Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ಕ್ಕೆ ಕೋಟತಟ್ಟು ರಾಮ ಮರಕಾಲ ಆಯ್ಕೆ

    September 5, 2026

    ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ‘ನಂದಾವರ ನೆಂಪು’ ಕಾರ್ಯಕ್ರಮ

    September 5, 2026

    ರಂಗಮನೆಯಲ್ಲಿ ಬೆಳ್ಳಿ ಸಂಭ್ರಮಕ್ಕೆ ಚಾಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    September 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ದಾಸೋಹಂ ತವ ದಾಸೋಹಂ’ ರಾಯರ ಆರಾಧನೆಯಲ್ಲರಳಿದ ನರ್ತನ-ಗಾಯನ ಗುಚ್ಛ
    Bharathanatya

    ‘ದಾಸೋಹಂ ತವ ದಾಸೋಹಂ’ ರಾಯರ ಆರಾಧನೆಯಲ್ಲರಳಿದ ನರ್ತನ-ಗಾಯನ ಗುಚ್ಛ

    September 2, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಥಬೀದಿಯ ನಂಜನಗೂಡು ಮೂಲದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ದಿನಾಂಕ 29, 30 ಮತ್ತು 31 ಆಗಸ್ಟ್ 2026 ಮೂರೂ ದಿನಗಳ ಆರಾಧನೆ ಸಕಲ ಸಂಭ್ರಮಗಳಿಂದ ಕೂಡಿತ್ತು. ಶನಿವಾರ ಗುರುರಾಯರಿಗೆ ಸಲ್ಲಿಸಲಾದ ಗಾನಾರ್ಪಣೆಯಲ್ಲಿ ಸಂಜೆ ಎರಡು ತಾಸು ಭಟ್ಕಳದ ಪಂಡಿತ್ ಗಜಾನನ ಹೆಬ್ಬಾರ್‌ ಇವರ ಹಿಂದೂಸ್ತಾನಿ ಗಾಯನಕ್ಕೆ ಹೆಸರಾಂತ ತಬಲಾ ಗುರು ಬ್ರಹ್ಮಾವರದ ಪಂಡಿತ್ ರಾಘವೇಂದ್ರ ಭಟ್‌ ಇವರ ತಬಲಾ ಸಾಥ್‌ ವಿನೂತನ ಮೆರುಗನ್ನು ನೀಡುವಲ್ಲಿ ಸಹಕಾರಿಯಾಗಿತ್ತು. ಹಾರ್ಮೋನಿಯಮ್‌ ನಲ್ಲಿ ಮಣಿಪಾಲದ ಪಂಡಿತ್ ಶಶಿಕಿರಣ್‌ ಹಾಗೂ ಮಂಜಿರಾದಲ್ಲಿ ರವೀಶ್‌ ಕಾಮತ್‌ ಸಾಥ್‌ ನೀಡಿದರು.

    ಸೋಮವಾರ ಸಂಜೆ ಗುಂಡಿಬೈಲಿನ ಶ್ರೀ ಅಭಿರಾಮಧಾಮ ಸನಾತನ ಸಂಸ್ಕಾರ ಕೇಂದ್ರದ ಕಲಾಭಾರತೀ ನಾಟ್ಯಶಾಲೆಯ ಗುರು ನಾಟ್ಯವಿದುಷಿ ಸುಷ್ಮಾ ಸುದರ್ಶನ್‌ ಇವರ ಹತ್ತಾರು ಶಿಷ್ಯರಿಂದ ‘ನರ್ತನ ನಮನ’ ಆಯೋಜಿಸಲಾಗಿತ್ತು. ವಿವಿಧ ಕೃತಿಗಳಾದ ‘ಶರಣಂ ಶರಣಂ ಪಾಲಯಮಾಮ್‌ ಶ್ರೀ ಗುರುರಾಘವೇಂದ್ರ ಕೃಪಾಂಬುಧೇ….’, ‘ತುಂಗಾತೀರದಿ ನಿಂತ ಯತಿವರನ್ಯಾರೇ ಪೇಳಮ್ಮಯ್ಯ ಪೇಳಮ್ಮಯ್ಯ ..’, ‘ನಂದ ನಂದನ ಕೃಷ್ಣಾ..’ ಮುಂತಾದ ಏಳೆಂಟು ನೃತ್ಯ ಬಂಧಗಳು ನೆರೆದಿದ್ದ ಅಸಂಖ್ಯಾತ ಭಕ್ತಸಮೂಹವನ್ನು ರಂಜಿಸಿದವು. ಅದಕ್ಕೂ ಮುನ್ನ ಸುಮಾರು ನೂರು ನಿಮಿಷಗಳ ಕಾಲ ‘ದಾಸೋಹಂ ತವ ದಾಸೋಹಂ’ ಎಂಬ ಶೀರ್ಷೀಕೆಯಡಿಯಲ್ಲಿ ಸಮರ್ಪಿತವಾದ ದಾಸವಾಣಿ ಗಾಯನ ಭಕ್ತಿಯ ಸಿಂಚನವನ್ನೇ ಉಣಬಡಿಸಿದ ಅನುಭವ ನೀಡಿತ್ತು.

