ಉಳ್ಳಾಲ : ಉಳ್ಳಾಲ ತಾಲೂಕಿನ ಇರ ಆಚೆಬೈಲು ಪುರಾತನ ಕ್ಷೇತ್ರವಾದ ಶ್ರೀ ಮಲರಾಯ, ಧೂಮಾವತಿ, ಬಂಟ ಮತ್ತು ಪರಿವಾರ ಕ್ಷೇತ್ರದಲ್ಲಿ ದಿನಾಂಕ 16 ಮಾರ್ಚ್ 2026ರಂದು ನೇಮೋತ್ಸವದ ಸಂಧರ್ಭದಲ್ಲಿ ಕವಿ ಕಾವ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಇರ ಶ್ರೀ ನೇಮು ಪೂಜಾರಿ ಇವರು ಬರೆದಿರುವ ಇರ ಸೈಟ್ ಶ್ರೀ ಅಲಿಮಾರ್ ಆದಿ ರಕ್ತೇಶ್ವರಿ ಕ್ಷೇತ್ರ ಕುರಿತು ಬರೆದಿರುವ ಕೃತಿಯನ್ನು ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಗಡಿ ಪ್ರಧಾನರಾದ ಶ್ರೀ ಭಾಸ್ಕರಯಾನೆ ಮಂಜನ ಪೂಜಾರಿ ಬಿಡುಗಡೆ ಮಾಡಿದರು.
ದೈವದ ಆರಾಧಕರಾದ ಶ್ರೀ ರವೀಂದ್ರರವರು, ಶ್ರೀ ಇರ ನೇಮೂ ಪೂಜಾರಿ, ಶ್ರೀ ಆನಂದ ಪೂಜಾರಿ, ಶ್ರೀಮತಿ ಶಕೀಲರವರು, ಶ್ರೀ ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು. ಈ ಹಿಂದೆ ಇದೇ ಕ್ಷೇತ್ರದಲ್ಲಿ ‘ದೈವದೇವರಿಂದ ಊರಿಗೆ ಬೆಳಕು’ ಎಂಬ ಕೃತಿಯನ್ನು ಇರ ನೇಮು ಪೂಜಾರಿ ಬರೆದಿದ್ದು, ಮಾನ್ಯ ಕರ್ನಾಟಕ ಸರಕಾರದ ಧಾರ್ಮಿಕದತ್ತಿ ಸಚಿವರು, ಮೈಸೂರು ಮನೆತನದ ಡಾಕ್ಟರ್ ಎಂ.ಜಿ.ಆರ್. ಅರಸು ಮೊದಲಾದ ಗಣ್ಯರು ಇದ್ದ ಧಾರ್ಮಿಕ ಸಭೆಯಲ್ಲಿ ಪರಮ ಪೂಜ್ಯ ಶ್ರೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ್ ಸ್ವಾಮೀಜಿ ಮಾಣಿಲಾ ಬಿಡುಗಡೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಅನಾಧಿಯಲ್ಲಿ ಚಂದ್ರಗಿರಿಯಿಂದ ದೊಡ್ಡಮ್ಮ ಮತ್ತು ಸಣ್ಣಮ್ಮ ಅಕ್ಕ ತಂಗಿಯರು ಜಟಾಧಾರಿಗಳು ಆಚೆಬೈಲಿಗೆ ಬಂದು ಯಕ್ಷಗಾನ, ಸಾಹಿತ್ಯ ಪ್ರೀತಿಸಿ, ಪೋಷಿಸಿ, ಬೆಳೆಸಿದ ವಿಚಾರಧಾರೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಕುಂಡಾವೂ ಮಹಾ ತಪಸ್ವಿ ಕುಂಡಲಿನಿ ತಪಸ್ಸು ಮಾಡಿದ ಪುಣ್ಯ ಭೂಮಿ ಇದು. ಅಲಿಮಾರ್ ಕ್ಷೇತ್ರ ಮಹಾ ಗುರು ದ್ಯಾನಶಕ್ತರಾಗಿ ಜ್ಞಾನದ ಸ್ನಾನ ಮಾಡಿ ಹಾಡಿದ ಮಾತೆಲ್ಲ ಗಾನವಾಗಿದೆ. ಒಟ್ಟಿನಲ್ಲಿ “ಯಕ್ಷಗಾನದ ತವರೂರು ಇರ. ಸಾಹಿತ್ಯದ ಮರ. ಹಾವನ್ನು ಹೂವಾಗಿ ಧರಿಸಿದ ಗ್ರಾಮದೇವರು ಹರ. ಎಲ್ಲೆಡೆ ಯಕ್ಷಗಾನದ ಸ್ವರ”.
