ಬಂಟ್ವಾಳ : ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ, ಭರತನಾಟ್ಯ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ಶಿಷ್ಯೆ ಕುಮಾರಿ ಆತ್ಮಿ ಶೆಟ್ಟಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 04 ಏಪ್ರಿಲ್ 2026ರಂದು ಸಂಪನ್ನಗೊಂಡಿತು.
ಆತ್ಮಿ ಶೆಟ್ಟಿ ಮತ್ತು ಆಕೆಯ ಗುರುಗಳ ಬದ್ಧತೆ ಮತ್ತು ಪರಿಶ್ರಮಕ್ಕೆ ಹೇಳಿದ ಕೈಗನ್ನಡಿಯಾಗಿ ರಂಗಪ್ರವೇಶ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ., ನೃತ್ಯಗಿರಿ ಮೈಸೂರು ಇದರ ನಿರ್ದೇಶಕರಾದ ಡಾ. ಕೃಪಾ ಫಡ್ಕೆ, ಯಕ್ಷದ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕರಾದ ಶ್ರೀಯುತ ಪಟ್ಲ ಗುತ್ತು ಸತೀಶ್ ಶೆಟ್ಟಿ, ಖ್ಯಾತ ಉದ್ಯಮಿಗಳಾದ ಶ್ರೀ ಚಂದ್ರಹಾಸ ಡಿ. ಶೆಟ್ಟಿ ಇವರು ಭಾಗವಹಿಸಿ ಆತ್ಮಿಯನ್ನು ಪ್ರೋತ್ಸಾಹಿಸಿದರು.







ಹಿಮ್ಮೇಳ ಕಲಾವಿದರಾಗಿ ನಟುವಾಂಗ ಮತ್ತು ನೃತ್ಯ ನಿರ್ದೇಶನ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಕಲ್ಲಡ್ಕ, ಹಾಡುಗಾರಿಕೆಯಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ ವೈಧಾತ್ರಿ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಬೆಂಗಳೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ ಬೆಂಗಳೂರು ಇವರು ಸಹಕರಿಸಿದರು.


