ಉಡುಪಿ : ಲಕ್ಷ್ಮೀಗುರುರಾಜ್’ಸ್ ಎನ್.ಎನ್.ಯು. (ರಿ.) ಇದರ ವತಿಯಿಂದ ಸಂಸ್ಥೆಯ ಸ್ಥಾಪಕರಾದ ದಿ. ಕೃಷ್ಣಮೂರ್ತಿ ರಾವ್ ಮತ್ತು ಪೋಷಕರಾದ ದಿ. ಗುರುರಾಜ್ ಐತಾಳ್ ಇವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 23 ಮೇ 2026ರಂದು ಸಂಜೆ 5-00 ಗಂಟೆಗೆ ಉಡುಪಿ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಬಳಿಯಿರುವ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭವನ್ನು ಸಹಕಾರ ರತ್ನ ಪುರಸ್ಕೃತರಾದ ಕೆ. ನಾರಾಯಣ ಬಲ್ಲಾಳ್ ಇವರು ಉದ್ಘಾಟನೆ ಮಾಡಲಿದ್ದು, ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ.ಎಲ್. ಸಾಮಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿಯ ನಾಟ್ಯಾಚಾರ್ಯ ನಾರಾಯಣ ಭಟ್ ಇವರಿಗೆ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ನೃತ್ಯನಿಕೇತನ ಇದರ ಕಲಾವಿದರಿಂದ ‘ನೃತ್ಯ ನೀರಾಜನಂ’ ಭರತನಾಟ್ಯ ಪ್ರದರ್ಶನ ನಡೆಯಲಿದೆ.

