ಉಡುಪಿ : ನರಸಿಂಹ ಪ್ರತಿಷ್ಠಾನ ಬೆಳ್ಳಂಪಳ್ಳಿ ಉಡುಪಿ ಇದರ ವತಿಯಿಂದ ಭಾವ ಮತ್ತು ಚಲನೆಗಳ ಹೊಸ ಹುಡುಕಾಟ ‘ಅವ್ಯಕ್ತ’ ರಂಗ ಚಲನೆಗಳ ಕಾರ್ಯಾಗಾರವನ್ನು ದಿನಾಂಕ 18 ಮತ್ತು 19 ಏಪ್ರಿಲ್ 2026ರಂದು ಉಡುಪಿಯ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಜೈ ಹಿಂದ್ ಶಾಲೆ ಎದುರು ಆಯೋಜಿಸಲಾಗಿದೆ.
ನೃತ್ಯದ ಭಾವಗಳ ಮತ್ತು ರಸದ ಸಮಕಾಲೀನ ಸಾಧ್ಯತೆಗಳು, ರಂಗ ಚಲನೆಗಳು ಮತ್ತು ನೃತ್ಯ, ಶಾಸ್ತ್ರೀಯತೆಯಲ್ಲಿ ಸಮಕಾಲೀನ ಸಂಚಾರಿ ಇವುಗಳ ಬಗ್ಗೆ ಈ ಕಾರ್ಯಾಗಾರ ನಡೆಯಲಿದೆ. ತೃಷಾ ಶೆಟ್ಟಿ ಮತ್ತು ಪ್ರಶಾಂತ್ ಉದ್ಯಾವರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 8762115580 ಸಂಖ್ಯೆಯನ್ನು ಸಂಪರ್ಕಿಸಿರಿ.

