Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ
    Awards

    ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ

    April 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ – ಸಂಧ್ಯಾ ರಾಣಿ ಟೀಚರ್ ಸಾರತ್ಯದ ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆಯಾದ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವ ಸಂಭ್ರಮವು ದಿನಾಂಕ 22 ಏಪ್ರಿಲ್ 2026ರಂದು ಅರ್ಥಪೂರ್ಣವಾಗಿ ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ನಡೆಯಿತು.

    ಧಾರ್ಮಿಕ ರತ್ನ, ಕನ್ನಡ ಭವನ ನಿರ್ದೇಶಕ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅದ್ಯಕ್ಷತೆಯಲ್ಲಿ, ಪುಸ್ತಕ ಬಿಡುಗಡೆ, ‘ಭರವಸೆಯ ಭಾರತ ರತ್ನ’ ಪ್ರಶಸ್ತಿ ಪ್ರದಾನ, ಕವಿತಾ ವಾಚನ -ಗಾಯನ ಕಾರ್ಯಕ್ರಮ ಸಂಭ್ರಮ ನಡೆಯಿತು. ವೈದ್ಯಕೀಯ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಗೈಯುತ್ತಿರುವ ಡಾ. ಸಚಿನ್ ಬೇಕಲ್ ಅನಂಗೂರ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ, ಔದ್ಯೋಗಿಕ ಸಾಧನೆ ಗೈಯುತ್ತಿರುವ ಶ್ರೀಮತಿ ದಯಾವತಿ ಮಂಗಳೂರು ಇವರಿಗೆ ‘ಭರವಸೆಯ ಭಾರತ ರತ್ನ ಪ್ರಶಸ್ತಿ’ಯನ್ನು ಕನ್ನಡ ಭವನದ ರೂವಾರಿಗಳಾದ ಡಾ. ಬೇಕಲ್ -ಸಂಧ್ಯಾ ರಾಣಿ ನೀಡಿ ಗೌರವಿಸಿದರು.

    ಖ್ಯಾತ ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಇವರ ಯಾತ್ರಾ ವಿವರಣೆ ಕೃತಿ ‘ಶರದಿಯಾಚೆ ಪ್ರ ಪ್ರಥಮ ಹೆಜ್ಜೆ’ ಕೃತಿ ಕನ್ನಡ ಭವನ ಗೌರವ ಅಧ್ಯಕ್ಷರಾದ ಲೇಖಕ ಪ್ರದೀಪ್ ಬೇಕಲ್ ಬಿಡುಗಡೆಗೊಳಿಸಿದರು. ಬೆಂಗಳೂರಿನ ಕವಯತ್ರಿ ಲಕ್ಷ್ಮಿ ಎಸ್. ಇವರ ಕವನ ಸಂಕಲನ ‘ಅಂತರ್ಧ್ವನಿ’ ಸಾಹಿತಿ ರೇಖಾ ಸುದೇಶ್ ರಾವ್ ಮಂಗಳೂರು ಬಿಡುಗಡೆಗೊಳಿಸಿದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಸದಸ್ಯೆಯರಾದ ಸುಧಾ ರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಕೆ. ಕಮಲಾಕ್ಷ ಅನಂಗೂರ್, ರಾ. ರಾ. ಕ್ಷತ್ರಿಯ ಕಾಸರಗೋಡು ಅಧ್ಯಕ್ಷ ವಿದ್ಯಾನಂದ ಹೂಡೆ, ರಾ. ರಾ. ಕ್ಷತ್ರಿಯ ಜಿಲ್ಲಾ ಮಹಿಳಾ ಸಂಘ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಕಾರ್ಯದರ್ಶಿ ಉಶಾಕಿರಣ್, ಯುವ ಸಂಘ ಅಧ್ಯಕ್ಷ ಮುರಳಿ ಪರಕಟ್ಟಾ, ಪಾಂಗೋಡು ನವೀನ್ ನಾಯ್ಕ್ ಭಾಗವಹಿಸಿದರು. ಕವಿಗೋಷ್ಠಿ ಗಾಯನದಲ್ಲಿ ರೇಖಾ ರೋಷನ್, ಸಾಕ್ಷಿ, ಮೋಕ್ಷ, ರೇಖಾ ಸುದೇಶ್ ರಾವ್, ಉಷಾ ಕಿರಣ್, ದಿವ್ಯ ಕೆರೆಮನೆ, ವಸಂತ್ ಕೆರೆಮನೆ, ಕುಮಾರಿ ಚೈತಾಲಿ ಮುಂತಾದವರು ಭಾಗವಹಿಸಿದರು. ದಿವ್ಯ ಕೆರೆಮನೆ ಪ್ರಾರ್ಥಿಸಿ, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ರಾಜೇಶ್ ಕೋಟೆಕಣಿ ಧನ್ಯವಾದವಿತ್ತರು. ರೇಖಾ ಸುದೇಶ್ ರಾವ್ -ಉಷಾ ಕಿರಣ್ ನಿರ್ವಹಣೆಗೈದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ‘ಕಲಾಧಾರಾ – 8’ ನೃತ್ಯ ಕಾರ್ಯಕ್ರಮ
    Next Article ಕಾವ್ಯಾಂ ವ್ಹಾಳೊ- 13 ಕೊಂಕಣಿ ಕವಿಗೋಷ್ಠಿಯಲ್ಲಿ ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.