Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ಕ್ಕೆ ಕೋಟತಟ್ಟು ರಾಮ ಮರಕಾಲ ಆಯ್ಕೆ

    September 5, 2026

    ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ‘ನಂದಾವರ ನೆಂಪು’ ಕಾರ್ಯಕ್ರಮ

    September 5, 2026

    ರಂಗಮನೆಯಲ್ಲಿ ಬೆಳ್ಳಿ ಸಂಭ್ರಮಕ್ಕೆ ಚಾಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    September 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಕಲಾಭವ’ ಮಾಸಿಕ ನೃತ್ಯ ಸರಣಿ-07ರಲ್ಲಿ ಸಂಪೂರ್ಣ ರಾಮಾಯಣ ಪ್ರಸ್ತುತಿ
    Bharathanatya

    ‘ಕಲಾಭವ’ ಮಾಸಿಕ ನೃತ್ಯ ಸರಣಿ-07ರಲ್ಲಿ ಸಂಪೂರ್ಣ ರಾಮಾಯಣ ಪ್ರಸ್ತುತಿ

    March 31, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-07 ಹಾಗೂ ರಾಮನವಮಿ ವಿಶೇಷ ಕಾರ್ಯಕ್ರಮವು ದಿನಾಂಕ 29 ಮಾರ್ಚ್ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇಲ್ಲಿನ ‘ಕಲಾದೀಪ’ ವಿದ್ವಾನ್ ಬಿ. ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಇವರಿಂದ ಸಂಪೂರ್ಣ ರಾಮಾಯಣ ಪ್ರಸ್ತುತಿ ನಡೆಯಿತು.

    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಯುತ ಕೃಷ್ಣಪ್ರಕಾಶ್ ಉಳಿತ್ತಾಯ ಇವರು ಕಾರ್ಯಕ್ರಮದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಶಿವ ಪಾರ್ವತಿಯರ ಜೋಡಿ ಒಂದು ಯೋಗದಿಂದ ಕೂಡಿದ್ದಂತೆ, ದೀಪಕ್ ಕುಮಾರ್ ಹಾಗೂ ಪ್ರೀತಿಕಲಾರವರ ಜೋಡಿ ಕೂಡಾ ಯೋಗ ಇದ್ದದ್ದರಿಂದ ಮಾತ್ರ ಸಾಧ್ಯವಾಗಿದೆ ಎಂದರು. ರಾಮಾಯಣ ನೃತ್ಯದಲ್ಲಿ ನವರಸಗಳನ್ನು ಒಳಗೊಂಡಂತೆ, ಹತ್ತನೇ ರಸವಾದ ವಾತ್ಸಲ್ಯ ರಸವನ್ನು ನಾನು ಅನುಭವಿಸಿದೆ ಎಂದು ಅವರು ಹೇಳಿದಾಗ ಕಲಾವಿಧರ ಪ್ರೌಡಿಮೆ ಎಂತದ್ದು ಎಂಬುದು ಅನಾವರಣವಾಯಿತು. ಕಾರ್ಯಕ್ರಮ ಆಯೋಜಿಸಿದ ಕಲಾಸೂರ್ಯ ನೃತ್ಯಾಲಯವನ್ನು ಎಲ್ಲರೂ ಮನಪೂರ್ವಕ ಶ್ಲಾಘಿಸಿ ಹರಸಿದರು.

    ಸುಬ್ರಮಣ್ಯ ಸಭಾದ ಅಧ್ಯಕ್ಷರಾದ ಡಾ. ಎ.ಪಿ. ಕೃಷ್ಣ ಅನುಭವ ಹಂಚಿಕೊಂಡು ತಮ್ಮ ಸಹಕಾರ ಸದಾ ಇದೆ ಎಂದು ನುಡಿದರು. ಕಾರ್ಯದರ್ಶಿ ಉದಯ ಕುಮಾರ್ ರಾವ್, ಜೊತೆ ಕಾರ್ಯದರ್ಶಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಕುಮಾರಿ ಮಾತಂಗಿ ಇವರಿಂದ ರಾಮನ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶ್ಯಾಮ್ ಇವರ ಓಂಕಾರನಾದ, ಶ್ರೀಲಕ್ಷ್ಮಿ ಇವರ ಶಂಖನಾದ, ಕುಮಾರಿ ಶ್ರೇಯ ಬಾಪಟ್ ಇವರ ಪಂಚಾಂಗ ಪಠಣ ವೇದಿಕೆಯಲ್ಲಿ ದೈವೀಕ ವಾತಾವರಣ ಸೃಷ್ಟಿಸಿತು. ಕಲಾಸೂರ್ಯ ನೃತ್ಯಾಲಯದ ಸಂಚಾಲಕರಾದ ವಿಕ್ರಮ್ ಪಡುವೆಟ್ನಾಯ ಸ್ವಾಗತಿಸಿ, ನೃತ್ಯಾಲಯದ ನೃತ್ಯಗುರು ಸೌಜನ್ಯ ಪಡುವೆಟ್ನಾಯ ಕಾರ್ಯಕ್ರಮ ನಿರೂಪಿಸಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 05
    Next Article ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದಿಂದ ಮನೆ ಹಸ್ತಾಂತರ
    roovari

    Add Comment Cancel Reply


    Related Posts

    ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ಕ್ಕೆ ಕೋಟತಟ್ಟು ರಾಮ ಮರಕಾಲ ಆಯ್ಕೆ

    September 5, 2026

    ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ‘ನಂದಾವರ ನೆಂಪು’ ಕಾರ್ಯಕ್ರಮ

    September 5, 2026

    ರಂಗಮನೆಯಲ್ಲಿ ಬೆಳ್ಳಿ ಸಂಭ್ರಮಕ್ಕೆ ಚಾಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    September 5, 2026

    ಡಾ. ಎಚ್.ಆರ್. ಸ್ವಾಮಿ ಇವರ ಕೃತಿಗಳ ಮರುಜನಾರ್ಪಣೆ | ಸೆಪ್ಟೆಂಬರ್ 06

    September 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.