Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ

    January 23, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರೊ. ಶಂಕರ್ ಅಭಿನಂದನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು ಮತ್ತು ಪುಸ್ತಕ ಬಿಡುಗಡೆ
    Book Release

    ಪ್ರೊ. ಶಂಕರ್ ಅಭಿನಂದನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು ಮತ್ತು ಪುಸ್ತಕ ಬಿಡುಗಡೆ

    December 17, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಇದರ ವತಿಯಿಂದ ಪ್ರೊ. ಶಂಕರ್ ಅಭಿನಂದನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆಯಿತು.

    ಈ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ. ಶಂಕರ್ ಇವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು” ಎಂದು ನುಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕ.ಸಾ.ಪ. ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, “ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ. ಶಂಕರ್ ಇವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ನಾಡಿನ ಅದ್ಭುತ ಜಾದೂಗಾರ” ಎಂದು ಸಂತಸ ವ್ಯಕ್ತಪಡಿಸಿದರು.

    ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅಭಿನಂದನಾ ಮಾತುಗಳನ್ನಾಡಿ, “ಒಂದು ಕಾಲದಲ್ಲಿ ರಾಜಾಶ್ರಯವಿದ್ದ ಜಾದೂ ಕಲೆ ಈಗ ಸಂವಹನ, ಸಂವೇದನೆ ಇಲ್ಲದ ಕಲೆಯಾಗಿದೆ. ಸರ್ಕಾರವೂ ಸಹ ಜಾದೂಗಾರರನ್ನು ಪ್ರಶಸ್ತಿಗೆ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿ, ಪ್ರೊ. ಶಂಕರ್ ಅಂತ:ಕರಣಕ್ಕೆ ಸನ್ಮಾನ ಸಂದಿದೆ. ಸರಳ ಹಾಗೂ ಸಜ್ಜನಿಕೆಯ ವಿಚಾರದಲ್ಲಿ ಎಲ್ಲ ಕಲಾವಿದರಿಗೂ ಇವರು ಮಾದರಿ” ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಂಕರ್ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಶಂಕರ್ ಅವರ ಜಾದೂ ಪ್ರದರ್ಶನ ನೋಡಿ ಕೋಟ ಡಾ. ಶಿವರಾಮ ಕಾರಂತರು ಸಹ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಜಾದೂ ಪ್ರದರ್ಶನದ ಮೂಲಕವೇ ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆ, ಯೋಜನೆ ತಲುಪಿಸಿದ ಏಕೈಕ ಜಾದೂಗಾರ ಇವರು ಎಂದು ಬಣ್ಣಿಸಿದರು.

    ಪ. ರಾಮಕೃಷ್ಣ ಶಾಸ್ತ್ರಿ ರಚಿತ ‘ಪ್ರೊ. ಶಂಕರ್ ಜಾದೂ ಜರ್ನಿ’ ಪುಸ್ತಕವನ್ನು ನಾಡೋಜ ಪ್ರೊ. ಕೆ.ಪಿ. ರಾವ್ ಬಿಡುಗಡೆ ಮಾಡಿ ಮಾತನಾಡಿ, “ಆಂತರಿಕ ಶಿಸ್ತು ಎನ್ನುವುದು ವ್ಯಕ್ತಿ, ಸಂಸ್ಥೆಗಳಲ್ಲಿರಬೇಕು. ಕಂಪ್ಯೂಟರ್ಗಳ ಸಹಿತ ಮ್ಯಾಜಿಕ್ ಕಲೆಯೂ ಸಾಮಾಜಿಕ ಉದ್ಧಾರಕ್ಕೆ ಬಳಕೆಯಾಗಬೇಕು” ಎಂದರು.

    ಭುವನ ಪ್ರಸಾದ್ ಹೆಗ್ಡೆ, ಪ್ರೊ. ಶಂಕರ್, ವಿ.ಜಿ. ಶೆಟ್ಟಿ, ಪ್ರಕಾಶ್ ಕೊಡೆಂಕಿರಿ, ಮುರಲಿ ಕಡೆಕಾರ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋವೈದ್ಯ ಡಾಕ್ಟರ್ ಪಿ.ವಿ. ಭಂಡಾರಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಪ. ರಾಮಕೃಷ್ಣ ಶಾಸ್ತ್ರಿ, ಲಕ್ಷ್ಮೀಶಂಕರ್ ಉಪಸ್ಥಿತರಿದ್ದರು. ಪ್ರೊ. ಕೆ. ಸದಾಶಿವ ರಾವ್ ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿ, ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿ, ಸಮಿತಿಯ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

    ಅಭಿನಂದನೆ ನಿಮಿತ್ತ ವಿದುಷಿ ಮಂಜರಿಚಂದ್ರ ಶಿಷ್ಯರಿಂದ ನೃತ್ಯ ಸಿಂಚನ, ಪ್ರೊ. ಶಂಕರ್ ಜಾದೂ ಜಗತ್ತು ವೀಡಿಯೋ ಪ್ರದರ್ಶನ, ‘ನನ್ನಪ್ಪ…’ ಪುತ್ರ ತೇಜಸ್ಚಿ ಶಂಕರ್ನಿಂದ ಮಾತು. ಪ್ರೊ. ಶಂಕರ್ ಒಡನಾಟ-ಸಂವಾದ, ಕಲಾವಿದ ವಿನಯ್ ಹೆಗಡೆಯವರಿಂದ ಕಾಸ್ಮಿಕ್ ಸ್ಪ್ಲಾಷ್ ‘ಗಾಳಿಯಲ್ಲಿ ಚಿತ್ತಾರ’ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು. ಪ್ರೊ. ಶಂಕರ್ ಒಡನಾಟದಲ್ಲಿ ಮಣಿಪಾಲದ ಮೂಳೆ ತಜ್ಞ ಡಾ. ಕಿರಣ್ ಆಚಾರ್ಯ, ರಂಗಕರ್ಮಿ ಮೂರ್ತಿ ದೇರಾಜೆ, ರಾಜಯೋಗಿನಿ ಬಿ.ಕೆ. ಸೌರಭ ಮಾತನಾಡಿದರು. ಆಸ್ಟ್ರೊ ಮೋಹನ್ ಸಮನ್ವಯ ನಡೆಸಿ, ನಾರಾಯಣ ಹೆಗಡೆ ಹಾಗೂ ಡಾ. ಎಚ್.ಎನ್. ಉದಯ ಶಂಕರ್ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾಪು ಕ್ಷೇತ್ರದ ‘ಕಿಶೋರ ಯಕ್ಷಗಾನ ಸಂಭ್ರಮ’ ಉದ್ಘಾಟನೆ
    Next Article ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಇವರು ಉಪನ್ಯಾಸದ ಉಪನ್ಯಾಸಕರಾಗಿ ಆಯ್ಕೆ
    roovari

    Add Comment Cancel Reply


    Related Posts

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ

    January 23, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026

    ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ‘ಜನ ಗಣ ಮನ’ | ಜನವರಿ 24

    January 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.