ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ 2025’ ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ 5.00ರ ವರೆಗೆ ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ.
ಈ ಶಿಬಿರವು ಕಡ್ಡಾಯವಾಗಿ 08 ರಿಂದ 14ವರ್ಷದ ಮಕ್ಕಳಿಗಾಗಿದ್ದು, ಪ್ರವೇಶ ಪ್ರಕ್ರಿಯೆ 30 ಮಾರ್ಚ್ 2025ರಂದು ಬೆಳಿಗ್ಗೆ ಘಂಟೆ 10.00 ರಿಂದ ಮಧ್ಯಾಹ್ನ 1.30ರ ವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಆಸಕ್ತ ಪೋಷಕರು ಅರ್ಜಿ ಪಡೆದು ತಕ್ಷಣ ಅಲ್ಲಿಯೇ ಪ್ರವೇಶ ಪ್ರಕ್ರಿಯೆ ಪೂರೈಸಬೇಕು. ಅಭ್ಯರ್ಥಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರ ಲಗತ್ತಿಸುವುದು ಕಡ್ಡಾಯ. ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505.