ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ‘ಮೇಲ್ಮನೆ’ ಸಂಘಟನೆಯ ಸಹಯೋಗದೊಂದಿಗೆ ಮುಡಿಪು ನಂದರಪದವು ಎಸ್.ಕೆ. ವಿವಿಧೋದ್ದೇಶ ಸಭಾಂಗಣದಲ್ಲಿ ದಿನಾಂಕ 05 ಮೇ 2026ರಂದು ಉಳ್ಳಾಲ ತಾಲೂಕು ಮಟ್ಟದ ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದೆ. ಈ ಪ್ರಯುಕ್ತ ಮಹಿಳೆಯರಿಗೆ ಮೆಹಂದಿ ವಿನ್ಯಾಸ, ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದಿಂದ ಬ್ಯಾರಿಗೆ ಭಾಷಾಂತರ ಮತ್ತು ಬ್ಯಾರಿ ಆಶು ಭಾಷಣ ಸ್ಪರ್ಧೆಗಳು ನಡೆಯಲಿವೆ.
ಪ್ರತಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ತಲಾ ರೂ.3,000/- ರೂ.2,000/- ಮತ್ತು ರೂ.1,000/- ನಗದು ಬಹುಮಾನವಿದೆ. ಆಸಕ್ತರು ದಿನಾಂಕ 30 ಏಪ್ರಿಲ್ 2026ರ ಒಳಗಾಗಿ ವಾಟ್ಸ್ ಆ್ಯಪ್ :9449902192/9980772865 ಮೂಲಕ ಹೆಸರು ನೋಂದಾಯಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
