Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಇದರ ವತಿಯಿಂದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಶ್ವದಾಖಲೆ ಮೂಡಿಸಿರುವ ಹೆಮ್ಮೆಯ ಯುವ ಗಾಯಕರಾದ ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಇವರಿಗೆ ‘ಯಶೋಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಅಪರಾಹ್ನ 4-30 ಗಂಟೆಗೆ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಪ್ರಸಿದ್ಧ ಕೊಂಡೆವೂರು ಸಹೋದರಿಯರಾದ ಕುಮಾರಿ ಗಾಯತ್ರೀ, ಕುಮಾರಿ ಶ್ರಾವಣ್ಯ ಮತ್ತು ಕುಮಾರಿ ಮೋಕ್ಷಪ್ರಭಾ ಇವರಿಂದ ವಯೊಲಿನ್ ಟ್ರಯೋ ಸಂಗೀತ ಕಛೇರಿಗೆ ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಮತ್ತು ಮೋರ್ಸಿಂಗ್ ನಲ್ಲಿ ಸುಧಾಮ ಆಚಾರ್ಯ ಇವರುಗಳು ಸಹಕರಿಸಲಿದ್ದಾರೆ. ‘ಯಶೋಭಿನಂದನೆ’ ಸಮಾರಂಭವನ್ನು ಮಾಜಿ ಮೊಕ್ತೇಸರರಾದ ಮುನಿಯಾಲ್ ದಾಮೋದರ ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದು, ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ ಪಾಂಡೇಶ್ವರ ಇವರು ಶುಭಾಶಂಸನೆ ಗೈಯ್ಯಲಿದ್ದಾರೆ. ನಿರಂತರ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವಗ್ರಹ ಗುಡಿಯಲ್ಲಿ ದಿನಾಂಕ 06 ಜುಲೈ 2025ರಂದು ತಾಳಮದ್ದಳೆ ‘ವಾಲಿ ಮೋಕ್ಷ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಸಮರ್ಥ ವಿಷ್ಣು ಮತ್ತು ಮಾಸ್ಟರ್ ಸನತ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ (ಶ್ರೀರಾಮ), ಗುಂಡ್ಯಡ್ಕ ಈಶ್ವರ ಭಟ್ (ವಾಲಿ), ಮಾಂಬಾಡಿ ವೇಣುಗೋಪಾಲ ಭಟ್ (ಸುಗ್ರೀವ) ಮತ್ತು ಸುಬ್ಬಯ್ಯ ರೈ ಸುಳ್ಯಪದವು (ತಾರೆ )ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಸಹಕರಿಸಿದರು.
ಮೂಡುಬಿದಿರೆ : ಕಳೆದ ನಲುವತ್ತನಾಲ್ಕು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2024ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು, ಹಿರಿಯ ಸಾಹಿತಿ ಉಡುಪಿಯ ಶ್ರೀ ಪ್ರೇಮಶೇಖರ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಹೊಸ ಪೀಳಿಗೆಯ ಮಹತ್ವದ ವಿಮರ್ಶಕ ಹಾವೇರಿಯ ಶ್ರೀ ವಿಕಾಸ ಹೊಸಮನಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ, ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂಪಾಯಿ ಹದಿನೈದು ಸಾವಿರ ಗೌರವ ಸಂಭಾವನೆ, ತಾಮ್ರಪತ್ರದ ಜೊತೆ ಸನ್ಮಾನವನ್ನು ಒಳಗೊಂಡಿವೆ. ಮೂಡುಬಿದಿರೆಯಲ್ಲಿ 05 ಜೂನ್ 2025ರ ಶನಿವಾರ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಉಪಾಧ್ಯಕ್ಷರಾದ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ. ಬಿ. ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ. ಬಿ. ಪಿ. ಸಂಪತ್ ಕುಮಾರ್ ಮತ್ತು ವಿಮರ್ಶಕ…
