ ‘ಕತೆ ಜಾರಿಯಲ್ಲಿರಲಿ’ ಕಥಾ ಸಂಕಲನ ತೃತೀಯ ಸ್ಥಾನ ಪಡೆದಿದೆ.
‘ಶ್ರೀಮತಿ ಕಾಕೋಳು ಸರೋಜಮ್ಮ’ ಪ್ರಶಸ್ತಿಗೆ (ಕಾದಂಬರಿ) ಪೌಜಿಯಾ ಸಲೀಂ ಇವರ ‘ಹರ್ಷರಾಗ’ ಕೃತಿ, ‘ಶ್ರೀಮತಿ ಕಮಲಾ ರಾಮಸ್ವಾಮಿ’ ಪ್ರಶಸ್ತಿಗೆ (ಪ್ರವಾಸ ಸಾಹಿತ್ಯ) ಡಿ. ಮಂಗಳಾ ಪ್ರಿಯದರ್ಶಿನಿ ಇವರ ‘ನಾ ಕಂಡ ಉಗಾಂಡ’ ಕೃತಿ, ‘ಶ್ರೀಮತಿ ನುಗ್ಗೆಹಳ್ಳಿ ಪಂಕಜ’ ಪ್ರಶಸ್ತಿಗೆ (ಹಾಸ್ಯ ಕೃತಿ) ನಳಿನಿ ಟಿ. ಭೀಮಪ್ಪ ಇವರ ‘ನಾಕೊಂದ್ಲ ನಾಕು’ ಕೃತಿ, ‘ಶ್ರೀಮತಿ ಗುಣಸಾಗರಿ ನಾಗರಾಜ್’ ಪ್ರಶಸ್ತಿಗೆ (ಮಕ್ಕಳ ಸಾಹಿತ್ಯ) ಮೀನಾ ಮೈಸೂರು ಇವರ ‘ಸೂರ್ಯನ ಸೆರೆ’ ಕೃತಿ ಆಯ್ಕೆಯಾಗಿದೆ.
‘ಶ್ರೀಮತಿ ಇಂದಿರಾ ವಾಣಿ ರಾವ್’ ಪ್ರಶಸ್ತಿಗೆ (ನಾಟಕ) ವಿನುತಾ ಹಂಚಿನಮನಿ ಇವರ ‘ಅಪರಾಜಿತೆಯರು’ ಕೃತಿ. ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ (ಕಾದಂಬರಿ ಪ್ರಕಾರ-ಸುಧಾ ಮೂರ್ತಿ ಪ್ರಾಯೋಜಿತ) ಜ.ನಾ. ತೇಜಶ್ರೀ ಇವರ ‘ಜೀವರತಿ’ ಕೃತಿ, ‘ಶ್ರೀಮತಿ ಜಯಮ್ಮ ಕರಿಯಣ್ಣ’ ಪ್ರಶಸ್ತಿಗೆ (ಸಂಶೋಧನೆ) ಲಕ್ಷ್ಮಿ ದೇವಿ ಶಾಸ್ತ್ರಿಯವರ ‘ರಾಯಚೂರು ಕೋಟೆಗೆ ನರಬಲಿ’ ಕೃತಿ ಭಾಜನವಾಗಿದೆ. ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ 09 ಏಪ್ರಿಲ್ 2026ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
