Author: roovari

ಮಂಗಳೂರು: ಶ್ರೀ ಕ್ಷೇತ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ‘ಥಂಡರ್ ಕಿಡ್ಸ್’ ತಂಡದ ಮಕ್ಕಳು ವಾದ್ಯಗೋಷ್ಠಿ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 14-05-2023ರಂದು ನಡೆಸಿಕೊಟ್ಟರು. ಮಕ್ಕಳ ಬೆರಳುಗಳಿಂದ ಮೂಡಿದ ಸಂಗೀತದ ಸ್ವರಗಳು ಮತ್ತು ಕಂಠದಿಂದ ಮೂಡಿದ ಸ್ವರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತಾಸಕ್ತ ಮಕ್ಕಳ ಬಾಲ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರೆತುದು ಮಕ್ಕಳ ಆಸಕ್ತಿಗೆ ಪೂರಕವಾಗಿತ್ತು. ತಬಲ : ಕು. ಆದ್ಯ ಮತ್ತು ಮಾ. ವಿನ್ಯಾಸ್, ಕೀಬೋರ್ಡ್: ಸ್ವಸ್ತಿಕ್ ಮತ್ತು ಅಕ್ಷಜ್, ಗಿಟಾರ್: ಮನ್ವಿತ್, ಕೊಳಲು : ಸಚಿನ್, ರಿದಂ ಪ್ಯಾಡ್ : ಶಾಹಿಲ್, ವೀಣೆ: ಐಶ್ವರ್ಯ, ಗಾಯನದಲ್ಲಿ: ವಿನಮ್ರ ಇಡಿದು, ಅರ್ಮನ್, ನಿನಾದ, ಪ್ರಾರ್ಥನಾ ಭಟ್, ವಸುಧ ಮಲ್ಯ, ಸುಜ್ಞಾನ ಆಚಾರ್ಯ ಪಾಲ್ಗೊಂಡಿದ್ದರು. ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್ ಅವರು ತರಬೇತಿಯನ್ನು ನೀಡಿದ್ದರು. ಕಾರ್ಯಕ್ರಮವನ್ನು ನಿಹಾರಿಕ ನಿರೂಪಿಸಿದರು. ಸುಧಾಕರರಾವ್‌ ಪೇಜಾವರ ಅವರು ಉಪಸ್ಥಿತರಿದ್ದು ಸಹಕರಿಸಿದರು.

Read More

ಮಂಗಳೂರು: ಶ್ರೀ ಶಾರದಾ ನಾಟ್ಯಾಲಯ ಕುಳಾಯಿ-ಹೊಸಬೆಟ್ಟು ಮಂಗಳೂರು ಇವರ ರಜತ ಸಂಭ್ರಮದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮ ‘ನೃತ್ಯ ಶರಧಿ’ ದಿನಾಂಕ 21-05-2023ರಂದು ಸಂಜೆ 5-30ರಿಂದ ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು ಇಲ್ಲಿ ಸಂಪನ್ನಗೊಳ್ಳಲಿದೆ. ನಾಟ್ಯ ರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಉಳ್ಳಾಲ ಶ್ರೀ ಮೋಹನ ಕುಮಾರ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಸನಾತನ ನಾಟ್ಯಾಲಯ ಮಂಗಳೂರು ಹಾಗೂ ವಿದ್ವಾನ್ ಶ್ರೀ ಕೆ. ಮುರಳೀಧರ್ ‘ಮಾಧವ ಸ್ಮರಣಮ್’ ಡಿಜಿಟಲ್ ಸ್ಟುಡಿಯೋ ಉಡುಪಿ ಇವರು ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಹಿಮ್ಮೇಳದಲ್ಲಿ ನೃತ್ಯ ನಿರ್ದೇಶನ : ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರಿಂದ, ನಟುವಾಂಗದಲ್ಲಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಮತ್ತು ವಿದುಷಿ ಶ್ರೀಮತಿ ಪ್ರಣತಿ ಸತೀಶ್. ಹಾಡುಗಾರಿಕೆಯಲ್ಲಿ ವಿದುಷಿ ಶ್ರೀಮತಿ ಅಪರ್ಣಾ ಶರ್ಮ ಪಾಂಡಿಚೇರಿ, ಮೃದಂಗ : ವಿದ್ವಾನ್ ಶ್ರೀ ಕೆ. ಬಾಲಚಂದ್ರ ಭಾಗವತ್ ಉಡುಪಿ, ಕೊಳಲು…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ ಮತ್ತು ಕನ್ನಡ ಸಂಘ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ‘ಅಂಬಿಗರ ಚೌಡಯ್ಯ : ವಚನ ಮೀಮಾಂಸೆ’ 19-05-2023ರಂದು ರವೀಂದ್ರ ಕಲಾಭವನ ವಿ.ವಿ. ಕಾಲೇಜು ಮಂಗಳೂರು ಇಲ್ಲಿ ನಡೆಯಲಿದೆ. ಮಂಗಳೂರು ವಿ.ವಿ.ಯ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಘನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಸನ್ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಆರ್. ಜೈನ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮದರಾಸು ವಿ.ವಿ.ಯ ಕನ್ನಡ ವಿಭಾಗದ ಅಧ್ಯಕ್ಷರು ಹಾಗೂ ಬೆಂಗಳೂರು ಕ.ಸಾ.ಪ.ದ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ತಮಿಳ್ ಸೆಲ್ವಿ ಆಶಯ ನುಡಿಗಳನ್ನಾಡಲಿರುವರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪೂರ್ವಾಹ್ನದ ಅವಧಿಯಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕದ ಪರಿಕಲ್ಪನೆ’ ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದ್ದು,…

