Author: roovari

ಲಾಸ್ ಏಂಜಲೀಸ್‌ : ಭಾರತೀಯ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಇವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ‘ತ್ರಿವೇಣಿ’ ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ. ಇದರಲ್ಲಿ 7 ಹಾಡುಗಳಿದ್ದು ಭಾರತದ ಪವಿತ್ರ ನದಿಗಳಾದ ಯಮುನಾ, ಗಂಗಾ, ಸರಸ್ವತಿಯ ಸಂಸ್ಕೃತಿ ಪರಿಚಯಿಸುತ್ತದೆ . ಮೊಲತಃ ಚೆನ್ನೈ ನವರಾದ ಟಂಡನ್ ಪೆಪ್ಸಿಕೋದ ಮಾಜಿ ಸಿ. ಇ. ಒ. ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ…

Read More

ಬೆಂಗಳೂರು : ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮ ಸಮಿತಿ ಇದರ ವತಿಯಿಂದ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಸಹಯೋಗದೊಂದಿಗೆ ‘ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75′ ಅಭಿನಂದನೆ ಸಮಾರಂಭವನ್ನು ದಿನಾಂಕ 08 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ಕುಮಾರಪಾರ್ಕ್ ಪೂರ್ವ, ಗಾಂಧಿಭವನ, 2ನೆಯ ಮಹಡಿ, ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಇವರ ಅಧ್ಯಕ್ಷತೆಯಲ್ಲಿ ಸಂಶೋಧಕ ಹಾಗೂ ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಅಮೃತ ಕಥಾನಕ’ ಅಭಿನಂದನಾ ಗ್ರಂಥವನ್ನು ಪ್ರಸಿದ್ಧ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಇವರು, ‘ಸ್ನೇಹಮೇರು’ ಸ್ಮರಣ ಸಂಚಿಕೆಯನ್ನು ಕರ್ನಾಟಕ ಗಾಂಧಿ ಸ್ಮಾರಕನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೊಡೇ ಪಿ. ಕೃಷ್ಣ ಇವರು ಹಾಗೂ ‘ತೋರಿದ ದಾರಿ’ ಸಾಕ್ಷ್ಯಚಿತ್ರವನ್ನು ವಿದ್ವಾಂಸರು ಹಾಗೂ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ದಿನಾಂಕ 01 ಫೆಬ್ರವರಿ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಸುಗ್ರೀವ ಸಖ್ಯ’ ಆಖ್ಯಾನ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಕುಮಾರಿ ಶರಣ್ಯ ನೆತ್ರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಗುಡ್ಡಪ್ಪ ಬಲ್ಯ), ಸುಗ್ರೀವ (ಮಾಂಬಾಡಿ ವೇಣುಗೋಪಾಲ ಭಟ್). ಹನೂಮಂತ‌ (ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಉಪಾಧ್ಯಕ್ಷ ಗುಡ್ಡಪ್ಪ ಬಲ್ಯ ಪ್ರಾಯೋಜಿಸಿದ್ದರು.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ . ಡಾ.ಪ್ರಭಾಕರ ಶಿಶಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಮತ್ತು ಇತರ ಮಳಿಗೆಗಳಿಗೆ ಅವಕಾಶವಿದೆ. ಮಳಿಗೆಗಳ ವ್ಯವಸ್ಥೆಗೆ ದಿನಾಂಕ 05 ಫೆಬ್ರವರಿ 2025ರ ಒಳಗಾಗಿ ಪುಸ್ತಕ ಮಳಿಗೆ ಮತ್ತು ಇತರೆ ಮಾರಾಟ ಮಳಿಗೆ ಸಮಿತಿ ಸಂಚಾಲಕ ತ್ಯಾಗಂ ಹರೇಕಳ 8904842624, ಪ್ರಸಾದ ಎಸ್. 8317444793 ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ.ಶ್ರೀ ನಾಥ ತಿಳಿಸಿದ್ದಾರೆ.

