Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ ಸಮಾರಂಭ | ಮೇ 10
    Book Release

    ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ ಸಮಾರಂಭ | ಮೇ 10

    May 8, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಖ್ಯಾತ ಸಾಹಿತಿ ವಲ್ಲಿ ವಗ್ಗ ಇವರು ಬರೆದಿರುವ ‘ವಿಂಚ್ಣಾರ್ ಕಾಣಿಯೊ’ ಪುಸ್ತಕದ ಲೋಕಾರ್ಪಣೆ ಸಮಾರಂಭವು ದಿನಾಂಕ 10 ಮೇ 2026ರಂದು ಸಂಜೆ ಗಂಟೆ 5-00ಕ್ಕೆ ಸೈಂಟ್ ಅಲೋಶಿಯಸ್ ವಿಶ್ವ ವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.

    ಈ ಸಮಾರಂಭದಲ್ಲಿ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಮತ್ತು ಕೊಂಕಣಿ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ, ಹೊಸ ದಿಲ್ಲಿ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ಭಾಗವಹಿಸಲಿದ್ದಾರೆ. ಈ ಕೃತಿಯು ಮೈಕಲ್ ಡಿಸೋಜ ವಿಷನ್ ಕೊಂಕಣಿ ಸಂಸ್ಥೆಯಡಿಯಲ್ಲಿ ಲೂರ್ಡ್ಸ್ ಪ್ರಕಾಶನದಿಂದ ಪ್ರಕಟಗೊಂಡಿದೆ.

    ವಲ್ಲಿ ವಗ್ಗ ಎಂಬುದು ವಲೇರಿಯನ್ ಡಿಸೋಜಾ ಇವರ ಕಾವ್ಯನಾಮವಾಗಿದ್ದು, ಇವರು ಕೊಂಕಣಿ ಸಾಹಿತ್ಯ ಲೋಕದ ಚಿರಪರಿಚಿತ ಬರಹಗಾರರಾಗಿದ್ದಾರೆ. ಇವರ ಸಾಹಿತ್ಯ ಪಯಣವು 1964ರಲ್ಲಿ ‘ರಾಕ್ಕೊ’ ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಕಥೆಯೊಂದಿಗೆ ಪ್ರಾರಂಭವಾಯಿತು. ಕಳೆದ ಹಲವು ದಶಕಗಳಲ್ಲಿ ಇವರು ಸುಮಾರು 150 ಕೊಂಕಣಿ ಕಥೆಗಳು ಮತ್ತು 250 ಕವಿತೆಗಳನ್ನು ರಚಿಸಿದ್ದಾರೆ. ಈಗ ಬಿಡುಗಡೆಯಾಗುತ್ತಿರುವ ‘ವಿಂಚ್ಣಾರ್ ಕಾಣಿಯೊ’ ಇವರ ಹನ್ನೊಂದನೇ ಕೃತಿಯಾಗಿದೆ.

    ಇವರ ಸಾಹಿತ್ಯ ಕೃಷಿಯು ಕನ್ನಡ ಸಾಹಿತ್ಯ ಲೋಕಕ್ಕೂ ವಿಸ್ತರಿಸಿದ್ದು, ಇವರ ಕಥೆಗಳು ಸುಧಾ ಮತ್ತು ಮಯೂರದಂತಹ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಕೊಂಕಣಿ ಮತ್ತು ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಗಾಗಿ 2020ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿದೆ. ಇದರೊಂದಿಗೆ ಇವರು ಸಂದೇಶ ಸಾಹಿತ್ಯ ಪ್ರಶಸ್ತಿ ಮತ್ತು ಮಥಾಯಸ್ ಕುಟುಂಬ ಕವಿತಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮೈಸೂರಿನಲ್ಲಿ ತಮ್ಮ ಕುಟುಂಬದೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದಾರೆ.

    baikady Book release konkani Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂಗೀತ ಪರಿಷತ್ ವತಿಯಿಂದ ‘ನಾದಾಲಯ’ ಗೃಹ ಸಂಗೀತ ಕಛೇರಿ | ಮೇ 10
    Next Article ಅರ್ಥಪೂರ್ಣವಾಗಿ ನಡೆದ 10ನೇ ವರ್ಷದ ವಿಶ್ವ ನೃತ್ಯ ದಿನಾಚರಣೆ
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.