Subscribe to Updates
Get the latest creative news from FooBar about art, design and business.
Author: roovari
ಮೂಲ್ಕಿ : ನಿಮ್ಮಲ್ಲಿರುವ ರಾಶಿ ರಾಶಿ ಪುಸ್ತಕಗಳನ್ನು ಓದುವವರಿಲ್ಲವೆ ? ನಿಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳು ಇವೆ, ಕಥಾ ಸಂಕಲನ, ಕಾದಂಬರಿಗಳಿವೆ, ಮಕ್ಕಳ ಪುಸ್ತಕಗಳಿವೆ. ಹಳೆಯ ಮಾಸಪತ್ರಿಕೆಗಳಿವೆ. ಆದರೆ ಓದುವವರಿಲ್ಲ. ಗುಜರಿಗೆ ಹಾಕಲು ಮನಸ್ಸೊಪ್ಪುತ್ತಿಲ್ಲ. ಅರ್ಹರ ಕೈಗೆ ಈ ಪುಸ್ತಕಗಳು ಸಿಕ್ಕರೆ ಸಮಾಧಾನ… ಇಂತಹ ಮನಸ್ಥಿತಿಯಲ್ಲಿದ್ದೀರಾ.. ದಿನಾಂಕ 08 ಫೆಬ್ರವರಿ 2025ರಂದು ನಡೆಯಲಿರುವ ಮೂಲ್ಕಿ ತಾಲೂಕು 2ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ, ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಬೇಕೆಂಬ ಸಂಕಲ್ಪ ನಮ್ಮದು. ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ನಾವು ಹಂಚುತ್ತೇವೆ. ನಿಮ್ಮ ಹೆಸರು ಬರೆದು, ನಿಮ್ಮಲ್ಲಿರುವ ಸಾಹಿತ್ಯ ಪುಸ್ತಕಗಳನ್ನು, ಮಕ್ಕಳ ಪುಸ್ತಕಗಳನ್ನು ನಮಗೆ ಕೊಡಿ ಅಥವಾ ಸಮ್ಮೇಳನದಲ್ಲಿ ನೀವೇ ಆಸಕ್ತರಿಗೆ ಹಂಚರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9845362763.
ಮೂರ್ನಾಡು : ಮೂರ್ನಾಡಿನ ಅಪ್ತಮಿತ್ರರು ಬಳಗದ ನೇವಾರ್ಥವಾಗಿ ದಿನಾಂಕ 08 ಫೆಬ್ರವರಿ 2025ರಂದು ಮೂರ್ನಾಡಿನಲ್ಲಿ ‘ಸಾಕೇತ ಸಾಮ್ರಾಜ್ಞೆ’ ಎಂಬ ಯಕ್ಷಗಾನ ಪ್ರದರ್ಶನವು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮತ್ತು ಶಾಲಾ ಮೈದಾನದಲ್ಲಿ ಸಂಜೆ 6-00 ಗಂಟೆಗೆ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯಲಿದೆ. ಎರಡನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಕಲ್ಲಡ್ಕ ಚಿನ್ಮಯ ಭಟ್ ಚಂಡೆ ಮತ್ತು ಮದ್ದಳೆ ಕಲಾವಿದರಾಗಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಟ್ಲ, ಕೌಶಲ್ ರಾವ್ ಪುತ್ತಿಗೆ ಪಾಲ್ಗೊಳ್ಳಲಿದ್ದಾರೆ. ಹಾಸ್ಯ ಕಲಾವಿದರಾಗಿ ಸೀತಾರಾಮ ಕುಮಾರ್ ಕಟೀಲ್, ಮೋಹನ್ ಮುಚ್ಚುರ್, ಸ್ತ್ರೀ ವೇಷದಲ್ಲಿ ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಸದಾಶಿವ ಕುಲಾಲ್ ವೇಣೂರು, ಪ್ರಸಾದ್ ಸವಣೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿವಾಕರ ರೈ ಸಂಪಾಜೆ, ಶಿವರಾಜ್ ಬಜಕೂಡ್ಲು, ಸಿದ್ಧಕಟ್ಟೆ…
ಮಂಗಳೂರು : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -5’ ಪ್ರಯುಕ್ತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರ ಪಡಿಸುವ ‘ಚಾರುವಸಂತ’ ನಾಟಕ ಪ್ರದರ್ಶನವು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಹಂಪನಾ ವಿರಚಿತ ಈ ದೇಸೀ ಕಾವ್ಯಕ್ಕೆ ಡಾ. ಜೀವನ್ ರಾಮ್ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ನಾ. ದಾಮೋದರ ಶೆಟ್ಟಿಯವರು ರಂಗರೂಪ ನೀಡಿರುತ್ತಾರೆ.
