Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಾವ್ಯಾಂ ವ್ಹಾಳೊ- 13 ಕೊಂಕಣಿ ಕವಿಗೋಷ್ಠಿಯಲ್ಲಿ ಕೃತಿ ಬಿಡುಗಡೆ
    Book Release

    ಕಾವ್ಯಾಂ ವ್ಹಾಳೊ- 13 ಕೊಂಕಣಿ ಕವಿಗೋಷ್ಠಿಯಲ್ಲಿ ಕೃತಿ ಬಿಡುಗಡೆ

    April 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 18 ಎಪ್ರಿಲ್ 2026ರಂದು ‘ಕಾವ್ಯಾಂ ವ್ಹಾಳೊ-13’ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಇವರು ಪ್ರಾಸ್ತಾವಿಕವಾಗಿ ಮಾತನಾಡಿ “ಕರ್ನಾಟಕ ಸರ್ಕಾರವು ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಕೊಂಕಣಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಕೊಂಕಣಿಗರನ್ನು ಒಗ್ಗೂಡಿಸುವ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ಜಾತಿ, ಮತ ಭೇದವಿಲ್ಲದೆ ಎಲ್ಲಾ ಕೊಂಕಣಿಗಳ ಜನರು ಭಾಗವಹಿಸುವುದು ಬಹಳ ಸಂತೋಷವಾಗುತ್ತಿದೆ. ಅಕಾಡೆಮಿಗೆ ಕೊಂಕಣಿ ಜನರು ಯಾವಾಗಲೂ ಹತ್ತಿರವಿರಬೇಕು ಹಾಗೂ ಕೊಂಕಣಿ ಯುವ ಕವಿಗಳಿಗೆ ವೇದಿಕೆ ದೊರೆಯಬೇಕು ಎನ್ನುವ ಉದ್ದೇಶದಿಂದ “ಕಾವ್ಯಾಂ ವ್ಹಾಳೊ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದ್ದೇವೆ. ಪ್ರತಿಯೊಬ್ಬ ಇದರ ಪ್ರಯೋಜನ ಪಡೆಯಬೇಕು” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.

    ಮುಖ್ಯ ಅಥಿತಿಗಳಾದ ಕೊಂಕಣಿ ಭಾಷಾ ಮಂಡಳಿ ಕರ್ನಾಟಕ (ರಿ.) ಇದರ ಅಧ್ಯಕ್ಷ ಶ್ರೀ ರೇಮಂಡ್ ಡಿಕುನ್ಹಾರವರು ಮಾತಾನಾಡಿ “ಪ್ರಸ್ತುತ ಅಕಾಡೆಮಿಯ ಸದಸ್ಯರು ತಾವು ಕೊಂಕಣಿಯ ಸದಸ್ಯರೆಂದು ಗರ್ವದಿಂದ ಹೇಳುತ್ತಾರೆ, ಏಕೆಂದರೆ ಅಕಾಡೆಮಿಯಲ್ಲಿ ಅಷ್ಟು ಕೆಲಸವನ್ನು ಅವರು ಮಾಡಿದ್ದಾರೆ. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ಒಬ್ಬ ಕೊಂಕಣಿ ಭಾಷೆಯ ಸಂಘಟಕರಾಗಿ ಇದ್ದುದೇ ಇದಕ್ಕೆ ಕಾರಣ” ಎಂದು ಅಕಾಡೆಮಿಯ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಕೊಂಕಣಿ ಭಾಷೆಯ ಖಾರ್ವಿ ಸಮುದಾಯದ ಹಿರಿಯ ಕಲಾವಿದರಾದ ಶ್ರೀ ಜೀವನ್ದಾಸ್ ಖಾರ್ವಿ ಇವರನ್ನು ಸನ್ಮಾನಿಲಾಯಿತು. ಲೇಖಕಿಯಾದ ಶ್ರೀಮತಿ ಕೃತಿಕಾ ಕಾಮತ್ ಇವರು ಬರೆದ ‘ಭಕ್ತಿ ರಸಾಮೃತಂ’ ಪುಸ್ತಕವನ್ನು ಈ ಸಂದರ್ಭದಲ್ಲಿ ಅಧ್ಯಕ್ಷರು ಬಿಡುಗಡೆಗೊಳಿಸಿದರು.

    ಖ್ಯಾತ ಕವಿಗಳಾದ ಶ್ರೀ ಜೋರ್ಜ್ ಲಿಗೋರಿ ಡಿಸೋಜಾರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ರೋಶನ್ ಕಾಮತ್, ಮರಿಯಾ ಪಿಂಟೊ, ವಿಲ್ಫ್ರೆಡ್ ಆರ್. ಪಾಂಗ್ಳಾ, ವೆನಿಶಾ ಜೆಸ್ಸಿಕಾ ಸಲ್ಡಾನ್ಹಾ, ರೊಬರ್ಟ್ ಮಿನೇಜಸ್, ರಾಧಿಕಾ ಪೈ, ರೆನಿಶಾ ರೋನಾ ಲೋಬೊ, ಹೆನ್ರಿ ಮಸ್ಕರೇನ್ಹಸ್ ಮತ್ತು ಸ್ಟೀವನ್ ಕ್ವಾಡ್ರಸ್ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ಸಮರ್ಥ್‌ ಭಟ್, ಶ್ರೀಮತಿ ಸಪ್ನಾ ಮೇ ಕ್ರಾಸ್ತಾ, ಶ್ರೀ ನವೀನ್‌ ಲೋಬೊ ಉಪಸ್ಥಿತರಿದ್ದರು.

    baikady Book release felicitation konkani Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ
    Next Article ಕೋಟೇಶ್ವರದಲ್ಲಿ ಸರಣಿ ತಾಳಮದ್ದಳೆ ‘ಅರ್ಥಾಂಕುರ’ ಉದ್ಘಾಟನೆ
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.