ಮೈಸೂರು : ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ಮೈಸೂರು ವಲಯ ಸಾಂಸ್ಕೃತಿಕ ಸಂಘಟಕರ ಸಮಾವೇಶ’ ಕಾರ್ಯಕ್ರಮವನ್ನು ದಿನಾಂಕ 29 ಜೂನ್ 2026 ಸೋಮವಾರದಂದು ಬೆಳಿಗ್ಗೆ 10-30 ಗಂಟೆಗೆ ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ ಗೌಡ ಇವರು ಉದ್ಘಾಟನೆ ಮಾಡಲಿದ್ದು, ಮೈಸೂರು ಅಭಿಯಂತರರು ಇದರ ಅಧ್ಯಕ್ಷರಾದ ಹೆಚ್.ಎಸ್. ಸುರೇಶ್ ಬಾಬು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ನಟನ ಮೈಸೂರು ಇದರ ಸಂಸ್ಥಾಪಕರಾದ ಮಂಡ್ಯ ರಮೇಶ್ ಇವರ ವಹಿಸಲಿದ್ದು, ‘ಸಾಂಸ್ಕೃತಿಕ ನೀತಿ ಅನುಷ್ಠಾನ : ಸಾಂಸ್ಕೃತಿಕ ಸಂಘ – ಸಂಸ್ಥೆಗಳ ಪಾತ್ರ’ ಎಂಬ ವಿಷಯದ ಬಗ್ಗೆ ಹಾಸನ ಜೈ ಕರ್ನಾಟಕ ಇದರ ಅಧ್ಯಕ್ಷರಾದ ಪ್ರಸಾದ್ ರಕ್ಷಿದಿ, ಸುಳ್ಯ ರಂಗಮನೆ ಇದರ ನಿರ್ದೇಶಕರಾದ ಜೀವನ ರಾಮ್ ಸುಳ್ಯ, ಚಾಮರಾಜನಗರ ರಂಗತರಂಗ ಇದರ ಅಧ್ಯಕ್ಷರಾದ ಡಾ. ಸೋಮಶೇಖರ ಬಿಸಲವಾಡಿ, ಚಿಕ್ಕಮಗಳೂರು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಇವರ ಸಂಸ್ಥಾಪಕರಾದ ವಿಶ್ವಕರ್ಮ ಆಚಾರ್ಯ, ಮಂಡ್ಯ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಇವರ ನಿರ್ದೇಶಕರಾದ ನಾಟ್ಯ ವಿದುಷಿ ಡಾ. ಶಾಂಭಸ್ವಾಮಿ ಎಸ್.ವಿ., ಉಡುಪಿ ರಥಬೀದಿ ಗೆಳೆಯರು ರಂಗ ವಿಭಾಗ ಇದರ ಸಂಚಾಲಕರಾದ ಸಂತೋಷ ನಾಯಕ ಪಟ್ಲ ಮತ್ತು ಕೊಡಗು ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಇದರ ಅಧ್ಯಕ್ಷರಾದ ರಮೇಶ್ ಜೆ.ಬಿ. ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿ, ಚರ್ಚೆ, ಸಂವಾದ ಮತ್ತು ಸಾಂಸ್ಕೃತಿಕ ಚಿಂತನೆಗಳ ಈ ಮಹತ್ವದ ವೇದಿಕೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿ, ಸವಾಲುಗಳು ಮತ್ತು ಭವಿಷ್ಯದ ಕುರಿತಾಗಿ ನಡೆಯುವ ಈ ಸಮಾವೇಶದಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮೌಲ್ಯಯುತವಾಗಿದೆ.



