ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ವಿಶ್ವಂ ಸ್ಕೂಲ್ ಆಫ್ ಆರ್ಟ್ ನಲ್ಲಿ ಹಿರಿಯ ಪ್ರಸಿದ್ಧ ಸಂಗೀತಗಾರ ಹಾಗೂ ಸಂಗೀತ ನಿರ್ದೇಶನರಾದ ಕೆ. ರವಿಶಂಕರ್ ಇವರಿಂದ ಭಜನೆ ಹಾಗೂ ಸುಗಮಸಂಗೀತ ತರಗತಿಗಳು ಮಂಗಳೂರಿನ ರಥಬೀದಿಯಲ್ಲಿರುವ ವಿಶ್ವಂ ಸ್ಕೂಲ್ ಆಫ್ ಆರ್ಟ್ ನಲ್ಲಿ ಆರಂಭಗೊಳ್ಳಲಿವೆ. ಭಜನೆ, ಭಾವಗೀತೆ, ಭಕ್ತಿಗೀತೆ, ದೇಶಭಕ್ತಿ ಗೀತೆ, ಜಾನಪದ ಗೀತೆ ಹಾಗೂ ಹಾರ್ಮೋನಿಯಂ ತರಬೇತಿ ನೀಡಲಾಗುವುದು. ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರಮ್ಯ ಲಕ್ಷ್ಮೀಶ್ ಇವರ 9482184197 ಸಂಖ್ಯೆಯನ್ನು ಸಂಪರ್ಕಿಸಿರಿ.

