ಬೆಂಗಳೂರು : ರಂಗಪಯಣ (ರಿ.) ಪ್ರಸ್ತುತ ಪಡಿಸುವ ಡಾ. ಸಾರಾ ಅಬೂಬಕ್ಕರ್ ರವರ ಕಾದಂಬರಿ ಆಧಾರಿತ ‘ಚಂದ್ರಗಿರಿ ತೀರದಲ್ಲಿ’ ನಾಟಕ ಪ್ರದರ್ಶನವನ್ನು ದಿನಾಂಕ 10 ಮಾರ್ಚ್ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿದೆ. ಈ ನಾಟಕದ ರಂಗರೂಪ ರೂಪಾ ಕೋಟೇಶ್ವರ ಹಾಗೂ ನಯನ ಜೆ. ಸೂಡ ಇವರು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 88847 64509 ಸಂಖ್ಯೆಯನ್ನು ಸಂಪರ್ಕಿಸಿರಿ.