Read More

ಮೈಸೂರು: ‘ಆನ್ ಸ್ಟೇಜ್ ಯೂತ್ ಥಿಯೇಟರ್‘ ವತಿಯಿಂದ 45 ದಿನಗಳ ರಂಗ ಕಾರ್ಯಾಗಾರ ಮತ್ತು ನಾಟಕ ತಯಾರಿ “ಯು ಬೆಂಗಳೂರಿನ ಹೆಬ್ಬಾಳದ ಬಸವನ ಗುಡಿ ಸರ್ಕಲ್ ಹತ್ತಿರ “ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ”ಯಲ್ಲಿ ಪ್ರಾರಂಭವಾಗಿದ್ದು . ಆಸಕ್ತಿಯುಳ್ಳ ವಿದ್ಯಾರ್ಥಿಗಳು ‘ಆನ್ ಸ್ಟೇಜ್’ ಗೆ ಕನೆಕ್ಟ್ ಆಗಿದ್ದಾರೆ. ಹೊಸ ಆಲೋಚನೆಯೊಂದಿಗೆ ಹೊರಟಿರುವ ಈ ರಂಗ ಕಾರ್ಯಾಗಾರ ಮತ್ತು ನಾಟಕ ತಯಾರಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಈ ಶಿಬಿರದ ನಿರ್ದೇಶಕರಾದ ವಿನೋದ ಸಿ ಮೈಸೂರು 8892314554 ಇವರನ್ನು ಸಂಪರ್ಕಿಸಬಹುದು.

Read More

ಬೆಂಗಳೂರು: ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠ ಕಾಸರಗೋಡು ಇದರ ಶಾಖಾ ಮಠ ‌ಬೆಂಗಳೂರಿನ ಶ್ರೀ ಕೃಷ್ಣ ದೇವಾಲಯ ಇಲ್ಲಿನ‌ 29 ನೇ ಪ್ರತಿಷ್ಟಾ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಮೇ. 12 ಮತ್ತು 13 ರಂದು ಪೂಜ್ಯ ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ‌ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಯೊಂದಿಗೆ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಬಳಗದವರರಿಂದ ‘ಕೃಷ್ಣಾರ್ಪಣಂ’ ಭರತನಾಟ್ಯ ಕಾರ್ಯಕ್ರಮವು ಅತ್ಯಂತ ಮಜೋಜ್ಞವಾಗಿ ಮೂಡಿಬಂದಿತು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರೊಂದಿಗೆ ಇವರ ಶಿಷ್ಯೆಯರಾದ ರುದ್ದೀ ಎಂ.ವಿ. ಹಾಗೂ ಅವನಿ ಬೆಳ್ಳಾರೆ ಜೊತೆಯಾಗಿದ್ದರು. ಕೃಷ್ಣ ದೇವಾಲಯದಲ್ಲಿ ಕೃಷ್ಣನ ಕುರಿತಾಗಿಯೇ ಎಲ್ಲಾ ಪ್ರಸ್ತುತಿಗಳಿದ್ದು ವಿಶೇಷವಾಗಿ ಜನಮೆಚ್ಚುಗೆಗೆ ಪಾತ್ರವಾಯಿತು.

