Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುತ್ತೂರಿನಲ್ಲಿ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ | ಡಿಸೆಂಬರ್ 3
    Literature

    ಪುತ್ತೂರಿನಲ್ಲಿ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ | ಡಿಸೆಂಬರ್ 3

    November 27, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಂಟಿ ಆಶ್ರಯದಲ್ಲಿ ವಿಕಲಚೇತನರ ಸೇವಾ ಕೇಂದ್ರ ಪುತ್ತೂರು ತಾಲೂಕು ಪಂಚಾಯತ್‌ ಸಹಕಾರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರಿಗೆ ವಿನೂತನ ಕಾರ್ಯಕ್ರಮ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 03-12-2023 ಆದಿತ್ಯವಾರದಂದು ಪುತ್ತೂರಿನ ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಪ್ರಥಮ ವಿನೂತನ ಕಾರ್ಯಕ್ರಮ ಇದಾಗಿದೆ.

    ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಗೋಷ್ಠಿಗಳಿಗೆ ಆಸಕ್ತಿಯುಳ್ಳ ಪುತ್ತೂರು ತಾಲೂಕಿನ ದಿವ್ಯಾಂಗ ಪ್ರತಿಭೆಗಳು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿ. ಕವಿ ಗೋಷ್ಠಿ (ಸ್ವರಚಿತ ಕವನಗಳನ್ನು ವಾಚಿಸಲು ಅವಕಾಶ-12 ಸಾಲುಗಳ ಮಿತಿಯ ಒಳಗೆ ಇರುವ), ಕಥಾ ಗೋಷ್ಠಿ (ಸ್ವರಚಿತ ಕಿರು ಕಥೆಗಳನ್ನು ವಾಚಿಸಲು ಅವಕಾಶ 200-250 ಪದಗಳ ಒಳಗಿರುವ ಒಂದು ಕಿರು ಕಥೆ), ಕನ್ನಡ ಗೀತಗಾಯನ (ಕನ್ನಡ ಭಾವಗೀತೆ ಅಥವಾ ಕನ್ನಡ ಸಿನಿಮಾ ಗೀತೆಗಳನ್ನು ಹಾಡಲು ಅವಕಾಶ-ಕರೋಕೆ ಸಹಿತ ಅಥವಾ ರಹಿತ), ಪ್ರತಿಭಾ ಪ್ರದರ್ಶನ (ನೃತ್ಯ, ಮಿಮಿಕ್ರಿ, ಕೊಳಲು ವಾದನ, ತಬಲ ಅಥವಾ ಇತರ ಯಾವುದೇ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ, ಏಕವ್ಯಕ್ತಿ ಅಥವಾ ತಂಡ – 3 ನಿಮಿಷದ ಕಾಲಾವಕಾಶ) ಮತ್ತು ಮನೋರಂಜನಾ ಆಟೋಟ ಸ್ಪರ್ಧೆ (ಸಂಗೀತ ಕುರ್ಚಿ, ಟೊಪ್ಪಿ ಆಟ, ಚೆಂಡಿನಾಟ ಇತ್ಯಾದಿ ವಿಶೇಷ ಚೇತನರ ಸಾಮರ್ಥ್ಯದ ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ)

    ಆಸಕ್ತರು ದಿನಾಂಕ 29-11-2023ರ ಒಳಗಾಗಿ ತಮ್ಮ ಪುನರ್ವಸತಿ ಕಾರ್ಯಕರ್ತರಲ್ಲಿ ಹೆಸರು ನೋಂದಾಯಿಸಬೇಕಾಗಿ ವಿನಂತಿ. ಪುನರ್ವಸತಿ ಕಾರ್ಯಕರ್ತರು ಹೆಚ್ಚಿನ ಮಾಹಿತಿಗಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ 9844401295 ಅವರನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Article‘ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ’ | ನವೆಂಬರ್ 30
    Next Article ಕಾಸರಗೋಡು ‘ರಂಗ ಚಿನ್ನಾರಿ’ಯಿಂದ ಸುಬ್ರಹ್ಮಣ್ಯ ಬಾಡೂರು ಇವರಿಗೆ ಹುಟ್ಟೂರ ಗೌರವ | ಡಿಸೆಂಬರ್ 1
    roovari

    Add Comment Cancel Reply


    Related Posts

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಬೆಂಗಳೂರು ಅಲಯೆನ್ಸ್ ವಿಶ್ವವಿದ್ಯಾನಿಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ – ವಿಚಾರಗೋಷ್ಠಿ

    July 15, 2026

    ‘ಆರೋಗ್ಯಕ್ಕಾಗಿ ಮುದ್ರೆಗಳು’ ಪುಸ್ತಕ ಬಿಡುಗಡೆ ಸಮಾರಂಭ | ಜುಲೈ 17

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.