ಬೆಂಗಳೂರು : ಬೆಂಗಳೂರಿನ ರಂಗಮಂಡಲ ಸಿವಗಂಗ ಟ್ರಸ್ಟ್ ಇವರು ಮಲ್ಲಕಾರ್ಜನಸ್ವಾಮಿ ಮಹಾಮನೆ ಇವರ ನಿರ್ದೇಶನದಲ್ಲಿ ಆಯೋಜಿಸುವ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರವು ದಿನಾಂಕ 06 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ಬೆಳಿಗ್ಗೆ ಘಂಟೆ 9.30 ರಿಂದ ಮಧ್ಯಾಹ್ನ 1.00ರ ತನಕ ಬೆಂಗಳೂರಿನ ಕೆಂಗೇರಿ ಉಪನಗರ 1ನೇ ವಿಭಾಗದಲ್ಲಿರುವ # 3386 ಸರ್. ಎಂ. ವಿ. ಬಡಾವಣೆಯಲ್ಲಿರುವ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನಟನೆ, ನೃತ್ಯ, ಸಂಗೀತ, ಚಿತ್ರಕಲೆ, ಬೊಂಬೆಯಾಟ, ಕಥಾಪ್ರಸ್ತುತಿ, ಮೂಕಾಭಿನಯ, ಮಕ್ಕಳ ಕವಿತಾವಾಚನ, ಕ್ಲ-ಮಾಡೆಲಿಂಗ್, ಒರಿಗಾಮಿ, ಗಾಳಿಪಟ, ಯೋಗ-ಧ್ಯಾನ, ನಿರೂಪಣಾ ಕಲಿಕೆ, ನಾಟಕ ಕಲಿಕೆ ಮತ್ತು ಪ್ರದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ – 9448970731, 9035093955