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಮ್ಮಿಕೊಂಡ ಮೂರು ‘ದತ್ತಿ ಉಪನ್ಯಾಸ’ ಕಾರ್ಯಕ್ರಮಗಳು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 19-05-2023ರಂದು ಅಪರಾಹ್ನ ಗಂಟೆ 4.30ಕ್ಕೆ ನಡೆಯಲಿದೆ. ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳೂ ಸಾಂಸ್ಕೃತಿಕ ಚಿಂತಕರೂ ಆದ ಪ್ರೊ. ಉಪೇಂದ್ರ ಸೋಮಯಾಜಿಯವರು ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಕ.ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡುವರು. ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಬ್ರಹ್ಮಾವರ ತಾಲೂಕು ಪ್ರಪ್ರಥಮ ಸಾಹಿತ್ಯ ಜ್ಞಾಪಕಾರ್ಥ ದತ್ತಿ, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆಣಗಲ್ ದತ್ತಿ, ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ (ಸಾಯಿಬ್ರ ಕಟ್ಟೆ) ಜ್ಞಾಪಕಾರ್ಥ ದತ್ತಿ ಹೀಗೆ ಮೂರು ದತ್ತಿಗಳಿಂದ ಮೂರು ಉಪನ್ಯಾಸ…

Read More

ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವ’ವು ದಿನಾಂಕ 07-05-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಡಿತ್ ರವಿಕಿರಣ್ ಮಣಿಪಾಲ್, ಎಂ.ಆರ್.ಪಿ.ಎಲ್. ಹಾಗೂ ಒ.ಎನ್‌.ಜಿ.ಸಿ. ಜನರಲ್ ಮ್ಯಾನೇಜರ್ ಮಂಜುನಾಥ ಎಚ್.ವಿ. ಮೊದಲಾದವರು ಉಪಸಿತರಿದ್ದರು. ಧ್ಯಾನ ಸಂಗೀತ ಅಕಾಡೆಮಿ ಕಲಾ ಟಸ್ಟ್ ಇದರ ಆಧ್ಯಕ್ಷರಾದ ಶ್ರೀಮತಿ ಲೋಕೇಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಸಂಗೀತಗಾರರಾದ ಹಿರಿಯ ಕಲಾವಿದ ರಮಾನಾಥ್ ಕೋಟೆಕಾರ್ ಅವರನ್ನು ಸಮ್ಮಾನಿಸಲಾಯಿತು. ಅನಂತರ ನಡೆದ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರಾದ ಪಂಡಿತ್‌ ಕುಮಾರ್ ಮರ್ಡೂರ್ ಧಾರವಾಡ, ಶ್ರೀಮತಿ ಮೇಧಾ ಭಟ್‌ ಸಿದ್ದಾಪುರ, ಶ್ರೀ ವಿಶಾಲ ಭಗವಾನ್ ರಾವ್ ಮಹರ್ ಗುಡೆ, ಅಮಿತ್ ಕುಮಾರ್ ಬೆಂಗ್ರೆ ಹಾಗೂ ಧ್ಯಾನ ಸಂಗೀತ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕದಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ಮಣಿಪಾಲದಲ್ಲಿ ದಿನಾಂಕ 16-05-2023ರಂದು ನಡೆಯಿತು. 91 ವರ್ಷದ ಹಿರಿಯರಾದ ಶ್ರೀ ವಿಠಲ ರಾವ್ ಗಂಭೀರ್ ಅವರನ್ನು ಅವರ ಸ್ವಗೃಹ ಮಣಿಪಾಲದಲ್ಲಿ ಗೌರವಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ವಿಠಲ್ ರಾವ್ ಅವರು ಕನ್ನಡ ನಾಡು ನುಡಿ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಂಟು ವಿವಿಧ ವಾದ್ಯಗಳನ್ನು ನುಡಿಸಬಲ್ಲ ಇವರು ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಪರಿಣಿತರಾಗಿರುವ ವಿಠಲ್ ರಾವ್ ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯರಾದ ಉಪೇಂದ್ರ ಸೋಮಯಾಜಿ, ಭುವನ ಪ್ರಸಾದ್ ಹೆಗ್ಡೆ, ಚಂದ್ರಶೇಖರ್ ನಾವಡ, ನರಸಿಂಹಮೂರ್ತಿ, ಕಸಾಪ…

