Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂವಾದ ಕಾರ್ಯಕ್ರಮ
    Literature

    ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂವಾದ ಕಾರ್ಯಕ್ರಮ

    March 30, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಿಂಗಾರ ಸುರತ್ಕಲ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಹಿನ್ನೆಲೆಯಲ್ಲಿ ಸುರತ್ಕಲ್ ಪರಮೇಶ್ವರಿ ನಗರದ ನಿಸರ್ಗದಲ್ಲಿ ದಿನಾಂಕ 25 ಮಾರ್ಚ್ 2026ರಂದು ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್ ಇವರ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದೆ ಮತ್ತು ಸಾಹಿತಿ ಗೀತಾ ಸುರತ್ಕಲ್ “ಎಲ್ಲರನ್ನು ಜೊತೆಗೆ ಸೇರಿಸುವ ಸಕಾರಾತ್ಮಕ ಶಕ್ತಿಯನ್ನು ರಂಗಭೂಮಿಯು ಹೊಂದಿದ್ದು, ಹೆಚ್ಚು ಮಾನವೀಯವನ್ನಾಗಿಸುವ ಗುಣವನ್ನು ಹೊಂದಿದೆ. ರಂಗಭೂಮಿಯು ಸಂವೇದನಾ ಭಾವವನ್ನು ಬೆಳೆಸುವುದರೊಂದಿಗೆ ನಮ್ಮತನವನ್ನು ಬೆಳೆಸುತ್ತದೆ. ಸುರತ್ಕಲ್ ನ ವಿದ್ಯಾದಾಯಿನೀ ಪ್ರೌಢ ಶಾಲೆ ಮತ್ತು ಗೋವಿಂದ ದಾಸ ಕಾಲೇಜು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿತು. ಮಂಗಳೂರು ಮತ್ತು ಬೆಂಗಳೂರಿನ ವಿವಿಧ ತಂಡಗಳಲ್ಲಿ ದೊರೆತ ಅವಕಾಶಗಳು, ನಿರ್ದೇಶಕರ ಮತ್ತು ಸಹ ನಟರ ಸಹಕಾರದಿಂದ ಕಲಾ ಪ್ರತಿಭೆಯ ಆನಾವರಣ ಸಾಧ್ಯವಾಯಿತು. ಚಲನಚಿತ್ರ, ಕಿರು ಚಿತ್ರ ಮತ್ತು ಧಾರಾವಾಹಿಗಳಲ್ಲಿ ರಂಗಭೂಮಿಯ ಹಿನ್ನೆಲೆಯಿರುವವರಿಗೆ ಪ್ರಾಮುಖ್ಯತೆ ಇದೆ. ರಂಗ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು ಸಾಧ್ಯ. ವರ್ತಮಾನದ ತಲ್ಲಣಗಳನ್ನು ರಂಗಭೂಮಿ ಚಿತ್ರಸುತ್ತಿದ್ದು ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ರಂಗಭೂಮಿ ನೀಡುತ್ತದೆ” ಎಂದು ನುಡಿದರು. ತಮ್ಮ ಸಾಹಿತ್ಯ ಸೃಷ್ಟಿ ಮತ್ತು ಹಿಮಾಲಯ ಪರ್ವತಾರೋಹಣದ ಅನುಭವಗಳನ್ನು ಹಂಚಿಕೊಂಡರು.

    ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ “ರಂಗಭೂಮಿ, ಚಲನಚಿತ್ರ, ಧಾರಾವಾಹಿ, ಕಿರು ಚಿತ್ರಗಳ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಗೀತಾ ಸುರತ್ಕಲ್ ವಿಶೇಷ ಕೊಡುಗೆ ನೀಡಿದ್ದಾರೆ” ಎಂದರು. ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ಅವರು ರಂಗ ನಟ ವಿಲ್ ಯೆಮ್ ಡೆಪೊ ನೀಡಿರುವ ಪ್ರಸಕ್ತ ವರ್ಷದ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ವಾಚಿಸಿದರು.

    ಹಿರಿಯ ಸಂಶೋಧಕಿ ಮತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆ ಅವರು ಗೀತಾ ಸುರತ್ಕಲ್ ಅವರನ್ನು ಅಭಿನಂದಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರ, ಸುರತ್ಕಲ್ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್., ಸದಸ್ಯರಾದ ಶ್ರೀನಿವಾಸ ರಾವ್ ಪಿ., ಸಚ್ಚಿದಾನಂದ ಹೊಸಬೆಟ್ಟು, ಸುರತ್ಕಲ್ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಚಂದ್ರಮೋಹನ್, ಗೋವಿಂದ ದಾಸ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಮೇಜರ್ ಡಾ. ಸುಧಾ ಶೆಟ್ಟಿ, ಗೋವಿಂದ ದಾಸ ಕಾಲೇಜು ಆಲೂಮ್ನಿ ಅಸೋಸಿಯೇಷನ್ ನ ಕಾರ್ಯದರ್ಶಿ ಶಿರಿಷ್ ಕುಮಾರ್, ಸದಸ್ಯ ಜಗದೀಶ್ ಪಣಂಬೂರು, ತುಳು ಪರಿಷತ್ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸಂವಾದದಲ್ಲಿ ಪಾಲ್ಗೊಂಡರು. ಸುಜಾತ, ಧನ್ಯ, ತಾರಾ, ಅಮಿತಾ, ಅಮರನಾಥ್, ಜಗದೀಶ್, ಅನಿತಾ ಮತ್ತಿತರರು ಉಪಸ್ಥಿತರಿದ್ದರು.

    baikady Literature roovari theatre
    Share. Facebook Twitter Pinterest LinkedIn Tumblr WhatsApp Email
    Previous Articleರಾಷ್ಟ್ರಕವಿ ಎಂ. ಗೋವಿಂದ ಪೈ ಜನ್ಮದಿನದ ನೆನಪು ಕಾರ್ಯಕ್ರಮ
    Next Article ಪುಸ್ತಕ ವಿಮರ್ಶೆ | ಎಸ್.ಎಲ್. ಭೈರಪ್ಪನವರ ‘ಮಂದ್ರ’
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.