ಕೋಟ : ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ನೆನಪು ಮೂವಿಸ್ ಕೋಟ ಮತ್ತು ಉಸಿರು ಕೋಟ ಇವರ ಸಾರಥ್ಯದಲ್ಲಿ ಐದನೇ ಕಾಲಮಿತಿಯ ಸಾಹಿತ್ಯ ಸಮ್ಮೇಳನವು ದಿನಾಂಕ 14 ಜೂನ್ 2026ರ ಭಾನುವಾರ ಮಧ್ಯಾಹ್ನ 2-00 ಗಂಟೆಗೆ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯಲಿದೆ.
ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಚುಟುಕು ಗೋಷ್ಠಿಗಳಿದ್ದು ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ನಂಬರ್ ಗಳಿಗೆ ತಮ್ಮ ಹೆಸರನ್ನು ನೊಂದಾಯಿಸುವುದು. ವಿದ್ಯಾರ್ಥಿಗಳು – ಮಂಜುನಾಥ್ ಗುಂಡ್ಮಿ – 9902663747, ಪುರುಷರು – ಚೇಂಪಿ ದಿನೇಶ್ ಆಚಾರ್ಯ-9900476706, ಮಹಿಳೆಯರು – ಸುಮನ ಹೇರ್ಳೆ – 9448744140 ಇವರಲ್ಲಿ ದಿನಾಂಕ 31 ಮೇ 2026ರ ಒಳಗೆ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಕಾರ್ಯಾಧ್ಯಕ್ಷರು ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಚಂದ್ರ ತಿಳಿಸಿರುತ್ತಾರೆ.
ನಿಯಮಗಳು :
1. ಸ್ವರಚಿತ ಚುಟುಕಾಗಿರಬೇಕು.
2. ಒಬ್ಬರಿಗೆ ಎರಡು ಚುಟುಕುಗಳನ್ನು ಓದಲು ಮಾತ್ರ ಅವಕಾಶ.
3. ಮೊದಲು ನೋಂದಾಯಿಸಿದ 25 ಜನರಿಗೆ ಅವಕಾಶ.
