Subscribe to Updates

    Get the latest creative news from FooBar about art, design and business.

    What's Hot

    ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜನವರಿ 31

    January 20, 2026

    ಉಡುಪಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಂಸ್ಕೃತಿ ಉತ್ಸವ -2026’ | ಜನವರಿ 24, 25 ಮತ್ತು 26

    January 20, 2026

    ಶ್ರೋತೃವರ್ಗವನ್ನು ಮಂತ್ರಮುಗ್ಧರನ್ನಾಗಿಸಿದ ‘ಲಯ ಲಾವಣ್ಯ’ ವಿಶೇಷ ಸಂಗೀತ ಸಂಭ್ರಮ

    January 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಮೃತವರ್ಷಿಣಿ’ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ
    Music

    ಅಮೃತವರ್ಷಿಣಿ’ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ

    December 23, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ವಿದುಷಿ ಸ್ವಾತಿ ರೈ ಇವರ ‘ಅಮೃತವರ್ಷಿಣಿ’ ಮ್ಯೂಸಿಕ್ ಅಕಾಡೆಮಿಯ ಸಂಗೀತ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 15 ಡಿಸೆಂಬರ್ 2024ರಂದು ಮಂಗಳೂರಿನ ಯೆಯ್ಯಾಡಿಯ ಬಾಂದೊಟ್ಟು ಗುತ್ತು ಮನೆಯಂಗಳದಲ್ಲಿ ನಡೆಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕೋಶಾಧಿಕಾರಿಯಾದ ಎನ್. ಸುಬ್ರಾಯ ಭಟ್ ಮಾತನಾಡಿ “ಸಂಗೀತವು ದೇಶ ಭಾಷೆಗಳ ಹಂಗಿಲ್ಲದೆ ಸರ್ವರ ಮನವನ್ನು ಮುಟ್ಟಬಲ್ಲುದು ತಟ್ಟಬಲ್ಲುದು ಹಾಗೂ ವಿಶ್ವವನ್ನೇ ಸುತ್ತಿ ಬರಬಲ್ಲುದು. ಸಂಗೀತ ನಮ್ಮ ಜೀವನವನ್ನು ಮಧುರವಾಗಿಸುತ್ತಾ , ಮನಸ್ಸನ್ನು ಶುಚಿಗೊಳಿಸುತ್ತಾ , ಏಕಾಗ್ರತೆಯನ್ನು ಬಲಪಡಿಸುತ್ತಾ ನಮ್ಮಲ್ಲಿ  ಉನ್ನತವಾದ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸ್ವಾತಿ ರೈಯವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಾಧನೆಗೈಯುವುದರೊಂದಿಗೆ ಸಂಗೀತ ಶಿಕ್ಷಣವನ್ನೂ ನೀಡುತ್ತಿರುವುದು ಅಭಿನಂದನೀಯ ಎಂದರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ ರಾವ್ ಮಾತನಾಡಿ “ಶಾಸ್ತ್ರೀಯ ಸಂಗೀತದ ಅಭ್ಯಾಸ,  ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿ ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ. ನಿರಂತರ ಅಭ್ಯಾಸವೇ ಸಾಧನೆಗೆ ಹಾದಿ.” ಎಂದು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.
    ಸಂಸ್ಥೆಯ ಸಂಸ್ಥಾಪಕಿ ಸ್ವಾತಿ ರೈ ಮಾತನಾಡಿ “ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ಕೊಡುವುದು ಇಷ್ಟದ ಕೆಲಸ. ಅವರ ಆಸಕ್ತಿ ಮತ್ತು ಹೆತ್ತವರ ಪ್ರೋತ್ಸಾಹ ಆಶಾದಾಯಕವಾಗಿದೆ. ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಜೊತೆಗೆ ಧ್ವನಿ ತರಬೇತಿಯನ್ನೂ ನೀಡಲಾಗುತ್ತಿದೆ.” ಎಂದರು.
    ಉಷಾ ಎನ್. ರೈ ಸ್ವಾಗತಿಸಿ, ಕವಿತಾ ಪಕ್ಕಳ  ನಿರೂಪಿಸಿ, ನಿಹಾಲ್ ಸಹಕರಿಸಿ, ನವೀನ್ ಚಂದ್ರ ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಸುಮಾರು ಐವತ್ತು ಮಂದಿ ವಿದ್ಯಾರ್ಥಿಗಳು ವಿವಿಧ ಸಂಗೀತ ಕೃತಿಗಳನ್ನು ಪ್ರಸ್ತುತಪಡಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಭಾರತ ಭೂಷಣ’ ಹಾಗೂ ‘ಕರುನಾಡ ಭೂಷಣ’ ಪ್ರಶಸ್ತಿ ಪ್ರದಾನ
    Next Article ತೆಕ್ಕಟ್ಟೆಯ ಹಯಗ್ರೀವದಲ್ಲಿ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಶ್ರೋತೃವರ್ಗವನ್ನು ಮಂತ್ರಮುಗ್ಧರನ್ನಾಗಿಸಿದ ‘ಲಯ ಲಾವಣ್ಯ’ ವಿಶೇಷ ಸಂಗೀತ ಸಂಭ್ರಮ

    January 20, 2026

    ‘ಸಾಧನ ಸಂಗಮ’ದ ‘ಬಹುಳ’ ನೃತ್ಯೋತ್ಸವ 2026 | ಜನವರಿ 26

    January 20, 2026

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ಗಾಯನ ಸಂಗೀತ ಕಾರ್ಯಾಗಾರ’ | ಜನವರಿ 24, 25, 31 ಮತ್ತು ಫೆಬ್ರುವರಿ 01

    January 20, 2026

    ಹಿಟ್ಟಿನಹಳ್ಳಿಯಲ್ಲಿ ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 20 ಮತ್ತು 21

    January 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.