Subscribe to Updates
Get the latest creative news from FooBar about art, design and business.
Author: roovari
05 ಏಪ್ರಿಲ್ 2023, ಕೊಡಗು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ :94483 46276. ಇಲ್ಲಿಗೆ ದಿನಾಂಕ 20.04.2023ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
05 ಏಪ್ರಿಲ್ 2023, ಕುಶಾಲನಗರ: ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ (ರಿ) ಕುಶಾಲನಗರ ಇವರು ಶ್ರೀ ರಾಮನವಮಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಮತ್ತು ವಿದುಷಿ ಅಯನಾ ವಿ ರಮಣ್ ಅವರು ” ನಾಟ್ಯಾಯನ” ಎನ್ನುವ ವಿಭಿನ್ನ ಪರಿಕಲ್ಪನೆಯ ನೃತ್ಯ ಕಾರ್ಯಕ್ರಮ ಜನಮನ ಸೆಳೆಯಿತು.ಶ್ರೀ ಕೆ.ವಿ.ರಮಣ್ ಅವರು ಕಾರ್ಯಕ್ರಮದ ಪರಿಕಲ್ಪನೆಯನ್ನು ರೂಪಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಮೂಕಾಂಬಿಕಾ ಜಿ.ಎಸ್ ಅವರು ಕಾರ್ಯಕ್ರಮದ ನಿರ್ವಹಿಸಿದರು.
04 ಏಪ್ರಿಲ್ 2023 ಬೆಂಗಳೂರು: “ಆಜೀವಿಕ” ಅರ್ಪಿಸುವ ಬಾದಲ್ ಸರ್ಕಾರ್ ಅವರ ‘ಭೂಲ್ ರಾಸ್ತ” ಟಿಪ್ಪಣಿಯನ್ನು ಆಧರಿಸಿ ಲಕ್ಷ್ಮೀಪತಿ ಕೋಲಾರ ಅವರು ರಚಿಸಿದ ಕೃತಿ “ಮರೆತ ದಾರಿ”. ಈ ಕೃತಿ ಡಾ. ಉದಯ್ ಸೋಸಲೆಯವರ ನಿರ್ದೇಶನದಲ್ಲಿ ದಿನಾಂಕ 08-04-2023ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಹನುಮಂತ್ ಮಂಡ್ಯ ಮತ್ತು ದುರ್ಗಬುಡ್ಡಿ ದೀಪರವರ ಸಂಗೀತದಲ್ಲಿ ಮೂಡಿ ಬರುವ ಈ ನಾಟಕಕ್ಕೆ ವಾಸವಿಯವರು ಸಹಾಯಕ ನಿರ್ದೇಶಕರಾಗಿದ್ದಾರೆ. ನಾಟಕದ ಬಗ್ಗೆ: ಭ್ರಮಾ ಬಿತ್ತಿಯ ವಾಸ್ತವ ನಿರೂಪಣೆ : ‘ಮರೆತ ದಾರಿ’ ಮರೆತ ದಾರಿ ನಾಟಕವು ದಿವಂಗತ ಬಾದಲ್ ಸರ್ಕಾರ್ ಅವರು ಬರೆಯ ಬಹುದಾಗಿದ್ದ ತಾವೇ ನಟಿಸಬೇಕೆಂದು ಆಶಿಸಿದ್ದ ಅವರ ಕೊನೆಯ ನಾಟಕ ‘ಭೂಲ್ ರಾಸ್ತಾ’ ಗೆ ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಆಧರಿಸಿದ್ದು. ಅದು ನಾಟಕವಾಗುವ ಮುನ್ನವೇ ಅವರು ಕಾಲಾತೀತರಾದರು. ಸರ್ವಾಧಿಕಾರ ಮತ್ತು ಗೆದ್ದಲು ಹಿಡಿದ ವ್ಯವಸ್ಥೆಯ ಭಾಗವಾಗಿದ್ದ ರಾಜಕುಮಾರನೊಬ್ಬ ಕಾಡಲ್ಲಿ ದಾರಿ ತಪ್ಪಿ ನಿಸರ್ಗ ಸಹಜವಾದ ಸ್ವಚ್ಛಂದವೂ, ಆನಂದಮಯವೂ ಆದ ಜೀವಂತಿಕೆಯ ಭಿನ್ನ…
