ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ಬೇಲೂರು ರಘುನಂದನ್ ಇವರ ‘ಶರ್ಮಿಷ್ಠೆ’ ನಾಟಕ ಕೃತಿ ಬಿಡುಗಡೆ ಹಾಗೂ ರಂಗಗೀತೆ – ರಂಗರಸ ದೃಶ್ಯಾವಳಿ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2026ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪತ್ರಕರ್ತ ದಿಲಾವರ್ ರಾಮದುರ್ಗ ಇವರು ರಂಗರಸ ದೃಶ್ಯಾವಳಿಗೆ ಚಲನೆ ನೀಡಲಿದ್ದು, ಡಾ. ಬೇಲೂರು ರಘುನಂದನ್ ಇವರ ರಚನೆ, ನಿರ್ದೇಶನ ಮತ್ತು ರಂಗರೂಪದ ನಾಟಕಗಳ ರಂಗರಸ ದೃಶ್ಯಾವಳಿ ಪ್ರದರ್ಶನ ಹಾಗೂ ರಂಗಪಯಣ ತಂಡದವರಿಂದ ರಂಗಗೀತೆ ಗಾಯನ ನಡೆಯಲಿದೆ. ಸಂಜೆ 6-30 ಗಂಟೆಗೆ ಪ್ರಸಿದ್ಧ ಸಾಹಿತಿ ಡಾ. ಬಂಜೆಗೆರೆ ಜಯಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ.

