ಮೈಸೂರು : ಭಾರತೀ ಪ್ರಕಾಶನ ಮೈಸೂರು ಇದರ ವತಿಯಿಂದ ಹಿರಿಯ ಪತ್ರಕರ್ತ ಶ್ರೀ ಕೊಡ್ಲಿ ಗುರುರಾಜ್ ಇವರು ಜನಮಿತ್ರ ಪತ್ರಿಕೆಯಲ್ಲಿ ಬರೆದ ವ್ಯಕ್ತಿ – ವಿಶೇಷ ಅಂಕಣ ಬರಹಗಳ ಸಂಗ್ರಹ ‘ಸಾಧನೆಯ ಶಿಖರಗಳು’ ಸ್ಫೂರ್ತಿದಾಯಕ ವ್ಯಕ್ತಿ ಚಿತ್ರಗಳ ಪುಸ್ತಕದ ಬಿಡುಗಡೆ ಸಮಾರಂಭವನ್ನು ದಿನಾಂಕ 01 ಜೂನ್ 2026ರಂದು ಬೆಳಿಗ್ಗೆ 10-30 ಗಂಟೆಗೆ ಮೈಸೂರು ವಿನೋಬಾ ರಸ್ತೆ, ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಭಾಪತಿಗಳಾದ ಶ್ರೀ ಬಸವರಾಜ ಎಸ್. ಹೊರಟ್ಟಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಶ್ರೀ ಎನ್. ಪ್ರಕಾಶಬಾಬು ಇವರು ಕೃತಿ ಕುರಿತು ಮಾತನಾಡಲಿದ್ದಾರೆ. ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಇವರು ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಕೆ. ಶಿವಕುಮಾರ್ ಮತ್ತು ಜನಮಿತ್ರ ಪ್ರಧಾನ ಸಂಚಾಲಕರಾದ ಮದನ ಗೋಪಾಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