05 ಏಪ್ರಿಲ್ 2023, ಮಂಗಳೂರು: ಕೊರೊನಾ ಸಮಯದಲ್ಲಿ ಶ್ರೀ ಶುಭಕರ ಮತ್ತು ಅವರ ಸಹೋದ್ಯೋಗಿ ಕನ್ನಡ ಉಪನ್ಯಾಸಕರಾದ ಸುರೇಶ್ ರಾವ್ ಅತ್ತೂರು ಅವರಲ್ಲಿ ಗಮಕ ಅಭ್ಯಾಸ ಮಾಡಿ ಪ್ರಥಮ ಪರೀಕ್ಷೆ ಹಾಜರಾದರು. ಶ್ರೀ ಸುರೇಶ್ ರಾವ್ ಅವರಿಗೆ ಮಂಗಳೂರಿನಲ್ಲಿ ಗಮಕ ಪರಿಷತ್ ಆಗ ಬೇಕೆಂಬ ಇಚ್ಛೆ ಇತ್ತು. ಇದನ್ನರಿತ ಶ್ರೀ ಶುಭಕರ ಇವರು ಒಂದು ಸಂಸ್ಥೆಯ ಮೂಲಕ ಮುಂದುವರಿಯುವ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಕಡೆ ಗಮಕ ಪರಿಷತ್ತು ಇದ್ದರೂ ಮಂಗಳೂರಲ್ಲಿ ಗಮಕ ಪರಿಷತ್ತು ಇರಲಿಲ್ಲ ಎಂಬುದನ್ನು ಮನಗಂಡು ಸಮಾನ ಮನಸ್ಕರು ಜನವರಿ ತಿಂಗಳಲ್ಲಿ ಒಂದು ಕಡೆ ಸೇರಿ ವಿಚಾರ ವಿನಿಮಯ ನಡೆಸಿ, ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಸಲಹೆಗಾರರಾಗಿ ಪ್ರೊ. ಎಂ.ಬಿ. ಪುರಾಣಿಕ ಮತ್ತು ಎಂ.ಆರ್. ವಾಸುದೇವ, ಕಾರ್ಯಾಧ್ಯಕ್ಷರಾಗಿ ಸುರೇಶ್ ರಾವ್ ಅತ್ತೂರು, ಕಾರ್ಯದರ್ಶಿಯಾಗಿ ಶುಭಕರ ಕೆ. ಪುತ್ತೂರಾಯ ಜೊತೆ ಕಾರ್ಯದರ್ಶಿಗಳಾಗಿ ಯಶೋಧಾ ಕುಮಾರಿ ಮತ್ತು ರಮೇಶ್ ಆಚಾರ್ಯ, ಕೋಶಾಧಿಕಾರಿಯಾಗಿ ಚಂದ್ರಿಕಾ ಸುರೇಶ್ ರಾವ್,…
05 ಏಪ್ರಿಲ್ 2023, ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರ ಹಳ್ಳಿ ಅಂಚೆ, ಕೋಲಾರ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಹುಣ್ಣಿಮೆ ಹಾಡು 191 ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 06-04-2023 ಗುರುವಾರ ಸಂಜೆ 7-00ಕ್ಕೆ ರಂಗ ಪ್ರದರ್ಶನ ಕಲಾ ಕೇಂದ್ರ, ಬೆಂಗಳೂರು ಇವರಿಂದ ವಿಲಿಯಮ್ ಶೇಕ್ಸ್ ಪಿಯರ್ ರಚನೆಯ “ಮ್ಯಾಕ್ ಬೆತ್” ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಂಗ ನಿರ್ದೇಶಕರಾದ ಮೈಕೊ ಶಿವಶಂಕರ್, ಶಿಕ್ಷಕರ ಗೆಳೆಯರ ಬಳಗ ಕೋಲಾರ ಇದರ ಅಧ್ಯಕ್ಷರಾದ ಎಸ್. ನಾರಾಯಣ ಸ್ವಾಮಿ ಹಾಗೂ ರಂಗ ಇಂಚರ ಟ್ರಸ್ಟ್, ಕೋಲಾರ ಇದರ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಈ ನಾಟಕವನ್ನು ರಾಮಚಂದ್ರ ದೇವ ಕನ್ನಡಕ್ಕೆ ಅನುವಾದಿಸಿದ್ದು, ಮೈಕೊ ಶಿವಶಂಕರ್ ನಿರ್ದೇಶಿಸಿ, ವೆಂಕಟೇಶ್ ಜೋಶಿ ಮತ್ತು ಸುಮುಖ್ ಭಾರದ್ವಾಜ್ ರವರ ಸಂಗೀತ ಈ ನಾಟಕಕ್ಕಿದೆ. ರಾಮಕೃಷ್ಣ ಬೆಳ್ತೂರು ವಸ್ತ್ರ ವಿನ್ಯಾಸ/ ಪ್ರಸಾಧನದಲ್ಲಿ ಸಹಕರಿಸಲಿದ್ದು, ರವಿಶಂಕರ್ ಮತ್ತು…
04 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ 2ನೇ ದಿನದ ರಂಗೋತ್ಸವದಲ್ಲಿ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರಿಂದ “ಹೂವಿನಕೋಲು” ಕಲಾಪ್ರಕಾರ ಭಾನುವಾರ 02-04-2023ರಂದು ಪ್ರದರ್ಶನಗೊಂಡಿತು. ನಂತರ ಅತಿಥಿಯಾಗಿ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಜೊತೆಗಿದ್ದು, ಸಾಂಸ್ಕೃತಿಕ ಮತ್ತು ಆಧ್ಯಾತ್ಮದ ಆಯಾಮದ ಕೊರತೆಯಿದೆ. ಅದೇ ಒಂದು ದೊಡ್ಡ ಸೇವೆ. ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಎರಡನ್ನೂ ಮಾಡ್ತಾ ಇರೊ ಮಂದಾರದ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ ಮಂದಾರ (ರಿ.)ದ ತಂಡಕ್ಕೆ ಲೋಗೋವನ್ನು ರೂಪಿಸಿದ ಶ್ರೀ ಉದಯ ಗಾಂವ್ಕರ್ ಇವರಿಗೆ ಮಂದಾರದ ಪರವಾಗಿ ರಂಗ ಗೌರವ ಸಲ್ಲಿಸಲಾಯಿತು. ತದನಂತರ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪೆನಿ (ರಿ.) ಬಿಜಾಪುರ ಇವರಿಂದ ಶಕೀಲ್ ಅಹಮದ್ ನಿರ್ದೇಶನದ “ಅನಾಮಿಕನ ಸಾವು” ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
4 ಏಪ್ರಿಲ್ 2023, ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ”ಪಾರ್ಥ ಸಾರಥ್ಯ” ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರದಲ್ಲಿ ದಿನಾಂಕ 03-04-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಗುರುಮೂರ್ತಿ ಅಮ್ಮಣ್ಣಾಯ, ಅಚ್ಯು ತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ) ಗುಂಡ್ಯಡ್ಕ ಈಶ್ವರ ಭಟ್ (ಕೌರವ) ಕು೦ಬ್ಳೆ ಶ್ರೀಧರ್ ರಾವ್ (ಅರ್ಜುನ) ಗುಡ್ಡಪ್ಪ ಬಲ್ಯ (ಬಲರಾಮ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.
