ಮಂಗಳೂರು : ತುಳು ಕೂಟ (ರಿ.) ಕುಡ್ಲದ ವತಿಯಿಂದ ಮತ್ತು ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ (ಅಪ್ರಕಟಿತ ನಾಟಕ ಕೃತಿ)ಗೆ ರಾಜೇಶ್ ಶೆಟ್ಟಿ ದೋಟ (ಒಂಜಿ ಗುತ್ತುದ ಕಥೆ ) – ಪ್ರಥಮ, ವಿಲಾಸ್ ಕುಮಾರ್ ನಿಟ್ಟೆ (ಆಯೆ ಆಣ್ ಮಗೆ) ದ್ವಿತೀಯ ಹಾಗೂ ರಮ್ಯಾ ಬಿ.ಸಿ. ರೋಡ್ (ಭಕ್ತೆ ಪ್ರಹ್ಲಾದೆ-ಪೌರಾಣಿಕ ) ತೃತೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ತೀರ್ಪುಗಾರರಾಗಿ ಬಿ.ಸಿ. ರೋಡ್ ನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ, ನಿರ್ದೇಶಕ ಡಾ. ತುಕಾರಾಂ ಪೂಜಾರಿ ಹಾಗೂ ಖ್ಯಾತ ನಾಟಕಕಾರ ನಿರೂಪಕ ಕದ್ರಿ ನವನೀತ ಶೆಟ್ಟಿ ಸಹಕರಿಸಿದ್ದಾರೆ. ದಿನಾಂಕ 14 ಎಪ್ರಿಲ್ 2026ರ ಸಂಜೆ 4-30ಗೆ ಮಂಗಳಾದೇವಿ ದೇವಸ್ಥಾನದಲ್ಲಿ ತುಳು ಕೂಟ ನಡೆಸುವ ‘ಬಿಸು ಪರ್ಬ- 2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಮತ್ತು ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.
