Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಲೋಕಮಾನ್ಯ ರಂಗ ಮಂದಿರದಲ್ಲಿ ‘ಚೈತ್ರ ನಾಟಕೋತ್ಸವ’ | ಮಾರ್ಚ್ 27ರಿಂದ 29
    Awards

    ಲೋಕಮಾನ್ಯ ರಂಗ ಮಂದಿರದಲ್ಲಿ ‘ಚೈತ್ರ ನಾಟಕೋತ್ಸವ’ | ಮಾರ್ಚ್ 27ರಿಂದ 29

    March 25, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗಸಂಪದ (ರಿ.) ಬೆಳಗಾವಿ ಇವರ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ’, ‘ರಂಗಸಖ ಪ್ರಶಸ್ತಿ 2026’ ಪ್ರದಾನ ಮತ್ತು ಮೂರು ದಿನಗಳ ‘ಚೈತ್ರ ನಾಟಕೋತ್ಸವ’ ಕಾರ್ಯಕ್ರಮವನ್ನು ದಿನಾಂಕ 27ರಿಂದ 29 ಮಾರ್ಚ್ 2026ರವರೆಗೆ ಬೆಳಗಾವಿಯ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.

    ದಿನಾಂಕ 27 ಮಾರ್ಚ್ 2026ರಂದು ಸಂಜೆ ಗಂಟೆ 5-30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಡಾ. ಸರಜೂ ಕಾಟಕರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ಜೀವ ವಿಮೆ ನಿಗಮದ ಬೆಳಗಾವಿ ವಿಭಾಗದ ಹಿರಿಯ ಅಧಿಕಾರಿ ಬಿ.ಪಿ. ರವಿ ಭಾಗವಹಿಸಲಿದ್ದಾರೆ. ಕಲಾವಿದ ವಿನಯ ಕುಲಕರ್ಣಿ ಇವರಿಗೆ ‘ರಂಗಸಖ’ ಪ್ರಶಸ್ತಿ ಪ್ರದಾನ ಹಾಗೂ ರಾಜೇಂದ್ರ ಸೈ ಬಣ್ಣ ವರ ಮತ್ತು ದೇವಪ್ಪ ನಾಯಕ ಇವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮ ಬಳಿಕ ಬೆಂಗಳೂರಿನ ಕಾಜಾಣ ತಂಡದಿಂದ ಡಾ. ಎಸ್.ಎಲ್.ಎನ್. ಸ್ವಾಮಿ ಇವರ ನಿರ್ದೇಶನದಲ್ಲಿ ‘ಪಂಚಗವ್ಯ’ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.

    ದಿನಾಂಕ 28 ಮಾರ್ಚ್ 2026ರಂದು ಸಂಜೆ ಗಂಟೆ 6-30ಕ್ಕೆ ಬೆಳಗಾವಿಯ ರಂಗಸಂಪದ ತಂಡದಿಂದ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ‘ಭಾನುಮತಿ’ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ದಿನಾಂಕ 29 ಮಾರ್ಚ್ 2026ರಂದು ಸಂಜೆ ಗಂಟೆ 6-00ಕ್ಕೆ ಹನಿಗವಿ ಎಚ್. ಡುಂಡಿರಾಜ್ ಅವರ ನಾಟಕ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವಿದೆ. ನಂತರ ಬೆಳಗಾವಿಯ ರಂಗಸಂಪದ ತಂಡದವರು ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶಿಸುವರು. “ರಂಗಸಂಪದ ಹವ್ಯಾಸಿ ಕಲಾವಿದರ ತಂಡವಾಗಿದ್ದು, 47 ವರ್ಷಗಳ ಇತಿಹಾಸ ಹೊಂದಿದೆ. ಪ್ರತಿ ವರ್ಷ 10ರಿಂದ 12 ನಾಟಕ ಪ್ರದರ್ಶಿಸಲಾಗುತ್ತಿದೆ” ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.

    award baikady drama felicitation roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನ ‘ರಾಮಧಾಮ’ದಲ್ಲಿ ತಾಳಮದ್ದಳೆ ಕೂಟ | ಮಾರ್ಚ್ 27
    Next Article ಪುಸ್ತಕ ವಿಮರ್ಶೆ | ಓದುಗ ಕೇಂದ್ರಿತ ನೆಲೆಯಲ್ಲಿ ಕುವೆಂಪು
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.