ಮೈಸೂರು : ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ನೀಡಲಾಗುವ 2024ನೇ ಸಾಲಿನ ‘ಶಿವರಾತ್ರೀಶ್ವರ ಪ್ರಶಸ್ತಿ’ಗೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಅನುವಾದಕ, ದಿವಂಗತ ಪ್ರೊ. ಭಾಲಚಂದ್ರ ಜಯಶೆಟ್ಟಿಯವರ ‘ಅಧ್ಯಾತ್ಮ ಕ್ರಾಂತಿವೀರ ಮಹಾತ್ಮ ಶ್ರೀ ಬಸವೇಶ್ವರ್ ಕೇ ವಚನ್’ ಹಿಂದಿ ಕೃತಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕ, ಸ್ವಸ್ತಿವಾಚನ ಹಾಗೂ ಇಪ್ಪತ್ತೈದು ಸಾವಿರ ರೂ. ನಗದು ಒಳಗೊಂಡಿದ್ದು, ಪುರಸ್ಕೃತರ ಕುಟುಂಬದವರಿಗೆ ಪ್ರದಾನ ಮಾಡಲಾಗುವುದು ಎಂದು ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ತಿಳಿಸಿದ್ದಾರೆ.
