ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಧಾರವಾಡ ಮತ್ತು ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡದ ಸಮನ್ವಯ ಕವಿ ಸುನೀತಗಳ ಸಾಮ್ರಾಟ ನಾಡೋಜ ಚೆನ್ನವೀರ ಕಣವಿ ಇವರ 98ನೇ ಜನ್ಮ ದಿನಾಚರಣೆಯನ್ನು ದಿನಾಂಕ 30 ಜೂನ್ 2026ರಂದು ಮಧ್ಯಾಹ್ನ 2-30 ಗಂಟೆಗೆ ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯ ಸಭಾ ಭವನದಲ್ಲಿ ಏರ್ಪಡಿಸಿದೆ.
ಧಾರವಾಡದ ಕರ್ನಾಟಕ ಎಜ್ಯುಕೇಶನ್ ಬೋರ್ಡ್ ಇದರ ಕಾರ್ಯದರ್ಶಿಯಾದ ಡಿ.ಎಸ್. ರಾಜ ಪುರೋಹಿತ ಇವರು ಉದ್ಘಾಟನೆ ಮಾಡಲಿದ್ದು, ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಶರಣಮ್ಮ ಗೋರೆಬಾಳ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಾವ್ಯ ವಾಚನ ಮತ್ತು ಗಾಯನ ಕಾರ್ಯಕ್ರಮ ನಡೆಯಲಿದೆ.

