ಬೆಂಗಳೂರು : ರಂಗಚಂದಿರ (ರಿ) ಮತ್ತು ರಂಗ ನಾಯಕ ಟ್ರಸ್ಟ್ ಆಯೋಜಿಸುವ ‘ಬೆಳಕಬಳ್ಳಿ ಅ.ನ. ರಮೇಶ್ ನೆನಪು’ ಕಾರ್ಯಕ್ರಮವು ದಿನಾಂಕ 15 ಏಪ್ರಿಲ್ 2025ರಂದು ಸಂಜೆ 5-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ನಾಟಕ ಅಕಾಡೆಮಿ ಇದರ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀನಿವಾಸ ಜಿ. ಕಪ್ಪಣ್ಣ, ಸೆಂಟರ್ ಸ್ಟೇಜ್ ಗಂಗಾಧರ್, ಶಶಿಧರ ಅಡಪ, ಎನ್.ಎಸ್. ಚಿತ್ರಶೇಖರ್, ಚಂದ್ರಶೇಖರ್ ಮತ್ತು ರಾಧಾಕೃಷ್ಣ ಹೆಗಡೆ ಇವರಿಂದ ಒಡನಾಟದ ಮಾತುಗಳು, ಜೆ. ಲೋಕೇಶ್, ಡಾ. ನಾಗರತ್ನಮ್ಮ ಮರಿಯಮ್ಮನಹಳ್ಳಿ. ಜಿ.ಎನ್. ಮೋಹನ್, ಡಾ. ಟಿ.ಎಸ್. ವಿವೇಕಾನಂದ ಮತ್ತು ಜಯಶ್ರೀ ಕಂಬಾರ ಇವರುಗಳಿಗೆ ರಂಗ ಗೌರವ ಹಾಗೂ ಬೆಳಕು ವಿನ್ಯಾಸಕರಾದ ಟಿ.ಎಂ. ನಾಗರಾಜು ಮತ್ತು ಮಂಜುನಾರಾಯಣ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸ್ವರಾಮೃತ ಸಂಗೀತ ಶಾಲೆಯ ಮಕ್ಕಳಿಂದ ಗೀತೆಗಾಯನ, ಸಂಚಯ ತಂಡದಿಂದ ರಂಗಗೀತೆಗಳ ಪ್ರಸ್ತುತಿ, ಕುವೆಂಪುರವರ ‘ಜಲಗಾರ’ ನಾಟಕದ ದೃಶ್ಯಾಭಿನಯ ಮತ್ತು ಸಂಚಯ ವಿಜಯ್ ಅಭಿನಯಿಸುವ ‘ಮತ್ತೆ ವಸಂತ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ.