ಬಂಟ್ವಾಳ : ಗಾನನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಕುಮಾರಿ ನಿವೇದಿತಾ ಕಾರಂತ್ ಮತ್ತು ಕುಮಾರಿ ಶಮಿತಾ ಕಾರಂತ್ ಸಹೋದರಿಯರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವನ್ನು ದಿನಾಂಕ 26 ಏಪ್ರಿಲ್ 2026ರಂದು ಸಂಜೆ ಗಂಟೆ 5-30ಕ್ಕೆ ಬಂಟ್ವಾಳ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸುರತ್ಕಲ್ಲಿನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕಲಾಶ್ರೀ ಗುರು ಶ್ರೀ ಚಂದ್ರಶೇಖರ ನಾವಡ ಮತ್ತು ಪುತ್ತೂರಿನ ವಿಶ್ವಕಲಾ ನಿಕೇತನ ಇದರ ನಿರ್ದೇಶಕರಾದ ಕಲಾಶ್ರೀ ವಿದುಷಿ ನಾಯನಾ ವಿ. ರೈ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಭರತನಾಟ್ಯದ ಹಿಮ್ಮೇಳದಲ್ಲಿ ನಟುವಾಂಗ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನೈಯ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್, ಮೃದಂಗ ವಾದನದಲ್ಲಿ ಬೆಂಗಳೂರಿನ ವಿದ್ವಾನ್ ವಿನಯ್ ನಾಗರಾಜನ್, ವೀಣೆಯಲ್ಲಿ ತಿರುವನಂತಪುರದ ವಿದ್ವಾನ್ ಸೌಂದರ ರಾಜನ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ರಘು ನಂದನ್ ಬೆಂಗಳೂರು ಸಹಕರಿಸಲಿದ್ದಾರೆ. ಕಲಾಭಿಮಾನಿಗಳಿಗೆ ಆದರದ ಸ್ವಾಗತ ಕೋರಲಾಗಿದೆ.