    ಶ್ರೀ ಅಭಿರಾಮ ಧಾಮದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ (ವೆಂಕಟ ವಿಠ್ಠಲ ಸುಗುಣ ದಾಸರು) ಗಾಯನದಲ್ಲಿ, ವಿದುಷಿ ಲಲಿತಾ ಶ್ರೀರಾಮ್‌ ಹಾರ್ಮೋನಿಯಮ್ ನಲ್ಲಿ ಹಾಗೂ ವಿದ್ವಾನ್ ಗುರುದತ್‌ ತಬಲಾದಲ್ಲಿ ಒಂದು ಡಜನ್‌ ಅಪರೂಪದ ಮತ್ತು ಪ್ರಚಲಿತ ದಾಸರಪದಗಳನ್ನು ಪ್ರಸ್ತುತ ಪಡಿಸಿ ಶ್ರೀಮಠದ ಸನ್ಮಾನಕ್ಕೆ ಪಾತ್ರರಾದರು. ಮೊದಲಿಗೆ ನಾಟ ರಾಗದಲ್ಲಿ ಉಡುಪಿಯ ಮಹಾಮಹಿಮ ಶ್ರೀ ವಾದಿರಾಜ ಗುರುಸಾರ್ವಭೌಮರ ಕೃತಿ ‘ಜಯ ಇನಕುಲೋಧ್ಧರಣ ಜಯ ಮುನಿಕೃತಾ ಚರಣ’, ಅಹಿರ್‌ ಭೈರವ್‌ ರಾಗದ ‘ಪಿಬರೇ ರಾಮರಸಂ..’ ಸಂಸ್ಕೃತ ಗೀತೆ, ಅಮೃತವರ್ಷಿನಿ ರಾಗದಲ್ಲಿ ‘ಯಾಕೆ ಕಕ್ಕುಲಾತಿ ಪಡುವೆ, ಎಲೆ ಮನವೆ..’, ರೇವತಿ ರಾಗದಲ್ಲಿ ‘ಕಣ್ಣಿನೊಳಗೆ ನೋಡೊ..ಹರಿಯ ಕಣ್ಣಿನೊಳಗೆ ನೋಡೊ..’, ಮೋಹನ ರಾಗದಲ್ಲಿ ‘ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ..ಹಾಂಗೆ ಇರಬೇಕು ಸಂಸಾರದಲ್ಲಿ’, ‘ಇಷ್ಟು ದಿನ ಈ ವೈಕುಂಠ….ಎಷ್ಟು ದೂರವೋ ಎನ್ನುತಲಿದ್ದೆ..’ ಕೃತಿಗಳಲ್ಲಿ ಸುಗುಣದಾಸರು ಅಂದಿನ ಹರಿದಾಸರ ಭಕ್ತಿವಾಂಛೆಯ ಸಹಜ ಪ್ರಸ್ತುತಿ ಮಾಡಿ ಧನ್ಯತೆ ಪಡೆಯುತ್ತಿದ್ದುದನ್ನು ನೆರೆದ ಜನತೆ ಗಮನಿಸಿದರು. ಒಟ್ಟಾರೆ ಅಭಿರಾಮ ಧಾಮದ ಅಷ್ಟೂ ಸಮರ್ಪಣೆಗಳು ಶ್ರೀ ಗುರುರಾಯರ ಕೃಪೆಯಿಂದ ಜನಮಾನಸವನ್ನು ಮುಟ್ಟುವಲ್ಲಿ ಸಫಲವಾದುವು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕಂಕನಾಡಿ ಗರೋಡಿಯಲ್ಲಿ ಪ್ರೊ. ವಿವೇಕ ರೈಯವರಿಗೆ ‘ನಿಸರ್ಗ ಗೌರವ ಪುರಸ್ಕಾರ’ ಪ್ರದಾನ
    Next Article ಶ್ರೀ ಭ್ರಾಮರೀ ನಾಟ್ಯಾಲಯದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –14’ | ಸೆಪ್ಟೆಂಬರ್ 06
    roovari

    Add Comment Cancel Reply


    Related Posts

    ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ಕ್ಕೆ ಕೋಟತಟ್ಟು ರಾಮ ಮರಕಾಲ ಆಯ್ಕೆ

    September 5, 2026

    ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ‘ನಂದಾವರ ನೆಂಪು’ ಕಾರ್ಯಕ್ರಮ

    September 5, 2026

    ರಂಗಮನೆಯಲ್ಲಿ ಬೆಳ್ಳಿ ಸಂಭ್ರಮಕ್ಕೆ ಚಾಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    September 5, 2026

    ಡಾ. ಎಚ್.ಆರ್. ಸ್ವಾಮಿ ಇವರ ಕೃತಿಗಳ ಮರುಜನಾರ್ಪಣೆ | ಸೆಪ್ಟೆಂಬರ್ 06

    September 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.