04 ಏಪ್ರಿಲ್ 2023, ಮಂಗಳೂರು: ದಿನಾಂಕ 01-04-23ರಂದು ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್ ರವರ ‘ಗೃಹಾವರಣ’ ಎಂಬ ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಿತು. ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯನ್ನು ಬಿಡುಗಡೆಗೊಳಿಸಿ, “ಗೃಹದೊಳಗಿನ ಹಲವು ಮುಖಗಳು ಕೃತಿಯಲ್ಲಿ ಅನಾವರಣಗೊಂಡಿವೆ. ಮನೆ ಎಂದರೆ ಅದು ಕಲ್ಲು ಕಟ್ಟಡದ ಭೌತಿಕ ಸ್ವರೂಪವಲ್ಲ. ಮನಸ್ಸುಗಳನ್ನು ಬೆಸೆಯುವ ಮೂಲಕ ಸಂಬಂಧಗಳನ್ನು ಹೆಣೆಯುವ ಆಶ್ರಯ ತಾಣ. ‘ಗೃಹಾವರಣ’ ಮನಸ್ಸುಗಳನ್ನು ಬೆಸೆಯುವ ಕಾಯಕ ಗೈದ ಪ್ರೀತಿಯ ಕೃತಿ” ಎಂದರು. ಸೈಂಟ್ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಕೆ. ಇವರು ಕೃತಿಯನ್ನು ಪರಿಚಯ ಮಾಡಿ “ಇವರ ಬರಹಗಳ ಲಾಲಿತ್ಯಮಯ ಶೈಲಿ ಓದುಗರನ್ನು ಸೆಳೆಯುತ್ತದೆ. ಗೃಹಿಣಿ ಗೃಹ ಮುಚ್ಯೆತೆ ಎಂದ ಪ್ರಾಜ್ಞರ ಮಾತನ್ನು ನೆನಪಿಸಿಕೊಂಡು ಗೃಹ ನಿರ್ವಹಣೆಯಲ್ಲಿ ಗೃಹಣಿಯ ಪಾತ್ರ ಮಹತ್ವದ್ದು. ಆಕೆಯ ಸಮಯ, ಶ್ರಮ, ಪ್ರೇಮ, ಮನೆಯೊಳಗಿನ ಭಾವಜಗತ್ತನ್ನು ಅವರಿಸಿಕೊಳ್ಳುತ್ತದೆ” ಎಂದರು. ಕೃತಿಯ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್…
03-04-2023,ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ಉದಯರಾಗದ 42ನೇ ಸಂಗೀತ ಕಚೇರಿಯು ಸುರತ್ಕಲ್ ನ ಅನುಪಲ್ಲವಿಯಲ್ಲಿ ದಿನಾಂಕ 02-04- 2022ರಂದು ನಡೆಯಿತು. ಪುತ್ತೂರಿನ ತನ್ಮಯಿ ಉಪ್ಪಂಗಳ ಸುಶ್ರಾವ್ಯವಾದ ಹಾಡುಗಾರಿಕೆ ಕಚೇರಿ ನಡೆಸಿಕೊಟ್ಟರು. ಇವರಿಗೆ ಗೌತಮ್ ಭಟ್ ಪಿ.ಜಿ ವಯಲಿನ್ ನಲ್ಲಿ ಮತ್ತು ಅಜಯ ಕೃಷ್ಣ ಉಪ್ಪಂಗಳ ಮೃದಂಗದಲ್ಲಿ ಸಹಕರಿಸಿದರು.ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಲಾವಿದರನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ ರಾಜಮೋಹನ್ ರಾವ್, ಸಚ್ಚಿದಾನಂದ ಕೆ, ರಘುರಾಮ್ ರಾವ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು .ರಘುರಾಮ ಮತ್ತು ಸುಮನ ಉಪ್ಪಂಗಳ ಇವರ ಪುತ್ರಿಯದ ಕು. ತನ್ಮಯ ಉಪ್ಪಂಗಳ ಇವರು ವಿದುಷಿ ಶ್ರೀಮತಿ ವೀಣಾ ರಾಘವೇಂದ್ರ ಮತ್ತು ವಿದುಷಿ ಶ್ರೀಮತಿ ಶೈಲಜಾ ಶ್ರೀರಾಮ್ ಇವರಿಂದ ಸಂಗೀತಾಭ್ಯಾಸವನ್ನು ಮತ್ತು ವಿದ್ವಾನ್ ವೇಣುಗೋಪಾಲ ಶಾನುಭಾಗ್ ಮತ್ತು ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರುಗಳಿಂದ ವಾಯ್ಲಿನ್ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 97…
ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷಗಾನ ಮಹಿಳಾ ಪ್ರಸಂಗಕರ್ತರು ಕಾಣ ಸಿಗುವುದು ಅಪರೂಪ. ಇಂತಹ ಪ್ರಸಂಗಕರ್ತೆ ಪೈಕಿ ಮಿಂಚುತ್ತಿರುವವರು ಶ್ರೀಮತಿ ಶಾಂತಾ ವಾಸುದೇವ ಪೂಜಾರಿ. ಮಹಾಬಲ ಪೂಜಾರಿ, ದೇವಲ್ಕುಂದ ಹಾಗೂ ನೀಲು ಪೂಜಾರ್ತಿ,ಆನಗಳ್ಳಿ ಇವರ ಮಗಳಾಗಿ 11.07.1976ರಂದು ಜನನ. ಶ್ರೀ ಶಾರದ ಕಾಲೇಜು, ಬಸ್ರೂರುನಲ್ಲಿ ಬಿ.ಎ.ಪದವಿ ಹಾಗೂ ಕಂಪ್ಯೂಟರ್ ಶಿಕ್ಷಣ ಇವರ ವಿದ್ಯಾಭ್ಯಾಸ. ತವರುಮನೆ, ಅಜ್ಜ ಬಳ್ಕೂರು ನಂದಿ ಪೂಜಾರಿ ಮತ್ತು ಅಜ್ಜಿ ರುಕ್ಮಿಣಿ ಪೂಜಾರ್ತಿ ಯವರಿಂದ ರಕ್ತಗತವಾಗಿ ಹರಿದು ತಾಯಿಯಿಂದ ವರಪ್ರಸಾದವಾಗಿ ಪಡೆದ ಯಕ್ಷಗಾನದ ಮೇಲಿನ ಅದಮ್ಯ ಪ್ರೇಮ ಬರವಣಿಗೆಯಲ್ಲಿ ಚಿರಂತನವಾಯಿತು. ತಂದೆ ಮಹಾಬಲ ಪೂಜಾರಿಯವರ ಕಲಾಸೇವೆ, ಸೋದರಮಾವ ಕೃಷ್ಣ ಪೂಜಾರಿಯವರು ಮತ್ತು ಅಣ್ಣ ರವಿಕುಮಾರ್, ಹಾಗೂ ತಮ್ಮ ಸಂತೋಷ ಕುಮಾರ್ ರವರು ಶ್ರೀ ಲಕ್ಷ್ಮೀ ಚೆನ್ನಕೇಶವ ಯಕ್ಷಗಾನ ಕಲಾ ಮಂಡಳಿ, ಆನಗಳ್ಳಿ ಯಲ್ಲಿ ಹವ್ಯಾಸಿ ಕಲಾವಿದರಾಗಿ ಸಲ್ಲಿಸಿದ ಸೇವೆ ಇವರ ಬರವಣಿಗೆಗೆ ಪ್ರೇರಣೆ. ಶ್ರೀಮತಿ ಶಾಂತಾ ವಾಸುದೇವ ಪೂಜಾರಿ ಅವರು ಬರೆದಿರುವ…