ಮಂಗಳೂರು : ತುಳುಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 09 ಮಾರ್ಚ್ 2025ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಾದ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ ದಿನಾಂಕ 03 ಜನವರಿ 2025ರಂದು ಬಿಡುಗಡೆಗೊಳಿಸಿದರು. ತುಳುಕೂಟ (ರಿ.) ಕುಡ್ಲದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ, ಉಪಾಧ್ಯಕ್ಷ ಜೆ.ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ನಾಗೇಶ ದೇವಾಡಿಗ ಕದ್ರಿ, ನಾರಾಯಣ ಬಿ.ಡಿ., ವಿಶ್ವನಾಥ ಸೋಣಳಿಕೆ, ಜಗದೀಶ್ ಬೆಂಗಳೂರು ಹಾಗೂ ಕೂಟದ ಸದಸ್ಯರು ಉಪಸ್ಥಿತರಿದ್ದರು.
ದೆಹಲಿ : ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ “ಭಾರತ್ ಪರ್ವ” ಉತ್ಸವದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನವು ದಿನಾಂಕ 31 ಜನವರಿ 2025 ರಂದು ನಡೆಯಿತು. ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಕೋಟ ಸುದರ್ಶನ ಉರಾಳ್, ಪ್ರಿಯಾಂಕ ಕೆ. ಮೋಹನ್, ಶ್ರೀರಾಮ್ ಹೆಬ್ಬಾರ್, ಶ್ರೀವತ್ಸ ಅಡಿಗ, ಶಿಲ್ಪಾ ಅರುಣ್, ಶಿಲ್ಪಾ ಆನಂದ್ ಮತ್ತು ಉಷಾ ಅಮೈರಾ ಭಾಗವಹಿಸಿದರು.
ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಕೇಂದ್ರ, ಯಕ್ಷರಂಜಿನಿ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ‘ಯಕ್ಷಗಾನ ಪ್ರಸಂಗ : ಸ್ವರೂಪ, ವಿಕಾಸ ಮತ್ತು ಅನನ್ಯತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ದಿನಾಂಕ 31 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳ ಕಾವ್ಯಾಂಶದ ಕುರಿತು ಮಾತನಾಡಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ “ಯಕ್ಷಗಾನದ ಹುಟ್ಟು ಅಸ್ಪಷ್ಟ. ಆದರೆ ಬೆಳವಣಿಗೆಯ ಸಂದರ್ಭದಲ್ಲಿ ಪಾರ್ತಿಸುಬ್ಬ ದೇವಿದಾಸರಿಂದ ತೊಡಗಿ ಅಗರಿ, ಬಲಿಪ, ಅಮೃತ ಸೋಮೇಶ್ವರ, ಪುರುಷೋತ್ತಮ ಪೂಂಜ ಹೀಗೆ ಸಾವಿರಾರು ಕವಿಗಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ವಿಮರ್ಶಕರು ಕಾವ್ಯ ಪ್ರಕಾರವೆಂದು ಪರಿಗಣಿಸುತ್ತಿಲ್ಲ. ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲೂ ಕವಿಗಳ ಹೆಸರನ್ನು ಹೇಳುವುದಿಲ್ಲ. ಈ ನಿರ್ಲಕ್ಷ್ಯ ಸರಿಯಲ್ಲ”…
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 06 ಮತ್ತು 07 ಫೆಬ್ರವರಿ 2025ರಂದು ಶಿವಮೊಗ್ಗ ಗೋಪಿಶೆಟ್ಟಿಕೊಪ್ಪ ಚಾಲುಕ್ಯನಗರ, ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಲಾಗಿದೆ. ದಿನಾಂಕ 06 ಫೆಬ್ರವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ರಾಷ್ಟ್ರ, ನಾಡ ಮತ್ತು ಪರಿಷತ್ ಧ್ವಜಾರೋಹಣ ನಡೆಯಲಿದ್ದು, 10-00 ಗಂಟೆಗೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಎಸ್. ರವಿಕುಮಾರ್ ಇವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀಮತಿ ಸಹನಾ ಜಿ. ಭಟ್ ಸಾಗರ, ಶ್ರೀ ಎಸ್. ನಾರಾಯಣ ವಿದ್ಯಾನಗರ ಮತ್ತು ಡಾ. ರಾಜೇಂದ್ರ ಶಿರಾಳಕೊಪ್ಪ ಇವರಿಂದ ಹಾಡುಗಾರಿಕೆ, ಖ್ಯಾತ ಸಾಹಿತಿಗಳಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಇವರು ದೀಪ ಬೆಳಗಿ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಸಚಿವರಾದ ಶ್ರೀ ಮಧು ಬಂಗಾರಪ್ಪ ಇವರಿಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸರುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರಿಂದ ಡಾ. ಜೆ.