Read More

ಧಾರವಾಡ : ಅಭಿನಯ ಭಾರತಿ ಧಾರವಾಡ ಆಯೋಜಿಸಿದ ‘ಬೇಂದ್ರೆಯವರ ಕನ್ನಡ ನಾಟಕಗಳು’ ವಿಷಯದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 30 ಜನವರಿ 2025ರಂದು ನಡೆಯಿತು. ಹಿರಿಯ ಪ್ರಾಧ್ಯಾಪಕ ಸಂಶೋಧಕ ಹಾಗೂ ಕನ್ನಡ ಸಾಹಿತ್ಯ ಪರಿಚಾರಕ ದಿ. ಡಾ. ವೃಷಭೇಂದ್ರ ಸ್ವಾಮಿ ಇವರ ಸ್ಮರಣಾರ್ಥ ಅವರ ಪುತ್ರ ಡಾ ಎಸ್. ಎಂ. ಶಿವಪ್ರಸಾದ್ ಅವರು ನೀಡಿದ ಕೊಡುಗೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿನಾಯಕ ನಾಯಕ ಮಾತನಾಡಿ “ವರಕವಿ ಬೇಂದ್ರೆಯವರು ತಮ್ಮ ಅಪ್ರತಿಮ ಕಾವ್ಯ ಪ್ರತಿಭೆಯಿಂದ ಜನ ಮಾನಸದಲ್ಲಿ ಜಗದ ಕವಿ, ಯುಗದ ಕವಿ, ಎಂದು ಕರೆಸಿಕೊಂಡಿದ್ದರೂ. ಸಾಹಿತ್ಯದ ಇತರ ಪ್ರಕಾರಗಳಾದ ಕಥೆ, ಹರಟೆ, ಲಲಿತ ಪ್ರಬಂಧ ಹಾಗೂ ನಾಟಕಗಳಲ್ಲೂ ಅವರು ತಮ್ಮ ಅಗಾಧ ಜೀವನ ಪ್ರಜ್ಞೆ ಹಾಗೂ ವ್ಯಂಗ್ಯ ನಡೆನುಡಿಗಳಿಂದ ಅಸಾಮಾನ್ಯ ಕೃತಿಗಳನ್ನು ರಚಿಸಿ ಇಂದಿಗೂ ಪ್ರಸ್ತುತವೆನಿಸುವ ಸಾಮಾಜಿಕ ಚಿಂತನೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ರಂಗಭೂಮಿ ಜೀವನದ ಪ್ರತಿಬಿಂಬವಾಗಿ, ಜೀವನ ದಾರಿ ತಪ್ಪಿದಾಗ ತಿದ್ದುವ ಕೆಲಸ ಮಾಡುತ್ತದೆ ಎಂದು…

Read More

ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂಪಾಯಿ 25000/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಫೆಬ್ರವರಿ 2025ರಂದು ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. 1963ರಲ್ಲಿ ಎಸ್. ಮೊಯ್ದಿನ್ ಕುಂಞ ಹಾಗೂ ಬೀಫಾತಿಮ ಅವರ ಮಗನಾಗಿ ಸಂಪಾಜೆಯಲ್ಲಿ ಎಸ್. ಎಂ. ಜಬ್ಬಾರ್ ಅವರು ಜನಿಸಿದರು. ಬಾಲ್ಯದಲ್ಲಿಯೇ ಕತೆ ಓದುವುದು, ಕೇಳುವುದರ ಜೊತೆಗೆ ಯಕ್ಷಗಾನ ಕಲೆಯೂ ಕರಗತವಾಯಿತು. ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ‘ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ದನುಜ ಗುರುವಿನ ವೇಷ ಹಾಕುವುದರೊಂದಿಗೆ ಆರಂಭವಾದ ಇವರ ಕಲಾಜೀವನ ಮುಂದೆ ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡುವ ಮಟ್ಟಿಗೆ ಬೆಳೆಯಿತು. ಇದರೊಂದಿಗೆ ಹಲವಾರು ಸಂಘ…

Read More

ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಡಾ. ವಾಮನ್ ರಾವ್ ಬೇಕಲ್ ಅವರ ಸ್ಥಾಪಕ ಸಂಚಾಲಕತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಇದರ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 02 ಫೆಬ್ರವರಿ 2025ರ ಭಾನುವಾರದಂದು ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಅಧ್ಯಕ್ಷರಾದ ಡಾ.ಮಾನಸ ಮೈಸೂರು ಇವರು ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಕನ್ನಡ ಧ್ವಜವನ್ನು, ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಅವರಿಗೆ ಹಸ್ತಾಂತರಿಸುವ ಮೂಲಕ ಪರಿಷತ್ತಿಗೆ ಚಾಲನೆ ನೀಡಿದರು. ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾಗಿ ಪತ್ರಕರ್ತ ಹಾಗೂ ಸಾಹಿತಿಗಳಾದ ಜಯಾನಂದ ಪೆರಾಜೆ ಹಾಗೂ ಶಿಕ್ಷಕಿ ಡಾ. ಶಾಂತ ಪುತ್ತೂರು ಇವರಿಗೆ ಅಧಿಕಾರ ಹಸ್ತಾಂತರ…

