ಬೆಂಗಳೂರು : ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ (ರಿ.) ಆಯೋಜಿಸಿರುವ ಎಸ್.ಜಿ. ಸಿದ್ಧ ರಾಮಯ್ಯ ಇವರ ‘ಮಹಾಮನೆ’ ನಾಟಕ ಪುಸ್ತಕ ಬಿಡಗಡೆ ಹಾಗೂ ರಂಗಗೀತೆ ರಂಗಗೌರವ ಕಾರ್ಯಕ್ರಮವನ್ನು ದಿನಾಂಕ 15 ಏಪ್ರಿಲ್ 2026ರಂದು ಸಂಜೆ ಗಂಟೆ 5-00ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
5-30 ಗಂಟೆಗೆ ಆದಿಮೂಲ ಹೊಕ್ಕಳ ಬಳ್ಳಿಯ ಚರಿತೆಯ ಹಾಡು ರಂಗಗೀತೆಗಳ ಗಾಯನ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಸಾಹಿತಿ ಪ್ರೊ. ಶಿವರಾಮಯ್ಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಾಟಕಕಾರರು ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರು ಪುಸ್ತಕ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಎಚ್.ಎಲ್. ಪುಷ್ಪ, ಡಾ. ಪದ್ಮಾ ಟಿ. ಚಿನ್ಮಯಿ, ಶ್ರೀಮತಿ ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್ ಮತ್ತು ಭಾಸ್ಕರ್ ಕುಪ್ಪೂರು ಇವರುಗಳಿಗೆ ರಂಗಗೌರವ ನೀಡಿ ಸನ್ಮಾನಿಸಲಾಗುವುದು.