Read More

ಬೈಂದೂರು : ಬೈಂದೂರಿನಲ್ಲಿ ನಡೆದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ ಲಾವಣ್ಯದ ಮಕ್ಕಳ ‘ರಂಗತರಬೇತಿ ಶಿಬಿರದ ನಾಟಕೋತ್ಸವ’ವನ್ನು ದಿನಾಂಕ 03-05-2023ರಂದು ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಉದ್ಘಾಟಿಸಿದರು. “ನಮ್ಮ ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಜನಮಾನಸದಲ್ಲಿ ಕಾಪಿಡುವಲ್ಲಿ ರಂಗಕಲೆಗಳು ಮಹತ್ವದ ಪಾತ್ರವಹಿಸುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ಹೇಳಿದರು. ನಿನಾಸಂ ಪದವೀಧರ, ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ ಮಾತನಾಡಿ, “ಲಾವಣ್ಯವು ಮಕ್ಕಳಿಗೆ ನಾಟಕ ಪೂರ್ವಾಭ್ಯಾಸ ಮಾಡಿ ನಾಟಕ ಮಾಡಿಸುತ್ತಿಲ್ಲ. ಬದಲಾಗಿ ಮಕ್ಕಳಿಗೆ ರಂಗತರಬೇತಿ ಮೂಲಕ ಹೊರಹೊಮ್ಮಿದ ಒಂದು ಕೃತಿಯನ್ನು ಈ ವೇದಿಕೆಯಲ್ಲಿ ಪ್ರದರ್ಶನ ನೀಡಲಾಗುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ಎಲ್ಲೆಲ್ಲೋ ಆಟವಾಡಿಕೊಂಡಿರುವ ದಿನಕಳೆಯುವ ಮಕ್ಕಳನ್ನು ಕರೆತಂದು ಒಟ್ಟಾಗಿ ಕೂಡಿ ಕಲಿಯುವಿಕೆ ವಾತಾವಣ ಸೃಷ್ಟಿಸಿ…

Read More

ಮಂಗಳೂರು : ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿಂದಿ ಸಂಘದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಂಡತೀರ್ಥ ಪದವಿ ಪೂರ್ವ ಕಾಲೇಜು, ಕಾಪು ಇಲ್ಲಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ಶಿವಣ್ಣ ಬಾಯರ್ ಮಾತನಾಡುತ್ತಾ “ಭಾಷೆ ನಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆಯಾಗಿದ್ದು, ತುಂಬಾ ಸರಳವಾದ ಭಾಷೆಯಾಗಿದೆ ಹಾಗೂ ಇದನ್ನು ಅನಕ್ಷರಸ್ಥರು ಕೂಡಾ ಮಾತನಾಡಬಲ್ಲರು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ವಹಿಸಿದರು. ಡೀನ್ ಅಕಾಡೆಮಿಕ್ ಡಾ. ಉಮ್ಮಪ್ಪ ಪೂಜಾರಿ ಪಿ. ಉಪಸ್ಥಿತರಿದ್ದರು. ಹಿಂದಿ ಸಂಘದ ಮುಖ್ಯಸ್ಥರಾದ ಉಮೇಶ್ ಹೆಗಡೆ ಸ್ವಾಗತಿಸಿ, ಹಿಂದಿ ಸಂಘದ ನಾಯಕಿ ಲಿಖಿತ ವಂದಿಸಿ, ಅರ್ಚಿತಾ ನಿರೂಪಿಸಿದರು.

Read More