Read More

ಮೂಲ್ಕಿ : ನಿಮ್ಮಲ್ಲಿರುವ ರಾಶಿ ರಾಶಿ ಪುಸ್ತಕಗಳನ್ನು ಓದುವವರಿಲ್ಲವೆ ? ನಿಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳು ಇವೆ, ಕಥಾ ಸಂಕಲನ, ಕಾದಂಬರಿಗಳಿವೆ, ಮಕ್ಕಳ ಪುಸ್ತಕಗಳಿವೆ. ಹಳೆಯ ಮಾಸಪತ್ರಿಕೆಗಳಿವೆ. ಆದರೆ ಓದುವವರಿಲ್ಲ. ಗುಜರಿಗೆ ಹಾಕಲು ಮನಸ್ಸೊಪ್ಪುತ್ತಿಲ್ಲ. ಅರ್ಹರ ಕೈಗೆ ಈ ಪುಸ್ತಕಗಳು ಸಿಕ್ಕರೆ ಸಮಾಧಾನ… ಇಂತಹ ಮನಸ್ಥಿತಿಯಲ್ಲಿದ್ದೀರಾ.. ದಿನಾಂಕ 08 ಫೆಬ್ರವರಿ 2025ರಂದು ನಡೆಯಲಿರುವ ಮೂಲ್ಕಿ ತಾಲೂಕು 2ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ, ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಬೇಕೆಂಬ ಸಂಕಲ್ಪ ನಮ್ಮದು. ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ನಾವು ಹಂಚುತ್ತೇವೆ. ನಿಮ್ಮ ಹೆಸರು ಬರೆದು, ನಿಮ್ಮಲ್ಲಿರುವ ಸಾಹಿತ್ಯ ಪುಸ್ತಕಗಳನ್ನು, ಮಕ್ಕಳ ಪುಸ್ತಕಗಳನ್ನು ನಮಗೆ ಕೊಡಿ ಅಥವಾ ಸಮ್ಮೇಳನದಲ್ಲಿ ನೀವೇ ಆಸಕ್ತರಿಗೆ ಹಂಚರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9845362763.

Read More

ಮೂರ್ನಾಡು : ಮೂರ್ನಾಡಿನ ಅಪ್ತಮಿತ್ರರು ಬಳಗದ ನೇವಾರ್ಥವಾಗಿ ದಿನಾಂಕ 08 ಫೆಬ್ರವರಿ 2025ರಂದು ಮೂರ್ನಾಡಿನಲ್ಲಿ ‘ಸಾಕೇತ ಸಾಮ್ರಾಜ್ಞೆ’ ಎಂಬ ಯಕ್ಷಗಾನ ಪ್ರದರ್ಶನವು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮತ್ತು ಶಾಲಾ ಮೈದಾನದಲ್ಲಿ ಸಂಜೆ 6-00 ಗಂಟೆಗೆ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯಲಿದೆ. ಎರಡನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಕಲ್ಲಡ್ಕ ಚಿನ್ಮಯ ಭಟ್ ಚಂಡೆ ಮತ್ತು ಮದ್ದಳೆ ಕಲಾವಿದರಾಗಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಟ್ಲ, ಕೌಶಲ್ ರಾವ್ ಪುತ್ತಿಗೆ ಪಾಲ್ಗೊಳ್ಳಲಿದ್ದಾರೆ. ಹಾಸ್ಯ ಕಲಾವಿದರಾಗಿ ಸೀತಾರಾಮ ಕುಮಾರ್ ಕಟೀಲ್, ಮೋಹನ್ ಮುಚ್ಚುರ್, ಸ್ತ್ರೀ ವೇಷದಲ್ಲಿ ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಸದಾಶಿವ ಕುಲಾಲ್ ವೇಣೂರು, ಪ್ರಸಾದ್ ಸವಣೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿವಾಕರ ರೈ ಸಂಪಾಜೆ, ಶಿವರಾಜ್ ಬಜಕೂಡ್ಲು, ಸಿದ್ಧಕಟ್ಟೆ…

Read More

ಮಂಗಳೂರು : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -5’ ಪ್ರಯುಕ್ತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರ ಪಡಿಸುವ ‘ಚಾರುವಸಂತ’ ನಾಟಕ ಪ್ರದರ್ಶನವು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಹಂಪನಾ ವಿರಚಿತ ಈ ದೇಸೀ ಕಾವ್ಯಕ್ಕೆ ಡಾ. ಜೀವನ್ ರಾಮ್ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ನಾ. ದಾಮೋದರ ಶೆಟ್ಟಿಯವರು ರಂಗರೂಪ ನೀಡಿರುತ್ತಾರೆ.

Read More