ಕೆ.ಆರ್.ರವರ ‘ಇಂಡಿಯಾದ…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ದಿನಾಂಕ 01 ಫೆಬ್ರವರಿ 2025ರಂದು ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಉದಯವಾಣಿಯ ಹಿರಿಯ ಛಾಯಚಿತ್ರಗಾಹಕ ಆಸ್ಟ್ರೋ ಮೋಹನ್ ರವರ ‘ಉಡುಪಿ-ಮಣಿಪಾಲ ಅಂದು ಇಂದು’ ಮಿನಿ ಕಾಫಿಟೇಬಲ್ ಪುಸ್ತಕ ಲೋಕಾರ್ಪಣೆ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿ ಕೃತಿ ಬಿಡುಗಡೆಗೊಳಿಸಿದ ಮಾಹೆ ವಿ.ವಿ. ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ “ಕಳೆದ ಐದು ದಶಕಗಳಲ್ಲಿ ಉಡುಪಿ ಮಣಿಪಾಲದಲ್ಲಿ ಆದಷ್ಟು ಬದಲಾವಣೆ ಬೇರೆ ಯಾವ ಜಿಲ್ಲೆಯಲ್ಲೂ ಆಗಿಲ್ಲ. ಉಡುಪಿ ಮಣಿಪಾಲದ ನಡುವೆ ಈಗ ಅಂತರವೇ ಇಲ್ಲದಾಗಿದೆ. ಈ ಬದಲಾವಣೆಯಲ್ಲಿ ಡಾ. ಟಿ.ಎಂ.ಎ. ಪೈ ಅವರ ಕೊಡುಗೆಯೂ ಇದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಉಡುಪಿ ಮಣಿಪಾಲ ಸಾಕಷ್ಟು ಬದಲಾವಣೆ ಕಂಡಿದೆ. ಜಾಗತಿಕ ಮಟ್ಟದಲ್ಲೂ ಖ್ಯಾತಿ ಪಡೆದಿದೆ. ವನ್ಯಜೀವಗಳು ಸೇರಿದಂತೆ ಗುಡ್ಡ ಪ್ರದೇಶವಾಗಿದ್ದ ಮಣಿಪಾಲದಲ್ಲಿ 1953ರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಮೂಲಕ ಡಾ. ಟಿ.ಎಂ.ಎ. ಪೈ ಅವರು ಬೆಳವಣಿಗೆಯ…
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ ‘ಉಡುಪಿ ಚಾವಡಿ’ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಇವರು ದಿನಾಂಕ 31 ಜನವರಿ 2025ರಂದು ಆವರಣದಲ್ಲಿ ಬಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ರಮೇಶ್ “ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸಾದ ಈ ಕನ್ನಡ ಸಾಹಿತ್ಯ ಪರಿಷತ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡ ನಾಡು ನುಡಿ ಸಂಸ್ಕೃತಿಕವಾಗಿ ವಿಶೇಷವಾದ ಕಾಯಕವನ್ನು ಮಾಡುತ್ತಿದೆ. ಉಡುಪಿಗೆ ಬರುವ ಮಹಾನ್ ವ್ಯಕ್ತಿಗಳ ಮಾತುಗಳು ಈ ಮೂಲಕ ದಾಖಲೀಕರಣಗೊಳ್ಳಲಿರುವುದು ಅಭಿನಂದನೀಯ” ಎಂದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಮಾತನಾಡಿ, “ಉಡುಪಿ ಒಂದು ಸಾಂಸ್ಕೃತಿಕ…
ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನ ಮೂಡುಪೆರಂಪಳ್ಳಿ ಶಿವಳ್ಳಿ ಗ್ರಾಮ ಇಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ದಿನಾಂಕ 31 ಜನವರಿ 2025ನೇ ಶುಕ್ರವಾರದದಂದು ‘ಸಮರಸೌಗಂಧಿಕ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಳೆಗಳಲ್ಲಿ ಪದ್ಯಾಣ ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ. ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನುಮಂತ), ಕುಮಾರಿ ಅದಿತಿ ಮಂಡೀಚ ಕುಬೇರ ಸಹಕರಿಸಿದರು. ಭಾಗವತ ನಾರಾಯಣ ಶಬರಾಯ ಸ್ವಾಗತಿಸಿ, ಹರಿಕೃಷ್ಣ ಶಿವತಾಯ ವಂದಿಸಿದರು. ರಾಜಶ್ರೀ ಶಬರಾಯ, ನಾರಾಯಣ ಶಬರಾಯ ದಂಪತಿಗಳು ಕಾರ್ಯಕ್ರಮ ಪ್ರಾಯೋಜಿಸಿದ್ದರು.