Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾಭವ 9ರಲ್ಲಿ ಮನಸೂರೆಗೊಂಡ ವಿದುಷಿ ನಿಧಿಯವರ ಭರತನಾಟ್ಯ ಪ್ರಸ್ತುತಿ
    Bharathanatya

    ಕಲಾಭವ 9ರಲ್ಲಿ ಮನಸೂರೆಗೊಂಡ ವಿದುಷಿ ನಿಧಿಯವರ ಭರತನಾಟ್ಯ ಪ್ರಸ್ತುತಿ

    June 2, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-09ರ ಕಾರ್ಯಕ್ರಮವು ದಿನಾಂಕ 31 ಮೇ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ವಿದುಷಿ ನಿಧಿ ಪುತ್ತೂರು ಇವರ ಏಕಾವ್ಯಕ್ತಿ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ ಜನಸಂಪರ್ಕ ಅಧಿಕಾರಿ ಹಾಗೂ ಕೌಶಲ್ಯ ಸಂಪರ್ಕ ಅಧಿಕಾರಿ ಆಗಿರುವ ಶ್ರೀಮತಿ ಮಾನಸ ಶೆಟ್ಟಿ ಇವರು ಕಲಾವಿದೆಯ ಪರಿಶ್ರಮ ಹಾಗೂ ಪ್ರಸ್ತುತಿಗೆ ಮೆಚ್ಚುಗೆ ಪಡಿಸಿ, ಜೊತೆಗೆ ಇಂತಹ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಾಸೂರ್ಯ ನೃತ್ಯಾಲಯದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

    ಕಾರ್ಯಕ್ರಮದಲ್ಲಿ ಮಂಗಳೂರಿನ ಹಿರಿಯ ಮೃದಂಗ ವಾದಕಾರದ ವಿದ್ವಾನ್ ವಿ. ಮನೋಹರ್ ರಾವ್ ಇವರು ಕಲಾವಿದೆ ಹಾಗೂ ಗುರುಗಳಿಗೆ ಶುಭ ಹಾರೈಸಿದರು. ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು, ವಿದ್ವಾನ್ ಮನೋಹರ್ ರಾವ್, ಸುಮಂಗಲ ಪ್ರಭಾಕರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕುಮಾರಿ ಮನ್ವಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಾಸ್ಟರ್ ಶ್ಯಾಮ್ ಪಡುವೆಟ್ನಾಯ ಇವರ ಓಂಕಾರನಾದ, ಸೌಜನ್ಯ ಪಡುವೆಟ್ನಾಯ ಇವರ ಶಂಖನಾದ, ಕುಮಾರಿ ಶ್ರೇಯ ಬಾಪಟ್ ಇವರ ಪಂಚಾಂಗ ಪಠಣ ಶುಭಕರ ವಾತಾವರಣ ಸೃಷ್ಟಿಸಿ ಕಾರ್ಯಕ್ರಮಕ್ಕೆ ಉತ್ತಮ ನಾಂದಿ ಹಾಡಿತು. ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಸೌಜನ್ಯ ವಿ. ಪಡುವೆಟ್ನಾಯ ಸ್ವಾಗತಿಸಿ, ಕುಮಾರಿ ದಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

    baikady bharatanatyam Music roovari
    Share. Facebook Twitter Pinterest LinkedIn Tumblr WhatsApp Email
    Previous Articleಶಿವರಾಮ ಕಾಸರಗೋಡು ಇವರಿಗೆ ಪ್ರತಿಷ್ಠಿತ ‘ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ’ ಪ್ರದಾನ
    Next Article ಬಹುಮುಖ ಪ್ರತಿಭೆ ನೃತ್ಯ ಕಲಾವಿದೆ ಕುಮಾರಿ ನೇಯಾ ಭಾಸ್ಕರ್ ರಂಗಪ್ರವೇಶ | ಜೂನ್ 07
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.