Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಕ್ಕಳ ಕಲಾ ಲೋಕದ ‘ಸಾಹಿತ್ಯ ತಾರೆ ಪ್ರಶಸ್ತಿ’ ಘೋಷಣೆ
    Awards

    ಮಕ್ಕಳ ಕಲಾ ಲೋಕದ ‘ಸಾಹಿತ್ಯ ತಾರೆ ಪ್ರಶಸ್ತಿ’ ಘೋಷಣೆ

    November 7, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಶಂಭೂರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 19 ನವೆಂಬರ್ 2024ರಂದು ಜರಗಲಿರುವ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಶಾಲೆಗೆ ನೀಡಲಾಗುವ ‘ಸಾಹಿತ್ಯ ತಾರೆ ಪ್ರಶಸ್ತಿ’ಗೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಶಾಲೆಯು ಸಾಹಿತ್ಯಾದಿ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿಗೆ ಓಜಾಲ ಶಾಲೆಯ ಆಯ್ಕೆಯಾಗಿರುತ್ತದೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಘೋಷಣೆ ಮಾಡಿದ್ದಾರೆ.

    ದಾಖಲಾತಿ ಕುಸಿದು ಹದಿನೇಳು ಮಕ್ಕಳನ್ನು ಹೊಂದಿ ಮುಚ್ಚುವ ಸ್ಥಿತಿಗಿಳಿದಿದ್ದ ಓಜಾಲ ಶಾಲೆಯು ಇಂದು 131 ವಿದ್ಯಾರ್ಥಿಗಳಿಂದ ತುಂಬಿ ಕಂಗೊಳಿಸುತ್ತಿದೆ. ಕುಗ್ರಾಮವಾದರೂ ಶಾಲಾ ಶಿಕ್ಷಕರಲ್ಲದೆ, ಹೊರ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯ ರಚನೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿಭಾ ದರ್ಪಣದ ಮೂಲಕ ಮಕ್ಕಳ ಸ್ವರಚಿತ ಸಾಹಿತ್ಯ, ಚಿತ್ರಗಳು ಪ್ರಕಟಗೊಳ್ಳುತ್ತಿವೆ. ಗುಬ್ಬಚ್ಚಿ ಸಾಹಿತ್ಯ ಸಂಘದ ಮೂಲಕ ಮಕ್ಕಳ ಸ್ವರಚಿತ ಸಾಹಿತ್ಯದ ವಾರ್ಷಿಕ ಹಸ್ತಪತ್ರಿಕೆ ‘ಚಿಣ್ಣರ ಚಿತ್ತಾರ’ ಶಾಲಾ ವಾರ್ಷಿಕೋತ್ಸವದಂದು ನಿರಂತರವಾಗಿ ಬಿಡುಗಡೆಯಾಗುತ್ತಿದೆ. ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವೂ ಈ ಶಾಲೆಯಲ್ಲಿ ಜರಗಿರುವುದನ್ನು ಸ್ಮರಿಸಬಹುದು. ಓಜಾಲದ ಓಜ, ಆಶಯ, ನೆಲ ಜಲ, ಜಗದ ನಿಯಮ, ಜ್ಞಾನಾಮೃತ ಮೊದಲಾದ ಮಕ್ಕಳ ಕೃತಿಗಳನ್ನು ಈ ಶಾಲೆಯಲ್ಲಿ ಮುದ್ರಿಸಿ ಪ್ರಕಟಿಸಲಾಗಿರುವುದು ಓಜಾಲ ಶಾಲೆಯ ಹೆಗ್ಗಳಿಕೆಯಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಜಿಲ್ಲಾ ಕ.ಸಾ.ಪ.ದಿಂದ ಕನ್ನಡ ರಾಜ್ಯೋತ್ಸವ, ದತ್ತಿನಿಧಿ ಮತ್ತು ಸನ್ಮಾನ ಕಾರ್ಯಕ್ರಮ
    Next Article ನಗ್ರಿ ಮಹಾಬಲ ರೈ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ -2024’ | ನವೆಂಬರ್ 26
    roovari

    Add Comment Cancel Reply


    Related Posts

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.