Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಬಂಗಾರದ ಮನುಷ್ಯ- ಗಾನ ಜೀವನ ಯಾನ’ – ಅಪೂರ್ವ ಗಾನಸುಧೆ | ಏಪ್ರಿಲ್ 23
    Music

    ‘ಬಂಗಾರದ ಮನುಷ್ಯ- ಗಾನ ಜೀವನ ಯಾನ’ – ಅಪೂರ್ವ ಗಾನಸುಧೆ | ಏಪ್ರಿಲ್ 23

    April 22, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಚಿತ್ರರಂಗದ ದಿಗ್ಗಜ ನಟ ಅಭಿನಯ ಸಾರ್ವಭೌಮ ಡಾ. ರಾಜಕುಮಾರ್ ಇವರು ಎಲ್ಲರ ಮನದಲ್ಲೂ ಸದಾ ಹಸಿರು ನೆನಪು. ಸಾಂಸ್ಕೃತಿಕ ಲೋಕಕ್ಕೆ ಈ ಬಂಗಾರದ ಮನುಷ್ಯನ ಕೊಡುಗೆ ಅನನ್ಯ. ಅವರ ಬಹುಮುಖ ಪ್ರತಿಭೆಯ ಪ್ರಜ್ವಲತೆ, ಕಾಲಾಂತರದಲ್ಲೂ ಚಿರಸ್ಥಾಯಿಯಾಗಿ ಉಳಿದುಕೊಂಡು ಬರುವಂಥ ಅನರ್ಘ್ಯ ಭಂಡಾರವದು. ಇಂಥದೊಂದು ಅವರ ಚಿರಸ್ಮರಣೀಯ ನೆನಪನ್ನು ಹೃದಯಸ್ಪರ್ಶಿಯಾಗಿಸುವ ಇನಿಸಂಜೆ ‘ಬಂಗಾರದ ಮನುಷ್ಯ – ಗಾನ ಜೀವನ ಯಾನ’ – ಎಂಬ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಇದನ್ನು ರೂಪಿಸಿರುವವರು ಸಂಗೀತ ಲೋಕದ ಪ್ರಖ್ಯಾತ ಗಾಯಕಿ, ಸಂಘಟಕಿ, ಪೋಷಕಿಯಾದ ‘ಸಂಗೀತ ಸಂಭ್ರಮ’ದ ಡಾ. ಪುಸ್ತಕಂ ರಮಾ, ಸುರಾಘವಿ ಫೌಂಡೆಶನ್ ನ ರಘುನಂದನ್ ಮತ್ತು ಬಾಬು ಸ್ಕೂಲ್ ಆಫ್ ರಿದಮ್ ನ ಅರುಣ್ ಕುಮಾರ್ ಇವರ ಸಹಯೋಗದೊಂದಿಗೆ ದಿನಾಂಕ 23 ಏಪ್ರಿಲ್ 2026 ಗುರುವಾರ ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ‘ಡಾ. ರಾಜಕುಮಾರ್ ಗಾನ ಜೀವನ ಯಾನ’ ಎಂಬ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಸಿರಿಕಂಠದಲ್ಲಿ ಹಾಡಿರುವ ಗಾನಸುಧೆಯನ್ನು ನಾಡಿನ ಪ್ರಖ್ಯಾತ ಗಾಯಕರಾದ ರಾಧಾಕೃಷ್ಣ ಮೋಹನ್, ಶ್ರೀಮತಿ ಸುಪ್ರಿಯ ರಘುನಂದನ್, ಶ್ರೀಹರ್ಷ, ಶ್ರೀಮತಿ ಲಕ್ಷ್ಮೀ ವಿಜಯ್ ಮತ್ತು ಕುಮಾರಿ ಸಾಕ್ಷಿ ಜಗದೀಶ್ ಇವರು ಹಾಡಿ ಕಲಾರಸಿಕರಿಗೆ ಶ್ರವ್ಯಾನಂದವನ್ನು ನೀಡಲಿದ್ದಾರೆ. ಇವರಿಗೆ ಹಿನ್ನೆಲೆಯಲ್ಲಿ ಅನೇಕ ಖ್ಯಾತ ವಾದ್ಯಗಾರರು ಸಾಂಗತ್ಯ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶ್ವತ್ಥನಾರಾಯಣ್ ಇವರು ವಹಿಸಲಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತ ನಟ ಶ್ರೀ ಪ್ರಕಾಶ್ ರಾಜ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ, ಖ್ಯಾತ ನಟರುಗಳಾದ ಡಾ. ಮುಖ್ಯಮಂತ್ರಿ ಚಂದ್ರು, ಎಂ.ಕೆ. ಸುಂದರ್ ರಾಜ್, ಖ್ಯಾತ ನಿರ್ದೇಶಕರಾದ ಡಾ. ಟಿ.ಎಸ್. ನಾಗಾಭರಣ ಮತ್ತು ಡಾ. ಗಿರಿಜಾ ಲೋಕೇಶ್ ನುಡಿ ನಮನಗಳನ್ನು ಸಲ್ಲಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ನಗೆ ಸಾರ್ವಭೌಮ ಶ್ರೀ ಗಂಗಾವತಿ ಪ್ರಾಣೇಶ್ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಆಯೋಜಕರು ಡಾ. ಪುಸ್ತಕಂ ರಮಾ, (ಕಾರ್ಯ ಆಯೋಜಕರು ಮತ್ತು ಸಂಘಟಕಿ) ಪರಿಕಲ್ಪನೆ ಮತ್ತು ವಾದ್ಯಗೋಷ್ಠಿ ನಿರ್ವಹಣೆ ರಘುನಂದನ್ ಮತ್ತು ಅರುಣ್ ಕುಮಾರ್. ಕಾರ್ಯಕ್ರಮಕ್ಕೆ ಪ್ರವೇಶ ‘ಬುಕ್ ಮೈ ಷೋ’ ಮೂಲಕ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಜೇಶ್ವರದಲ್ಲಿ ಕಾದಂಬರಿ ಮತ್ತು ಕಥಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ | ಏಪ್ರಿಲ್ 28
    Next Article ಬೆಂಗಳೂರಿನ ಸೇವಾ ಸದನದಲ್ಲಿ ‘ಹೋಂ ರೂಲು’ ಕೈಲಾಸಂ ಹಾಸ್ಯ ನಾಟಕ | ಏಪ್ರಿಲ್ 23
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.