Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ರಂಗವೇದಿಕೆಯಲ್ಲಿ ಭರತನಾಟ್ಯ ವೈಭವ
    Bharathanatya

    ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ರಂಗವೇದಿಕೆಯಲ್ಲಿ ಭರತನಾಟ್ಯ ವೈಭವ

    June 27, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಬೈಲೂರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವತಿಯಿಂದ ನಡೆಯುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ದಿನಾಂಕ 26 ಜೂನ್ 2026ರಂದು ದೇವಸ್ಥಾನದ ರಂಗವೇದಿಕೆಯಲ್ಲಿ ಶ್ರೀ ವೀರ ನಾಟ್ಯ ನಿಕೇತನ ಸಂಸ್ಥೆಯ ವಿದ್ಯಾರ್ಥಿಗಳಿಂದ ಅತ್ಯಂತ ಆಕರ್ಷಕ ನೃತ್ಯ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

    ಸಂಸ್ಥೆಯ ನಿರ್ದೇಶಕಿ ಡಾ. ಮೇಘನಾ ಶೆಟ್ಟಿಗಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಹಲವು ವಿದ್ಯಾರ್ಥಿಗಳಿಗೆ ಭರತನಾಟ್ಯದ ನೃತ್ತ-ನೃತ್ಯಗಳನ್ನು ಕಲಿಸುತ್ತಿದ್ದು, ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರೀ ಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ಒಂದು ಗಂಟೆಯ ಕಾಲ ಮನಮೋಹಕ ನೃತ್ಯ ಸೇವೆ ನಡೆಸಿದರು.

    ವಿದುಷಿ ಮೇಘನಾ ಇವರ ನಿರ್ದೇಶನದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ಕೃತಿಗಳಿಗೆ ಹೆಜ್ಜೆ ಹಾಕಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಪುಷ್ಪಾಂಜಲಿ ಮತ್ತು ಅಲರಿಪು, ಶ್ಲೋಕ ಅಭಿನಯ, ಪಾಹಿಮಾಂ ರಾಜರಾಜೇಶ್ವರಿ (ಕೃತಿ), ಬಾರೋ ಕೃಷ್ಣಯ್ಯ ಮತ್ತು ಭಾಗ್ಯದ ಲಕ್ಷ್ಮೀ ಬಾರಮ್ಮ (ದೇವರನಾಮಗಳು). ಕಾರ್ಯಕ್ರಮದ ಯಶಸ್ಸಿಗೆ ಹಿಮ್ಮೇಳದ ಕಲಾವಿದರ ಸಹಕಾರ ಗಣನೀಯವಾಗಿತ್ತು. ನಟುವಾಂಗದಲ್ಲಿ ವಿದುಷಿ ಡಾ. ಮೇಘನಾ ಶೆಟ್ಟಿಗಾರ್, ಹಾಡುಗಾರಿಕೆಯಲ್ಲಿ ಡಾ. ಪ್ರಸಿದ್ಧಿ ಮಯ್ಯ ಮತ್ತು ಕುಮಾರಿ ಕೃತಿ ಭಟ್, ಮೃದಂಗದಲ್ಲಿ ವಿದ್ವಾನ್ ನಾರಾಯಣ ಬಳಕ್ಕುರಾಯ ಹಾಗೂ ಪಿಟೀಲು ಪ್ರಣೀತ್ ಬಳಕ್ಕುರಾಯ ಸಹಕರಿಸಿದರು.

    ಗಣ್ಯರ ಉಪಸ್ಥಿತಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಗುರು ರಾಮಕೃಷ್ಣ ಕೊಡಂಚ ಅವರು ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ಕಲಾಶ್ರೀ ಮಧೂರು ಬಾಲಸುಬ್ರಹ್ಮಣ್ಯಮ್ ಅವರು ಆಶೀರ್ವಚನ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಡಾ. ಮೇಘನಾ ಶೆಟ್ಟಿಗಾರ್ ಧನ್ಯವಾದ ಸಮರ್ಪಣೆ ಮಾಡಿದರು. ನೆರೆದಿದ್ದ ನೂರಾರು ಭಕ್ತಾದಿಗಳು ಸಾಕ್ಷಿಯಾಗಿ ಕರತಾಡನ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ, ಸಂತೋಷ ವ್ಯಕ್ತಪಡಿಸಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕಿರು ರಂಗಮಂದಿರದಲ್ಲಿ ಮೈಸೂರು ವಲಯ ಸಾಂಸ್ಕೃತಿಕ ಸಂಘಟಕರ ಸಮಾವೇಶ | ಜೂನ್ 29
    Next Article ಮೈಸೂರಿನಲ್ಲಿ ಡಾ. ಸುಜಾತ ಅಕ್ಕಿ ಇವರ ಮೂರು ದಿನಗಳ ಏಕವ್ಯಕ್ತಿ ನಾಟಕೋತ್ಸವಕ್ಕೆ ಚಾಲನೆ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.