Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಾಹಿತಿ ರೇಮಂಡ್ ಡಿಕುನಾ ತಾಕೊಡೆ ಇವರ ‘ಬೊಳ್ಳಿಲು’ ಕೃತಿ ಬಿಡುಗಡೆ
    Book Release

    ಸಾಹಿತಿ ರೇಮಂಡ್ ಡಿಕುನಾ ತಾಕೊಡೆ ಇವರ ‘ಬೊಳ್ಳಿಲು’ ಕೃತಿ ಬಿಡುಗಡೆ

    March 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ತುಳು ಕೂಟ (ರಿ.) ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ, ಪ್ರೆಸ್ ಕ್ಲಬ್ ಮೂಡುಬಿದಿರೆ, ಜೆ.ಸಿ.ಐ. ಮೂಡುಬಿದಿರೆ ತ್ರಿಭುವನ್, ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡುಬಿದಿರೆ, ರೋಟರಿ ಕ್ಲಬ್ ಆಫ್ ಟೆಂಪುಲ್ ಟೌನ್ ಮೂಡುಬಿದಿರೆ, ಅಭಿಮಾನಿ ಬಳಗ ತಾಕೊಡೆ ಮತ್ತು ಅಭಿಮಾನಿ ರಿಕ್ಷಾ ಚಾಲಕ ಮಾಲಕರು ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ರೇಮಂಡ್ ಡಿಕುನಾ ತಾಕೊಡೆ ಇವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ ಮತ್ತು ಹುಟ್ಟೂರಿನ ಸನ್ಮಾನ ಸಮಾರಂಭವು ದಿನಾಂಕ 22 ಮಾರ್ಚ್ 2026ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.

    ಸಾಹಿತಿ ರೇಮಂಡ್ ಡಿಕುನಾ ತಾಕೊಡೆ ಇವರ 22ನೇ ಕೃತಿ ‘ಬೊಳ್ಳಿಲು’ ಅನ್ನು ಬಿಡುಗಡೆಗೊಳಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇವರು ಮಾತನಾಡಿ “ಸಾಹಿತ್ಯ ಮತ್ತು ಕವನಗಳು ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನಶೀಲ ಪ್ರಕ್ರಿಯೆಗಳಾಗಿವೆ” ಎಂದು ಹೇಳಿದರು.

    ಸಾಹಿತಿ ಸದಾನಂದ ನಾರಾವಿ ಅಧ್ಯಕ್ಷತೆ ವಹಿಸಿದ್ದರು. ರೇಮಂಡ್ ಇವರನ್ನು ಗೌರವಿಸಲಾಯಿತು. ಸಂಗೀತಾ ಪ್ರಭು ಸನ್ಮಾನ ಪತ್ರ ವಾಚಿಸಿದರು. ಗೀತಾ ಲಕ್ಷ್ಮೀಶ ಶೆಟ್ಟಿ ಕೃತಿ ಪರಿಚಯಿಸಿದರು. ಮುಖಂಡರಾದ ಅಭಯಚಂದ್ರ ಜೈನ್, ಸುದರ್ಶನ್, ತುಳು ಕೂಟ ಬೆದ್ರ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಧನಕೀರ್ತಿ ಬಲಿಪ, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೆಸಿಐ ಮೂಡುಬಿದಿರೆ ತ್ರಿಭುವನ್‌ನ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ರಿಕ್ಷಾ ಚಾಲಕರ ಮಾಲೀಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.

    ಡಾ. ಸುರೇಶ್ ಕುಮಾರ ನೆಗಳಗುಳಿ, ಧನಂಜಯ ಮೂಡುಬಿದಿರೆ, ಗೀತಾ ಲಕ್ಷ್ಮೀಶ ಶೆಟ್ಟಿ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ಎಂ. ರಾಘವೇಂದ್ರ ಭಂಡಾರ್ಕರ್, ರಾಮಕೃಷ್ಣ ಶಿರೂರು, ಸೌಮ್ಮ ಕುಗ್ವೆ, ಮಾನಸ ಪ್ರವೀಣ್ ಭಟ್ ಮಾಂಟ್ರಾಡಿ, ಶರಣ್ಯ ಬೆಳುವಾಯಿ, ಪೂರ್ಣಿಮಾ ಕೋಟ್ಯಾನ್, ಪ್ರಶಾಂತ್ ಆಚಾರ್ಯ ಎಡಪದವು, ಸವಿತಾ ಕರ್ಕೇರ ಕವನ ವಾಚಿಸಿದರು. ವಿನಯಚಂದ್ರ ನಿರೂಪಿಸಿದರು.

    baikady Book release felicitation Literature roovari Tulu
    Share. Facebook Twitter Pinterest LinkedIn Tumblr WhatsApp Email
    Previous Article‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 30
    Next Article ಮೈಸೂರಿನ ನಟನ ರಂಗಶಾಲೆಯಲ್ಲಿ ‘ಸೂರ್ಯನ ಕುದುರೆ’ | ಮಾರ್ಚ್ 29
    roovari

    Add Comment Cancel Reply


    Related Posts

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026

    ವಿಶೇಷ ಲೇಖನ | ಹವ್ಯಾಸಿ ರಂಗಭೂಮಿಯ ಅಪ್ರತಿಮ ಪ್ರತಿಭಾವಂತ ಕಲಾವಿದ ಆರ್.ಎಸ್. ರಾಜಾರಾಮ್

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.