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಗಾಡಿಕೊಪ್ಪ ಶಿವಮೊಗ್ಗ ಇವರ ಸಹಯೋಗದಲ್ಲಿ 239ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ದಿನಾಂಕ 10 ಜುಲೈ 2025ರಂದು ಸಂಜೆ 6-00 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಐ.ಎ.ಎಸ್. ಇವರು ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಸಾಹಿತಿ ಡಾ. ಶಾಂತಾರಾಮ ಪ್ರಭುಗಳು ಮಾತು – ಮಂಥನ ಕಾರ್ಯಕ್ರಮ ನಡೆಸಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ ಡಿ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆ.ಎಸ್. ಮಂಜಪ್ಪ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಸವಿತಾ, ಶ್ರೀಮತಿ ನಳಿನಿ ನಾರಾಯಣ ಇವರಿಂದ ಹಾಡು, ಕುಮಾರಿ ಗೌರಿಶ್ರೀ, ವಾಗೀಶ್ ಆರಾಧ್ಯ ಮಠ,…
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಥೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಥೆ ಮತ್ತು ಲಲಿತ ಪ್ರಬಂಧ ಸ್ವಂತ ರಚನೆಯಾಗಿರಬೇಕು. ಪ್ರಕಟಿತ ಮತ್ತು ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕಥೆ, ಲಲಿತ ಪ್ರಬಂಧ ಒಂದು ಸಾವಿರ ಪದಗಳನ್ನು ಮೀರಬಾರದು. ಹೊಸ ಆಲೋಚನೆ, ಹೊಸ ಹೊಳಹುಗಳ ಬರಹವಾಗಿರಬೇಕು. ಕಥಾ ವಿಭಾಗ ಹಾಗೂ ಲಲಿತ ಪ್ರಬಂಧ ವಿಭಾಗಗಳಲ್ಲಿ ಪ್ರಥಮ ಬಹುಮಾನ ರೂ.3 ಸಾವಿರ, ದ್ವಿತೀಯ ಬಹುಮಾನ ರೂ.2 ಸಾವಿರ, ತೃತೀಯ ಬಹುಮಾನ ರೂ.1 ಸಾವಿರ ಒಳಗೊಂಡಿದೆ. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಬರಹ ಕಳಿಸಲು ದಿನಾಂಕ 04 ಆಗಸ್ಟ್ 2025 ಅಂತಿಮ ದಿನವಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಮಂಗಳೂರು : ಕಲಾಭಿ ಥಿಯೇಟರ್ ಮತ್ತು ಚೌಕಿ ಮನೆ ಟ್ರಸ್ಟ್ ಪ್ರಸ್ತುತ ಪಡಿಸುವ ‘ನಿಮ್ಮೊಳಗಿನ ಜಗತ್ತು’ ಕಲ್ಪನೆಯ ಕುರಿತು ನಟನಾ ಕಾರ್ಯಾಗಾರವನ್ನು ದಿನಾಂಕ 21ರಿಂದ 26 ಜುಲೈ 2025ರವೆರೆಗೆ ಪ್ರತಿದಿನ ಸಂಜೆ 6-00ರಿಂದ 9-00 ಗಂಟೆ ತನಕ ಮಂಗಳೂರಿನ ಬೊಂದೇಲ್ ಪಡುಶೆಡ್ಡೆ ರೋಡಿನಲ್ಲಿರುವ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಹೆಗ್ಗೋಡು ನೀನಾಸಂ ಇದರ ಹಳೆಯ ವಿದ್ಯಾರ್ಥಿ ಮಂಜು ಕಾಸರಗೋಡು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ 84316 31998 ಸಂಖ್ಯೆಯನ್ನು ಸಂಪರ್ಕಿಸಿರಿ.
ಪುತ್ತೂರು : ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇವರ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಇವರ ವತಿಯಿಂದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ‘ಕುರಿಯ ವಿಠಲ ಶಾಸ್ತ್ರಿ’ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 06 ಜುಲೈ 2025ರಂದು ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರಗಿತು. ಈ ಸಮಾರಂಭದಲ್ಲಿ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುತ್ತಾ “ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ ದಿ. ಪೆರುವಡಿ ನಾರಾಯಣ ಭಟ್ಟರು ಬದುಕಿ ತೋರಿಸಿದ್ದರು. ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದು. ಅದಕ್ಕೆ ಕಲಾವಿದನನ್ನು ಆಯ್ಕೆ ಮಾಡುವಲ್ಲಿ ಬದ್ಧತೆ ಮುಖ್ಯ. ಹಾಗೆ ಆಯ್ಕೆ ಮಾಡಿದ ಕಲಾವಿದದ ಬದುಕು ಕೂಡಾ ಆದರ್ಶವಾಗಿರಬೇಕು. ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ‘ಕೊಡಗು ಮಳೆಗಾಲ ಚುಟುಕು ಕವಿಗೋಷ್ಠಿ’, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 06 ಜುಲೈ 2025ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷರಾದ ಕವಿ, ಸಾಹಿತಿ, ವ್ಯಂಗ್ಯ ಚಿತ್ರಕಾರ, ಪತ್ರಕರ್ತ ಶ್ರೀ ವಿರಾಜ್ ಅಡೂರ್ ಹಾಗೂ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಪ್ರದಾನ ಕಾರ್ಯದರ್ಶಿಯಾದ ಸಂಘಟಕ, ಕಲಾವಿದ, ಫೋಟೋಗ್ರಾಫರ್ಸ್ ಅಸೋಶಿಯಷನ್ ಪದಾಧಿಕಾರಿಯಾದ ಶ್ರೀ ವಸಂತ್ ಕೆರೆಮನೆ ಇವರನ್ನು ಮಡಿಕೇರಿಯ ಪತ್ರಿಕಾ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇರಳ ರಾಜ್ಯ – ಕನ್ನಡ ಚುಟುಕು…
ಮಂಗಳೂರು : ಸಂಕೇತ ಮಂಗಳೂರು ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ ದಿನಾಂಕ 03 ಜುಲೈ 2025ರಂದು ಮಂಗಳೂರಿನ ಹೊಯಿಗೆಬಜಾರಿನಲ್ಲಿರುವ ಇಂದಿರಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿ ಮಾತನಾಡಿ “ಜನಸಾಮಾನ್ಯರಿಗೆ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿದ ಮಾಧವ ತಿಂಗಳಾಯರು ತುಳುನಾಡಿನ ಮೊದಲ ನಾಟಕಗಾರರಾಗಿದ್ದಾರೆ. ಅವರ ‘ಜನಮರ್ಲ್’ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಯುವ ಜನತೆ ಯಲ್ಲಿ ತುಳು ಸಾಹಿತ್ಯದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹಿರಿಯ ಸಾಧಕರನ್ನು ನೆನಪಿಸುವ ಕಾರ್ಯಕ್ರಮ ನಿರಂತರವಾಗಿ ಮಾಡಬೇಕು” ಎಂದರು. ಸಾಹಿತಿ ಪ್ರೇಮಚಂದ್ರ ಕೆ. ತಿಂಗಳಾಯ ಮಾತನಾಡಿ “ಹಿರಿಯ ಸಮಾಜ ಸುಧಾರಕ ಮೋಹನಪ್ಪ ತಿಂಗಳಾಯ, ಕೃಷ್ಣಪ್ಪ ತಿಂಗಳಾಯ ಮತ್ತು ಮಾಧವ ತಿಂಗಳಾಯರು ಶ್ರೀ ಜ್ಞಾನೋದಯ ಸಮಾಜದ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಮಾಡಿದ ಕಾರ್ಯಗಳು ಅನನ್ಯವಾದವುಗಳು”…
ಬೆಂಗಳೂರು : ರಾಮಕೃಷ್ಣ ಮಠ, ಬುಲ್ ಟೆಂಪುಲ್ ರಸ್ತೆ, ಬಸವನಗುಡಿ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ರಾಮಕೃಷ್ಣ ಸಂಗೀತ ಸೌರಭ’ ಕಾರ್ಯಕ್ರಮವನ್ನು ದಿನಾಂಕ 11, 12 ಮತ್ತು 13 ಜುಲೈ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ಜುಲೈ 2025ರಂದು ಪಂಡಿತ್ ವೆಂಕಟೇಶ್ ಕುಮಾರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಪಂಡಿತ್ ರಘುನಾಥ ನಾಕೋಡ್ ಇವರು ತಬಲಾ ಮತ್ತು ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ದಿನಾಂಕ 12 ಜುಲೈ 2025ರಂದು ವಿದ್ವಾನ್ ಡಿ. ಬಾಲಕೃಷ್ಣ ಇವರ ಕರ್ಣಾಟಕ ಸಂಗೀತ ವೀಣಾ ವಾದನಕ್ಕೆ ವಿದ್ವಾನ್ ವಿ. ವಂಶಿಧರ ಕೊಳಲು, ವಿದ್ವಾನ್ ಬಿ.ಎಸ್. ಪ್ರಶಾಂತ ಮೃದಂಗಂ ಹಾಗೂ ವಿದ್ವಾನ್ ಶಮಿತ್ ಗೌಡ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 13 ಜುಲೈ 2025ರಂದು ಕುಮಾರ್ ಮೋದಕ ಮತ್ತು ವೃಂದದವರಿಂದ ಗಾಯನ, ಕುಮಾರ್ ಪ್ರದ್ಯುಮ್ನ ಕರ್ಪೂರ್ ತಬಲಾ ಸೋಲೋ ಮತ್ತು…